ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರದ ವಿರುದ್ಧ ಆಕ್ರೋಶಗೊಂಡು ವಾಲ್ಮೀಕಿ ಶ್ರೀಗಳು ಕಣ್ಣೀರು ಹಾಕಿದ್ದು ಯಾಕೆ?

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ರಾಜನಹಳ್ಳಿಯಲ್ಲಿನ ವಾಲ್ಮೀಕಿ ಪೀಠದಲ್ಲಿ ವಾಲ್ಮೀಕಿ ಜಾತ್ರೆಯ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಶ್ರೀಗಳು, "ಎಸ್ಸಿ, ಎಸ್ಟಿಗಳ ಮತಗಳು ಬೇಕು. ಆದರೆ ಸೌಲಭ್ಯ ನೀಡುವುದಿಲ್ಲ ಎಂದರೆ ಹೇಗೆ. ಬೇಕಾದಾಗ ಉಪಯೋಗಿಸಿಕೊಂಡು ಆನಂತರ ಕೈಬಿಡುವುದು ಎಷ್ಟರ ಮಟ್ಟಿಗೆ ಸರಿ," ಎಂದು ಪ್ರಶ್ನಿಸಿದ್ದಾರೆ.

"ಹಾನಗಲ್ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ನಮ್ಮ ಸಮುದಾಯದ 18 ಸಾವಿರ ಮತದಾರರು ಬಿಜೆಪಿಗೆ ಬುದ್ದಿ ಕಲಿಸಿದ್ದಾರೆ. ಈ ಸಂದೇಶ ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗಿದೆ. ಮುಂದೆ ವಿಧಾನಸಭೆ ಚುನಾವಣೆ ಬರುತ್ತದೆ. ಆಗ ನಮ್ಮ ಶಕ್ತಿ ಏನೆಂಬುದು ಗೊತ್ತಾಗುತ್ತದೆ. ಕಾದು ನೋಡಲಿ," ಎಂದು ಹೇಳಿದರು.

"ವಾಲ್ಮೀಕಿ ಸಮುದಾಯಕ್ಕೆ ಶೇಕಡಾ 7.5ರಷ್ಟು ಮೀಸಲಾತಿ ನೀಡಬೇಕೆಂಬ ಹೋರಾಟ ಮಾಡುತ್ತಿದ್ದೇವೆ. ಕೇವಲ ಭರವಸೆ ಬಿಟ್ಟರೆ ಬೇರೆ ಏನೂ ಸಿಗುತ್ತಿಲ್ಲ. ಸಮಾಜದ ಜನರೂ ರಾಜ್ಯದ ಮೂಲೆ‌ಮೂಲೆಗಳಿಂದ ಆಗಮಿಸಿ ಹೋರಾಟಕ್ಕೆ ಸಾಥ್ ಕೊಟ್ಟಿದ್ದಾರೆ. ನಾವು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಮೂಗಿಗೆ ತುಪ್ಪ ಸುರಿಯಲಾಗುತ್ತಿದೆ ವಿನಃ ಬೇಡಿಕೆ ಮಾತ್ರ ಈಡೇರುತ್ತಿಲ್ಲ. ನಮ್ಮ ಶಕ್ತಿ ಏನೆಂಬುದನ್ನು ತೋರಿಸಬೇಕಿದೆ," ಎಂದು ಪ್ರಸನ್ನಾನಂದಪುರಿ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Valmiki Swamiji Has Expressed Outrage Against Karnataka Govt For Not Increasing Reservation To ST Community

ವಾಲ್ಮೀಕಿ ಸಮುದಾಯಕ್ಕೆ ಸರ್ಕಾರ ಶೇ.7.5 ಮೀಸಲಾತಿ ನೀಡದ ವಿಚಾರಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿರುವ ವಾಲ್ಮೀಕಿ ಪೀಠಾಧ್ಯಕ್ಷ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು, ಸಿಎಂ‌ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿಕಾರಿದ್ದಾರೆ.

"ಊರಿಗೆ ಬಂದಾಕೆ ನೀರಿಗೆ ಬರಲೇಬೇಕು ಎಂದು ಹೇಳುವ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದ ಶ್ರೀಗಳು, ಚುನಾವಣೆ ಬಂದಾಗ ನಾವು ಬೇಕು. ಆಮೇಲೆ ಬೇಡವೇ?. ಯಡಿಯೂರಪ್ಪ ಸಿಎಂ ಆಗಿದ್ದಾಗ ಶೇಕಡಾ 7.5ರಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿದ್ದರೂ, ಕಾರ್ಯರೂಪಕ್ಕೆ ಬರಲಿಲ್ಲ. ಈಗ ಬಸವರಾಜ ಬೊಮ್ಮಾಯಿರವರೂ ಸಹ ನೆಪವೊಡ್ಡಿ ಮುಂದೂಡುತ್ತಿದ್ದಾರೆ," ಎಂದು ವಾಲ್ಮೀಕಿ ಪೀಠದ ಶ್ರೀಗಳು ಆರೋಪಿಸಿದರು.

Valmiki Swamiji Has Expressed Outrage Against Karnataka Govt For Not Increasing Reservation To ST Community

ಮುಂದಿನ ವರ್ಷ ಫೆ.8, 9ರಂದು ವಾಲ್ಮೀಕಿ ಜಾತ್ರೆ
"ಮುಂದಿನ ವರ್ಷ ನಡೆಯುವ ವಾಲ್ಮೀಕಿ ಜಾತ್ರೆಯನ್ನು ಬೇರೆ ಬೇರೆ ವಿಷಯಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕಿದೆ. ಅದಕ್ಕಾಗಿ ಎಲ್ಲರ ಸಹಕಾರ ಅಗತ್ಯ. ಸಚಿವ ಆನಂದ್ ಸಿಂಗ್ ನೇತೃತ್ವದಲ್ಲಿ ನಿರ್ಮಾಣ ಆಗುತ್ತಿರುವ ರಥವು ಜಾತ್ರೆಯಲ್ಲಿ ಲೋಕಾರ್ಪಣೆ ಮಾಡಲಾಗುವುದು," ಎಂದರು.

"ರೈತರು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನಿಟ್ಟಿನಲ್ಲಿಯೂ ಕೆಲಸ ಮಾಡಬೇಕಿದೆ.‌ ಸಮಾಜದ ಸಂಘಟನೆಗಾಗಿ ಇದುವರೆಗೆ 21 ಲಕ್ಷ ಕಿಲೋಮೀಟರ್ ಪ್ರವಾಸ ಮಾಡಿದ್ದೇವೆ. ನಮ್ಮ ಸಮಾಜ ಮತ್ತಷ್ಟು ಬಲಿಷ್ಠವಾಗಬೇಕಿದೆ. ಜನರಲ್ಲಿ ಮತ್ತಷ್ಟು ಜಾಗೃತಿ ಮೂಡಿಸುವುದೇ ಜಾತ್ರೆಯ ಪ್ರಮುಖ ಉದ್ದೇಶ," ಎಂದು ಶ್ರೀಗಳು ತಿಳಿಸಿದರು.

Valmiki Swamiji Has Expressed Outrage Against Karnataka Govt For Not Increasing Reservation To ST Community

"ಸರ್ಕಾರ ಆನೆ ಇದ್ದ ಹಾಗೆ. ಆನೆ ಪಳಗಿಸಲು ಎಸ್ಸಿ, ಎಸ್ಟಿ ಹಾಗೂ ಹಿಂದುಳಿದವರು ಹೋರಾಟ, ಶಿಕ್ಷಣ ಹಾಗೂ ಸಂಘಟನೆ ಮೂಲಕ ಪಳಗಿಸುವ ಕೆಲಸ ಮಾಡಬೇಕಿದೆ. ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿ ಬಂದ ತಕ್ಷಣ ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದಿದ್ದ ಯಡಿಯೂರಪ್ಪನವರ ಆಶ್ವಾಸನೆ ಇದುವರೆಗೆ ಈಡೇರಿಲ್ಲ. ಆದರೆ ಈಗಿನ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ವರದಿಯನ್ನು ಸುಭಾಷ್ ಅಡಿ ನೇತೃತ್ವದ ಉಪಸಮಿತಿಗೆ ನೀಡಿ ಕಾಲಹರಣ ಮಾಡುತ್ತಿದೆ," ಎಂದು ಆರೋಪಿಸಿದರು.

Recommended Video

ನನಿಗೆ ಅವಮಾನ ಮಾಡಿದವರಿಗೆ ನಾನು ಬುದ್ದಿ ಕಲಿಸುತ್ತೆನೆ! | Oneindia Kannada

"ನಮ್ಮ ಸಮುದಾಯದ ಜನರು ವಾಲ್ಮೀಕಿ ಜಾತ್ರೆಗೆ ಚಾಮರಾಜನಗರ- ಬೀದರ್‌ನಿಂದ ಬರುತ್ತಾರೆ. ದೂರದ ಊರಿನಿಂದ ವಾಹನಗಳನ್ನು ಮಾಡಿಕೊಂಡು ಬಂದಿರುತ್ತಾರೆ. ಯಾರಿಗೂ ಯಾವುದೇ ರೀತಿ ತೊಂದರೆ ಆಗಬಾರದು. ಮುಂದಿನ ವರ್ಷ ಫೆ.8, 9ರಂದು ವಾಲ್ಮೀಕಿ ಜಾತ್ರೆ ನಡೆಯುತ್ತದೆ. ದೂರದ ಊರಿನಿಂದ ಲಕ್ಷಂತಾರ ಜನ ಬಂದಿರುತ್ತಾರೆ. ಅವರು ಬಂದು ನೆಮ್ಮದಿಯಾಗಿ ಊಟ ಮಾಡಬೇಕು. ಜಾತ್ರೆಯಲ್ಲಿ ಪಾಲ್ಗೊಂಡು ಬಳಿಕ ಅವರು ಸುರಕ್ಷಿತವಾಗಿ ಊರು ಸೇರಬೇಕು. ಅವಾಗ ನನಗೆ ನೆಮ್ಮದಿಯಾಗುತ್ತೆ," ಅಂತ ಸ್ವಾಮೀಜಿ ಕಣ್ಣೀರು ಸುರಿಸಿದರು.

English summary
Rajanahalli Valmiki Peetha's Prasannanda puri Swamiji expressed his outrage against state government for not giving 7.5 per cent reservation to the Valmiki community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X