ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರೇ... ಹೆಂಡತಿ, ಗಂಡನನ್ನೇ ಯಾಕೆ ಕಿಡ್ನಾಪ್ ಮಾಡಿಸುತಿ?

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ನವೆಂಬರ್ 29: ಮಹಿಳೆಯೊಬ್ಬಳು ಆರು ಮಂದಿ ಯುವಕರ ಜೊತೆ ಸೇರಿ ತನ್ನ ಗಂಡನನ್ನೇ ಕಿಡ್ನಾಪ್ ಮಾಡಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆ ತಾಲೂಕು ಲೋಕಿಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಂಗೀತಾ ಎಂಬಾಕೆ ಈಗ ಹದಡಿ ಪೊಲೀಸರ ಅತಿಥಿಯಾಗಿದ್ದಾಳೆ. ಕಳೆದ ಎರಡು ವರ್ಷಗಳಿಂದ ಪತಿ-ಪತ್ನಿ ದೂರ ಇದ್ದು, ಹಣದ ಆಸೆಗೆ ಈಕೆ ಗಂಡನನ್ನು ಯುವಕರ ಜೊತೆ ಸೇರಿ ಕಿಡ್ನಾಪ್ ಮಾಡಿಸಿದ್ದಾಳೆ.

ದೂರು ಕೊಡಲು ಬಂದವಳೊಂದಿಗೇ ಅಕ್ರಮ ಸಂಬಂಧ; ಪೊಲೀಸ್ ಮೇಲೆ ಕೇಸ್!ದೂರು ಕೊಡಲು ಬಂದವಳೊಂದಿಗೇ ಅಕ್ರಮ ಸಂಬಂಧ; ಪೊಲೀಸ್ ಮೇಲೆ ಕೇಸ್!

ಶ್ರೀನಿವಾಸ್ ಅಪಹರಣಕ್ಕೊಳಗಾಗಿದ್ದ ಪತಿ. ಪತ್ನಿ ಸಂಗೀತಾಳ ನಡವಳಿಕೆ ಸರಿ ಇಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಶ್ರೀನಿವಾಸ್ ಸಂಗೀತಾಳಿಂದ ದೂರವಿದ್ದು, ಜಮೀನು ಹಾಗೂ ಪೆಟ್ರೋಲ್ ಬಂಕ್ ಕೆಲಸ ನೋಡಿಕೊಂಡಿದ್ದರು. ಗಂಡನಿಂದ ದೂರವಿದ್ದ ಸಂಗೀತ ಕೆಲ ದಿನಗಳ ಹಿಂದೆ ಪಿಎಸ್ಐ ಒಬ್ಬರ ಜೊತೆ ಗಲಾಟೆ ಮಾಡಿಕೊಂಡು ವಿಷವನ್ನು ಕುಡಿಸಿದ್ದರು ಎಂದು ಹೇಳಿ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲನ್ನು ಕೂಡ ಏರಿದ್ದರು.

Wife Kidnapper Her Husband In Davanagere For Money

ಡ್ರಾಪ್ ಕೊಡುವುದಾಗಿ ನಂಬಿಸಿ ಅಮಾಯಕರಿಂದ ಸುಲಿಗೆ ಮಾಡುತ್ತಿದ್ದ ಖದೀಮರ ಬಂಧನಡ್ರಾಪ್ ಕೊಡುವುದಾಗಿ ನಂಬಿಸಿ ಅಮಾಯಕರಿಂದ ಸುಲಿಗೆ ಮಾಡುತ್ತಿದ್ದ ಖದೀಮರ ಬಂಧನ

ಆದರೆ ಈಗ ಹಣದ ಅವಶ್ಯಕತೆ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಸಂಗೀತಾ ಹಾಗೂ 6 ಜನ ಸಹಚರರು ಸೇರಿ ಶ್ರೀನಿವಾಸ್​ನನ್ನು​ ಕಿಡ್ನಾಪ್ ಮಾಡಿದ್ದರು. ಮಾಮೂಲಿಯಂತೆ ಶ್ರೀನಿವಾಸ್ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ ಬರುವಾಗ ಶ್ರೀನಿವಾಸ್ ನನ್ನು ಕಿಡ್ನಾಪ್ ಮಾಡಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಹದಡಿ ಪೊಲೀಸರು, ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಗೀತಾ ಹಾಗೂ ಇಬ್ಬರನ್ನು ಬಂಧಿಸಿದ್ದು, ಉಳಿದ ನಾಲ್ವರು ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

English summary
A woman kidnapped her husband along with six youths in Davanagere
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X