ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಲುಮರದ ವೀರಾಚಾರಿ ತಾನೇ ಬೆಳೆಸಿದ ಮರದಲ್ಲಿ ಆತ್ಮಹತ್ಯೆಗೆ ಶರಣಾಗಲು ಕಾರಣ?

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಸೆಪ್ಟೆಂಬರ್ 20: ಅವರಿಗಿದ್ದ ಪರಿಸರ ಕಾಳಜಿ ಅಪಾರ. ತನ್ನ ಸ್ವಂತ ಖರ್ಚಿನಲ್ಲಿಯೇ ಮೂರು ಸಾವಿರಕ್ಕೂ ಹೆಚ್ಚು ಮರಗಳನ್ನು ಬೆಳೆಸಿ ಸಾಲುಮರದ ವೀರಾಚಾರಿ ಎಂದೇ ಖ್ಯಾತಿ ಪಡೆದಿದ್ದವರು. ಇವರ ಪರಿಸರ ಪ್ರೇಮ ಗುರುತಿಸಿ ರಾಜ್ಯ ಸರ್ಕಾರವು ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿತ್ತು. ಪ್ರತಿಯೊಬ್ಬರೂ ಕೂಡಾ ಗೌರವಿಸುತ್ತಿದ್ದರು. ನಿಸ್ವಾರ್ಥ ಸೇವೆಗೆ ಜೈ ಜೈ ಎಂದಿದ್ದರು. ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದ್ದವು. ಆದರೆ, ವಿಪರ್ಯಾಸ ಎಂದರೆ ತಾನೇ ಗಿಡ ನೆಟ್ಟು ನೀರು ಪೋಷಿಸಿ ಬೆಳೆಸಿದ್ದ ಮರಕ್ಕೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಾಲುಮರದ ವೀರಾಚಾರಿ ಚಿತ್ರದುರ್ಗದ ನಂದೀಹಳ್ಳಿಯಲ್ಲಿ ಜನಿಸಿದ್ದರು, ಅವರು 1983ರಲ್ಲಿ ಹರಿಹರ ತಾಲ್ಲೂಕಿನ ಮಿಟ್ಲಕಟ್ಟೆಗೆ ಬಂದು ನೆಲೆಸಿದ್ದರು. ಹೊಟ್ಟೆಪಾಡಿಗಾಗಿ ಕುಲುಮೆ ಕೆಲಸ ಮಾಡುತ್ತಿದ್ದರೂ ಪರಿಸರ ಪ್ರೇಮ ಅವರಲ್ಲಿ ಅಗಾಧವಾಗಿತ್ತು. ಇದೇ ಅವರಲ್ಲಿ ಗಿಡ, ಮರ ಬೆಳೆಸುವ ಗೀಳಾಗಿ ಬೆಳೆದು ಮೂರು ಸಾವಿರಕ್ಕೂ ಹೆಚ್ಚು ಮರಗಳನ್ನು ಬೆಳೆಸಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಿಟ್ಲಕಟ್ಟೆ ಗ್ರಾಮದ ವೀರಾಚಾರಿ ಅವರು 'ಸಾಲುಮರದ ವೀರಾಚಾರಿ ' ಎಂದು ಬಿರುದಾಂಕಿತರಾದವರು.

ತಾವೇ ಬೆಳೆಸಿದ್ದ ಮರದಲ್ಲೆ ನೇಣಿಗೆ ಶರಣಾದ ಪರಿಸರ ಪ್ರೇಮಿ ಸಾಲುಮರದ ವೀರಾಚಾರಿ!ತಾವೇ ಬೆಳೆಸಿದ್ದ ಮರದಲ್ಲೆ ನೇಣಿಗೆ ಶರಣಾದ ಪರಿಸರ ಪ್ರೇಮಿ ಸಾಲುಮರದ ವೀರಾಚಾರಿ!

ಸಾಲು ಮರದ ತಿಮ್ಮಕ್ಕರಂತೆ ಜಿಲ್ಲೆಯ ವಿವಿಧೆಡೆ ಗಿಡಗಳನ್ನು ನೆಟ್ಟು, ಪೋಷಿಸಿ ದೊಡ್ಡದಾಗಿ ಬೆಳೆಸುವ ಮೂಲಕ ತಮ್ಮದೇ ಆದ ಕೊಡುಗೆ ಕೊಟ್ಟಿದ್ದರು. ಪ್ರತಿಯೊಬ್ಬರ ಮನ ಗೆದ್ದಿದ್ದರು. ತನ್ನ ಸ್ವಂತ ಖರ್ಚಿನಲ್ಲಿ ಇಷ್ಟೊಂದು ಮರಗಳನ್ನು ಬೆಳೆಸಿದ್ದು ಅವರಿಗೆ ಉತ್ತಮ ಹೆಸರು ಬರುವಂತೆ ಮಾಡಿತ್ತು.

ಮರ, ಗಿಡಗಳೆಂದರೆ ಪಂಚಪ್ರಾಣ

ಮರ, ಗಿಡಗಳೆಂದರೆ ಪಂಚಪ್ರಾಣ

ಸಮಾಜ ಏನು ಕೊಟ್ಟಿತು ಎಂಬುದಕ್ಕಿಂತ ಸಮಾಜಕ್ಕೇನೂ ಕೊಟ್ಟೆ ಎಂಬ ಮಾತಿನಂತೆ ಬದುಕಿ ಬಾಳಿದ ವೀರಾಚಾರಿ ನೆಟ್ಟಿರುವ ಗಿಡಗಳು ಲೆಕ್ಕಕ್ಕೇ ಸಿಕ್ಕಿದ್ದು 3 ಸಾವಿರ ಮಾತ್ರ. ಇನ್ನು ಹೆಚ್ಚಿನ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಮರ, ಗಿಡಗಳೆಂದರೆ ಅವರಿಗೆ ಪಂಚಪ್ರಾಣ. ಉತ್ತಮ ಪರಿಸರ ಸಿಗಬೇಕು. ಮುಂದಿನ ಪೀಳಿಗೆಗೆ ಉತ್ತಮ ಗಾಳಿ ಸಿಗಬೇಕು ಎಂಬುದು ಅವರ ಆಸೆಯಾಗಿತ್ತು. ಇಂದಿನ ಕಾಂಕ್ರೀಟಿಕರಣದ ದಿನಗಳಲ್ಲಿ ಪರಿಸರ ಉಳಿವಿಗಾಗಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಹೆಸರು ಎಂದಿಗೂ ಅಜರಾಮರ.

 ಪಡಿತರ ವಿತರಣೆ ಅಕ್ರಮದ ವಿರುದ್ಧ ಹೋರಾಟ

ಪಡಿತರ ವಿತರಣೆ ಅಕ್ರಮದ ವಿರುದ್ಧ ಹೋರಾಟ

ಇನ್ನು ಮಿಟ್ಲಕಟ್ಟೆಯಲ್ಲಿ ವಾಸವಿದ್ದ ಸಾಲುಮರದ ವೀರಾಚಾರಿ ಅವರು, ಸಾಕಷ್ಟು ಸೂಕ್ಷ್ಮ ಮನಸ್ಸಿನವರು. ಯಾರಿಗೂ ಕೆಡುಕು ಬಯಸಿದವರಲ್ಲ. ಎಲ್ಲರ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಮಿಟ್ಲಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಡಿತರ ವಿತರಣೆಯಲ್ಲಿ ಅಕ್ರಮ ನಡೆಸಲಾಗುತ್ತಿದೆ ಎಂಬ ವಿಚಾರ ಮುಂದಿಟ್ಟುಕೊಂಡು ಹೋರಾಟವನ್ನು ನಡೆಸುತ್ತಿದ್ದರು. ಈ ಸಂಬಂಧ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಗಮನ ಸೆಳೆದು ಮನವಿಯನ್ನೂ ಅರ್ಪಿಸಿದ್ದರು. ಸರಕಾರದಿಂದ
ಬರುವ ಸೌಲಭ್ಯ ಕಾಳಸಂತೆಕೋರರ ಪಾಲಾಗಬಾರದು. ನಿಜವಾದ ಬಡವರಿಗೆ ಸಿಗಬೇಕು ಎಂಬ ಆಶಯ ಅವರದ್ದಾಗಿತ್ತು. ಈ ನಿಟ್ಟಿನಲ್ಲಿ ಅಕ್ರಮದ ವಿರುದ್ಧ ಹೋರಾಟ ನಡೆಸುತ್ತಿದ್ದರು.

ನ್ಯಾಯ ಸಿಗದೆ ಇದ್ದದ್ದಕ್ಕೆ ಬೇಸತ್ತು ಆತ್ಮಹತ್ಯೆ

ನ್ಯಾಯ ಸಿಗದೆ ಇದ್ದದ್ದಕ್ಕೆ ಬೇಸತ್ತು ಆತ್ಮಹತ್ಯೆ

ಪಡಿತರ ವಿತರಣೆಯಲ್ಲಿ ಬಡವರಿಗೆ ಕಡಿಮೆ ನೀಡಿ ಮೋಸ ಮಾಡಲಾಗುತ್ತಿದೆ ಎಂದು ವೀರಾಚಾರಿ ಅವರು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿರಲಿಲ್ಲ. ಈ ಹಿಂದಿನ ಡಿಸಿ ಅವರಿಗೂ ಮನವಿ ಸಲ್ಲಿಸಿದ್ದರು. ಆದೂ ಅಕ್ರಮ ಮಾತ್ರ ನಿಂತಿರಲಿಲ್ಲ. ಇದೀಗ ಹೋರಾಟಕ್ಕೆ ನ್ಯಾಯ ಸಿಗದೆ ಇದ್ದದ್ದಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ದಂಧೆಕೋರರಿಗೆ ಶಿಕ್ಷೆಯಾಗಬೇಕೆಂದು ಆಗ್ರಹ

ದಂಧೆಕೋರರಿಗೆ ಶಿಕ್ಷೆಯಾಗಬೇಕೆಂದು ಆಗ್ರಹ

ಇನ್ನು ಸಾಲುಮರದ ವೀರಾಚಾರಿ ಅವರು ಸೋಮವಾರ ಮಧ್ಯರಾತ್ರಿ ಮರಕ್ಕೆ ಕೊರಳಡ್ಡಿ ನೇಣುಹಾಕಿದ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು. ಗ್ರಾಮದ ಜನರೆಲ್ಲರೂ ತಂಡೋಪತಂಡವಾಗಿ ಆಗಮಿಸಿದರು. ಈ ವೇಳೆ ಜನರು ಸಹ ವೀರಾಚಾರಿ ಅವರ ಸಾವಿಗೆ ಕಂಬನಿ ಮಿಡಿದರಲ್ಲದೇ, ಆಕ್ರೋಶವನ್ನೂ ಹೊರಹಾಕಿದರು. ನ್ಯಾಯಯುತವಾಗಿ ಬೇಕೇ ಬೇಕು ಪಡಿತರ, ಅಕ್ರಮ ದಂಧೆಕೋರರಿಗೆ ಶಿಕ್ಷೆಯಾಗಬೇಕು, ಸಾಲುಮರದ ವೀರಾಚಾರಿ ಅವರ ಆಶಯ ಈಡೇರಬೇಕು, ಭ್ರಷ್ಟ ವ್ಯವಸ್ಥೆಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು.

ಜನರಿಗೋಸ್ಕರ ಚಿಂತನೆ ನಡೆಸಿದವರೊಬ್ಬರು ಈ ರೀತಿ ಸಾವನ್ನಪ್ಪಿರುವುದರ ಹಿಂದೆ ಯಾವುದಾದರೂ ಕಾಣದ ಕೈ ಕೆಲಸ ಮಾಡಿರಬಹುದಾ? ಯಾರಾದರೂ ಬೆದರಿಕೆ ಹಾಕಿರಬಹುದಾ? ಎಂಬ ನಿಟ್ಟಿನಲ್ಲಿ ತನಿಖೆ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರಿಸಿದ್ದಾರೆ.

English summary
Environmentalist Saalumarada Veerachari allegedly committed suicide over corruption in Public Distribution Shops in Davanagere district. He had pledged that if justice is not delivered on the said issue, he will commit suicide by hanging himself.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X