ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯಲ್ಲಿ ವಿಶ್ವಕನ್ನಡ ಸಮ್ಮೇಳನ, ಯಡಿಯೂರಪ್ಪ ಭರವಸೆ ಮಾತು

|
Google Oneindia Kannada News

ದಾವಣಗೆರೆ, ಅ. 6: "ಮೂರನೇ ವಿಶ್ವ ಕನ್ನಡ ಸಮ್ಮೇಳನವನ್ನು ದಾವಣಗೆರೆಯಲ್ಲಿ ನಡೆಸಲು ತಾವು ಕ್ರಮ ಕೈಗೊಳ್ಳುವುದಾಗಿ' ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ. ಈ ಸಮ್ಮೇಳನವನ್ನು ನಗರದಲ್ಲಿ ನಡೆಸುವಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ ಅವರ ನೇತೃತ್ವದ ನಿಯೋಗವು ತಮ್ಮನ್ನು ಭೇಟಿ ಮಾಡಿ ಸಲ್ಲಿಸಿದ ಲಿಖಿತ ಮನವಿ ಪತ್ರವನ್ನು ಸ್ವೀಕರಿಸಿ ಅವರು ಈ ಆಶ್ವಾಸನೆಯನ್ನಿತ್ತರು.

'ಕಳೆದ ತಿಂಗಳಿನಲ್ಲಿ ಕರ್ನಾಟಕದಲ್ಲಿ ಸಂಭವಿಸಿದ ನೆರೆ ಹಾವಳಿಯಿಂದ ಉಂಟಾದ ಆಸ್ತಿ-ಪಾಸ್ತಿ ಹಾನಿಯ ಸಂತ್ರಸ್ತರಿಗೆ ಪರಿಹಾರ ನೀಡಿದ ನಂತರ ಸಮ್ಮೇಳನ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ' ಎಂದು ಇತ್ತೀಚೆಗೆ ಯಡಿಯೂರಪ್ಪ ಅವರು ನಿಯೋಗಕ್ಕೆ ತಿಳಿಸಿದರು.

'2011 ರಲ್ಲಿ ನೀವು ಮುಖ್ಯಮಂತ್ರಿಯಾಗಿದ್ದಾಗ ಬೆಳಗಾವಿಯಲ್ಲಿ ಎರಡನೇ ವಿಶ್ವ ಕನ್ನಡ ಸಮ್ಮೇಳನವನ್ನು ಅರ್ಥಪೂರ್ಣವಾಗಿ ನಡೆಸಿ ಕನ್ನಡದ ಕಂಪನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದಿದ್ದೀರಿ. ಅದೇ ರೀತಿ ಮೂರನೇ ಸಮ್ಮೇಳನವನ್ನೂ ನಿಮ್ಮ ಅವಧಿಯಲ್ಲೇ ಆಗಲಿ' ಎಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ನಿಯೋಗವು ಯಡಿಯೂರಪ್ಪ ಅವರಿಗೆ ನೆನಪು ಮಾಡಿಕೊಟ್ಟು ಆಶಯ ವ್ಯಕ್ತಪಡಿಸಿದೆ.

Vishwa Kannada Sammelana at Davanagere- CM BS Yediyurappa gives assurance

ದಾವಣಗೆರೆ ಕರ್ನಾಟಕದ ಹೃದಯ ಭೂಮಿಯಾಗಿದ್ದು, ಸಾಹಿತ್ಯ - ಸಂಗೀತ - ಜಾನಪದ ಸಂಸ್ಕೃತಿ - ರಂಗಭೂಮಿ ಮತ್ತು ಬಹುಮುಖ ಸಾಂಸ್ಕೃತಿಕ ಪರಂಪರೆ, ಐತಿಹಾಸಿಕ ನೆಲೆವೀಡು ಆಗಿದೆ. ವ್ಯಾಪಾರ -ವಾಣಿಜ್ಯ ಹಾಗೂ ಶೈಕ್ಷಣಿಕ ಕೇಂದ್ರವಾಗಿ ಭಾರತದ ಭೂಪಟದಲ್ಲಿ ವಿಜೃಂಭಿಸುತ್ತಿದೆ. ಸಾಹಿತ್ಯಿಕವಾಗಿ ಶ್ರೀಮಂತ ವಾಗಿದೆ ಎಂದು ಮನವಿ ಪತ್ರದಲ್ಲಿ ವಿವರಿಸಿ, ನಗರದಲ್ಲಿರುವ
ಎಲ್ಲಾ ರೀತಿಯ ಸೌಲಭ್ಯಗಳ ಕುರಿತಂತೆ ನಿಯೋಗವು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದೆ.

ಅಲ್ಲದೇ, ಈ ಹಿಂದಿನ ಸರ್ಕಾರವು ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಕುರಿತಂತೆ ಮಂತ್ರಿಮಂಡಲ ಸಭೆಯಲ್ಲಿ ತೀರ್ಮಾನ ಕೈಗೊಂಡಿರುವುದಲ್ಲದೇ, ಆಯವ್ಯಯ ಪತ್ರದಲ್ಲೂ ಹಣ ಹಂಚಿಕೆ ಮಾಡಿರುವುದನ್ನು ಕಸಾಪ ಅಧ್ಯಕ್ಷ ಕುರ್ಕಿ ಅವರು ಮುಖ್ಯಮಂತ್ರಿಗಳಿಗೆ ವಿವರಿಸಿದ್ದಾರೆ. ಜಿಲ್ಲಾ ಕಸಾಪ ನಿಕಟಪೂ ರ್ವ ಅಧ್ಯಕ್ಷ ಎ.ಆರ್. ಉಜ್ಜನಪ್ಪ, ಗೌರವ ಕಾರ್ಯದರ್ಶಿ ಬಿ.ದಿಳ್ಳೆಪ್ಪ, ಕಾರ್ಯಾಲಯ ಕಾರ್ಯದರ್ಶಿ ಜಿ.ಆರ್. ಷಣ್ಮುಖಪ್ಪ ಮತ್ತಿತರರು ನಿಯೋಗದಲ್ಲಿದ್ದಾರೆ.

ಸಮ್ಮೇಳನಕ್ಕಾಗಿ ಜಿಲ್ಲಾ ಕ್ರೀಡಾಂಗಣ, ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನ, ಬಾಪೂಜಿ ಎಂಬಿಎ ಮೈದಾನ, ತ್ರಿಶೂಲ್ ಕಲಾಭವನ, ತ್ರಿಶೂಲ್ ಕಂಫರ್ಟ್, ಕುವೆಂಪು ಕನ್ನಡ ಭವನ, ಎಸ್.ಎಸ್. ಕಲ್ಯಾಣ ಮಂಟಪ, ಅನುಭವ ಮಂಟಪ, ಮೋತಿ ವೀರಪ್ಪ ಕಾಲೇಜು ಮೈದಾನಗಳನ್ನು ಪರಿಶೀಲಿಸಲಾಗಿದೆ. ಮೂಲ ಸೌಕರ್ಯವುಳ್ಳ ಸೂಕ್ತ ಜಾಗ ಗುರುತಿಸಿ ಪ್ರಾಥಮಿಕ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದರು.

English summary
Third edition of World Conference of Kannadigas or Vishwa Kannada Sammelana- as it is popularly known will likely to be held at Davanagere, CM BS Yediyurappa has governor asssurance said District Kannada sahithya Parishat members.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X