ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಚ್ಚಿದ ಕೊರೊನಾ ಸೋಂಕು: ಚನ್ನಗಿರಿಯಲ್ಲಿ ಲಾಕ್‌ಡೌನ್

|
Google Oneindia Kannada News

ದಾವಣಗೆರೆ, ಜೂನ್ 23: ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣ ಸಹ ಲಾಕ್‌ಡೌನ್ ಆಗಿದೆ. ಈ ಬಗ್ಗೆ ಚನ್ನಗಿರಿ ಶಾಸಕ ಮಾಡಾಳ್ ವೀರುಪಾಕ್ಷಪ್ಪ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಚನ್ನಗಿರಿಯಲ್ಲಿ ಹನ್ನೊಂದು ಜನರಲ್ಲಿ ಕೊರೊನಾ ಸೋಂಕು ಪಾಸಿಟಿವ್ ದೃಢವಾಗಿದೆ. ಹೀಗಾಗಿ ಆತಂಕ ಹೆಚ್ಚಾಗಿದ್ದು, ಲಾಕ್‌ಡೌನ್ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಸ್ವಯಂ ಪ್ರೇರಿತ ಲಾಕ್ ಡೌನ್ ಮಾಡಿಕೊಳ್ಳಲು ಶಾಸಕರು ಮನವಿ ಮಾಡಿದ್ದಾರೆ.

ದಾವಣಗೆರೆ: ಮದುವೆಗೆ ಹೋದವರ ಎದೆಯಲ್ಲಿ ಈಗ ಢವ ಢವ!ದಾವಣಗೆರೆ: ಮದುವೆಗೆ ಹೋದವರ ಎದೆಯಲ್ಲಿ ಈಗ ಢವ ಢವ!

ಶಾಸಕರ ಮನವಿ ಮೆರೆಗೆ ಮಧ್ಯಾಹ್ನ 12 ಗಂಟೆಯಿಂದ ಅಂಗಡಿಗಳು ಬಂದ್ ಆಗಲಿವೆ. ನಿನ್ನೆ ಶಾಸಕ ಮಾಡಾಳ್ ವೀರುಪಾಕ್ಷಪ್ಪ ಸಂಘ ಸಂಸ್ಥೆಗಳು, ಅಧಿಕಾರಿಗಳು, ಜನಸಾಮಾನ್ಯರ ಸಭೆ ನಡೆಸಿ ಲಾಕ್‌ಡೌನ್ ಬಗ್ಗೆ ತಿಳಿಸಿದ್ದರು.

Voluntary Lockdown Has Been Announced in Channagiri Town

ಹೀಗಾಗಿ, ಲಾಕ್‌ಡೌನ್‌ ಹಿನ್ನಲೆ ಚನ್ನಗಿರಿ ನಗರದ ರಸ್ತೆಗಳು ಬಿಕೋ ಎನ್ನುತ್ತಿವೆ. ಅಧಿಕಾರಿಗಳೊಂದಿಗೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಗರದ ವೀಕ್ಷಣೆ ಮಾಡಿ, ಪರಿಶೀಲನೆ ನಡೆಸಿದ್ದಾರೆ. ಇನ್ನೂ ಹತ್ತು ದಿನದಲ್ಲಿ ತಾಲೂಕಿನಲ್ಲಿ ಕೊರೊನಾ ಪ್ರಕರಣಗಳು ಹತೋಟಿಗೆ ಬರುವ ವಿಸ್ವಾಸ ವ್ಯಕ್ತಪಡಿಸಿದ್ದಾರೆ.

ಕಂಟೇನ್ಮೆಂಟ್ ಜೋನ್‌ನ SSLC ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಕಂಟೇನ್ಮೆಂಟ್ ಜೋನ್‌ನ SSLC ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ

ದಾವಣಗೆರೆಯಲ್ಲಿ ಇಂದು 2 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 267ಕ್ಕೆ ಏರಿಕೆಯಾಗಿದೆ. 226 ಮಂದಿ ಗುಣಮುಖರಾಗಿದ್ದಾರೆ. 34 ಸಕ್ರಿಯ ಪ್ರಕರಣಗಳು ಇವೆ.

English summary
Coronavirus in Davanagere: Voluntary Lockdown Has Been Announced in Channagiri Town.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X