ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಗುವಿನೊಂದಿಗೆ ಬಂದು ಎಫ್‌ಡಿಎ ಪರೀಕ್ಷೆ ಬರೆದ ಮಹಿಳೆ!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮಾರ್ಚ್ 01: ಭವಿಷ್ಯದಲ್ಲಿ ಸರ್ಕಾರಿ ಉದ್ಯೋಗದ ಕನಸು ಹೊತ್ತ ಅಭ್ಯರ್ಥಿಗಳು ಭಾನುವಾರ ನಡೆದ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದಿದ್ದಾರೆ. ದಾವಣಗೆರೆಯಲ್ಲಿ ಮಹಿಳೆಯೊಬ್ಬರು ಹಸುಗೂಸಿನ ಜೊತೆ ಬಂದು ಪರೀಕ್ಷೆ ಎದುರಿಸಿದರು.

ಕರ್ನಾಟಕ ಲೋಕಸೇವಾ ಆಯೋಗ ಜನವರಿಯಲ್ಲಿ ಎಫ್‌ಡಿಎ ಪರೀಕ್ಷೆಯನ್ನು ನಡೆಸಬೇಕಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನಲೆಯಲ್ಲಿ ಪರೀಕ್ಷೆಯನ್ನು ಫೆಬ್ರವರಿ 28ಕ್ಕೆ ಮುಂದೂಡಲಾಗಿತ್ತು. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಭಾನುವಾರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ; ಬೆಳಗಾವಿ ಮೂಲದ ಶಿಕ್ಷಕನ ಬಂಧನ ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ; ಬೆಳಗಾವಿ ಮೂಲದ ಶಿಕ್ಷಕನ ಬಂಧನ

ದಾವಣಗೆರೆ ನಗರದ 33 ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಸುಗಮವಾಗಿ ನಡೆದಿದೆ. 11,688 ನೊಂದಾಯಿತ ಪರೀಕ್ಷಾರ್ಥಿಗಳ ಪೈಕಿ ಬೆಳಗ್ಗೆ ನಡೆದ ಸಾಮಾನ್ಯ ಜ್ಞಾನ ಪರೀಕ್ಷೆಗೆ 7,812 ಪರೀಕ್ಷಾರ್ಥಿಗಳು ಹಾಜರಾಗಿದ್ದರು. ಸಾಮಾನ್ಯ ಕನ್ನಡ ಅಥವಾ ಇಂಗ್ಲೀಷ್ ಪರೀಕ್ಷೆಗೆ 7,765 ಮಂದಿ ಹಾಜರಾದರು.

ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ; 10 ಲಕ್ಷಕ್ಕೆ ಮಾರಾಟ! ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ; 10 ಲಕ್ಷಕ್ಕೆ ಮಾರಾಟ!

 Davanagere Woman Write FDA Exam Along With Baby

ಮಹಿಳಾ ಪರೀಕ್ಷಾರ್ಥಿ: ನಗರದ ದೃಶ್ಯಕಲಾ ಮಹಾವಿದ್ಯಾಲಯದ ಬಳಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಭಾನುವಾರ 3 ತಿಂಗಳ ಹಸುಗೂಸಿನೊಂದಿಗೆ ಬಂದು ಬಾಣಂತಿ ಎನ್. ಶ್ವೇತಾ ಪರೀಕ್ಷೆ ಬರೆದರು.

ದಾವಣಗೆರೆ; ಪ್ಲಾಸ್ಮಾ ಫೆರೋಸಿಸ್ ಚಿಕಿತ್ಸೆ, ಮಹಿಳೆಗೆ ಜೀವದಾನ ದಾವಣಗೆರೆ; ಪ್ಲಾಸ್ಮಾ ಫೆರೋಸಿಸ್ ಚಿಕಿತ್ಸೆ, ಮಹಿಳೆಗೆ ಜೀವದಾನ

ಶ್ವೇತಾ ಅವರು ದಾವಣಗೆರೆ ತಾಲೂಕಿನ ತೋಳಹುಣಸೆಯ ಯಲ್ಲಮ್ಮ ನಗರದ ನಿವಾಸಿ. ಮಗುವಿ ಜೊತೆ ಪರೀಕ್ಷಾ ಕೇಂದ್ರಕ್ಕೆ ಬಂದು ಸಂಬಂಧಿ ಮಹಿಳೆ ಕೈಗೆ ಮಗು ನೀಡಿ ಪರೀಕ್ಷೆ ಬರೆದರು. ಪರೀಕ್ಷಾ ಕೇಂದ್ರದ ಹೊರಗೆ ಕುಳಿತಿದ್ದ ಮಹಿಳೆಯ ಮಡಿಲಲ್ಲಿ ಮಗು ನಿದ್ರಿಸುತ್ತಿತ್ತು.

 Davanagere Woman Write FDA Exam Along With Baby

Recommended Video

ಕೈ ಕೊಟ್ಟ ಕೊರೊನಾ ವ್ಯಾಕ್ಸಿನ್‌ ಪೋರ್ಟಲ್‌..! ಸರ್ಕಾರದ ಅವ್ಯವಸ್ಥೆಗೆ ಹಿರಿಯನಾಗರಿಕರ ಬೇಸರ | Oneindia Kannada

ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ್ ನಗರದ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷೆ ಬಗ್ಗೆ ಪರಿಶೀಲನೆ ನಡೆಸಿದರು.

English summary
Davanagere taluk Tolahunse based woman N. Shwetha write FDA exam along with 3 month old baby.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X