ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ; ಅಕ್ಕ-ತಂಗಿಯನ್ನು ಕೊಂದವ ಸಿಕ್ಕಿದ್ದು ಹೇಗೆ?

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಆಗಸ್ಟ್ 03; ದಾವಣಗೆರೆ ನಗರದ ಹೊರವಲಯದ ಆಂಜನೇಯ ಕಾಟನ್ ಮಿಲ್ ಬಡಾವಣೆಯ ಮನೆಯಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಹಂತಕನ ಹೆಡೆಮುರಿ ಕಟ್ಟಿದ್ದಾರೆ.

ಸಹೋದರಿಯರನ್ನು ಕೊಲೆ ಮಾಡಿದ ಹಂತಕನನ್ನು ಮಂಜುನಾಥ್ ಎಂದು ಗುರುತಿಸಲಾಗಿದೆ. ಕೊಲೆ ಬಳಿಕ ನಗರ ಬಿಟ್ಟು ಪರಾರಿಯಾಗಿದ್ದ ಆರೋಪಿನ್ನು ಪೊಲೀಸರು ಬೆಂಗಳೂರಿನ ಚನ್ನಾಪುರದಲ್ಲಿ ಬಂಧಿಸಿದ್ದಾರೆ. ಆರೋಪಿ ಕೊಲೆಯಾಗಿರುವ ಮಹಿಳೆ ಗೌರಮ್ಮ ಪತಿ.

ದಾವಣಗೆರೆ; ಇಬ್ಬರು ಮಹಿಳೆಯರ ಹತ್ಯೆ, ಕೊಳೆತ ಸ್ಥಿತಿಯಲ್ಲಿ ಪತ್ತೆ ದಾವಣಗೆರೆ; ಇಬ್ಬರು ಮಹಿಳೆಯರ ಹತ್ಯೆ, ಕೊಳೆತ ಸ್ಥಿತಿಯಲ್ಲಿ ಪತ್ತೆ

ಆಂಜನೇಯ ಬಡಾವಣೆಯ ನಿವಾಸಿಗಳಾದ ಗೌರಮ್ಮ (34), ರಾಧಿಕಾ (32) ಶವ ಹತ್ಯೆ ನಡೆದ ಆರು ದಿನಗಳ ಬಳಿಕ ಪತ್ತೆಯಾಗಿತ್ತು. ಮೃತದೇಹಗಳು ಸಂಪೂರ್ಣವಾಗಿ ಕೊಳೆತು ಹೋಗಿದ್ದವು. ಸಹೋದರಿಯರಾಗಿದ್ದ ಗೌರಮ್ಮ ಮತ್ತು ರಾಧಿಕಾ ಆಂಜನೇಯ ಕಾಟನ್ ಮಿಲ್‌ಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ನಾಲ್ಕೈದು ದಿನಗಳಾದರೂ ಇಬ್ಬರು ಮನೆಯಿಂದ ಹೊರ ಬಾರದ ಕಾರಣ ಮನೆಯ ಬಾಗಿಲು ಒಡೆದು ಒಳ ಹೋಗಿ ನೋಡಿದಾಗ ಹತ್ಯೆ ನಡೆದ ಪ್ರಕರಣ ಬೆಳಕಿಗೆ ಬಂದಿತ್ತು.

ಆಟೋ ಚಾಲಕರಿಗೆ 15 ದಿನಗಳ ಡೆಡ್‌ಲೈನ್ ಕೊಟ್ಟಿದ್ಯಾಕೆ ದಾವಣಗೆರೆ ಎಸ್ಪಿ?ಆಟೋ ಚಾಲಕರಿಗೆ 15 ದಿನಗಳ ಡೆಡ್‌ಲೈನ್ ಕೊಟ್ಟಿದ್ಯಾಕೆ ದಾವಣಗೆರೆ ಎಸ್ಪಿ?

Two Women Found Murder In Home Accused Arrested

ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಬೆನಕಹಳ್ಳಿಯವರಾದ ಇಬ್ಬರೂ ಕಳೆದ ಕೆಲ ವರ್ಷಗಳ ಹಿಂದೆಯಷ್ಟೇ ದಾವಣಗೆರೆಗೆ ಬಂದು ನೆಲೆಸಿದ್ದರು. ಗೌರಮ್ಮಳ ಪತಿ ಮಂಜುನಾಥ್ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ. ಇಬ್ಬರ ನಡುವೆ ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ಜಗಳವೂ ನಡೆದಿತ್ತು. ಹಿರಿಯರ ಮುಂದೆ ರಾಜಿ ಪಂಚಾಯಿತಿಯೂ ಆಗಿತ್ತು.

ದಾವಣಗೆರೆ; ಜೋಡೆತ್ತುಗಳ ನಡುವೆ ಯಾವುದೇ ಗೊಂದಲವಿಲ್ಲ! ದಾವಣಗೆರೆ; ಜೋಡೆತ್ತುಗಳ ನಡುವೆ ಯಾವುದೇ ಗೊಂದಲವಿಲ್ಲ!

ಆದರೆ ಗೌರಮ್ಮ ಪತಿಯನ್ನು ಬಿಟ್ಟು ಸಹೋದರಿ ರಾಧಿಕಾ ಅಲಿಯಾಸ್ ರಾಧಮ್ಮಳ ಜೊತೆ ವಾಸವಾಗಿದ್ದಳು. ರಾಧಮ್ಮಳದ್ದು ಡೈವೋರ್ಸ್ ಆದ ಕಾರಣ ಸಹೋದರಿ ಜೊತೆಗೆ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಹತ್ಯೆಯಾದ ದಿನವೇ ಗೌರಮ್ಮ ಪತಿ ಮಂಜುನಾಥ್ ಕೊಲೆ ಆರೋಪಿ ಇರುಬಹುದು ಎಂದು ಶಂಕೆ ವ್ಯಕ್ತವಾಗಿತ್ತು.

ಜೋಡಿ ಕೊಲೆ ನಡೆದಿದ್ದು ಏಕೆ?; ಗೌರಮ್ಮ ಮತ್ತು ಮಂಜುನಾಥ್ ಸಂಬಂಧ ಆರಂಭದಲ್ಲಿ ಚೆನ್ನಾಗಿದ್ದರೂ ಬರಬರುತ್ತಾ ಹದಗೆಟ್ಟಿತ್ತು. ಮಂಜುನಾಥ್ ಪತ್ನಿ ಗೌರಮ್ಮ ನಡತೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ. ಅನೈತಿಕ ಸಂಬಂಧ ಹೊಂದಿದ್ದೀಯಾ ಎಂಬ ವಿಚಾರ ಪ್ರಸ್ತಾಪಿಸಿ ಆಗಾಗ ಗಲಾಟೆ ಮಾಡುತ್ತಿದ್ದ.

ಪತಿಯ ಜೊತೆಗಿನ ಜಗಳದ ಕಾರಣ ಗೌರಮ್ಮ ಸದಾ ಕಿರಿಕಿರಿ ಅನುಭವಿಸುತ್ತಿದ್ದರು. ಕಳೆದ ಹತ್ತು ದಿನಗಳ ಹಿಂದೆ ಮನೆಗೆ ಬಂದಿದ್ದ ಆರೋಪಿ ಮಂಜುನಾಥ್ ತನ್ನ ಪತ್ನಿಯ ಜೊತೆಗೆ ಆಕೆಯ ಸಹೋದರಿಯನ್ನು ಕೊಂದು ಪರಾರಿಯಾಗಿದ್ದ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.

ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟಿರುವ ಆರೋಪಿ ಮಂಜುನಾಥ್ ಸಿಟ್ಟಿನಲ್ಲಿ ಪತ್ನಿ ಹತ್ಯೆ ಮಾಡಿದೆ. ಬಳಿಕ ಆಕೆಯ ಸಹೋದರಿ ಪೊಲೀಸರಿಗೆ ವಿಷಯ ತಿಳಿಸಿದರೆ ಸಿಕ್ಕಿಬೀಳುವ ಭಯದಲ್ಲಿ ಆಕೆಯನ್ನೂ ಹತ್ಯೆ ಮಾಡಿದೆ ಎಂದು ಹೇಳಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗೌರಮ್ಮ ಹಾಗೂ ರಾಧಿಕಾ ಅಕ್ಕ ತಂಗಿಯರು. ಲೋಕಪ್ಪ ಹಾಗೂ ಹಂಪಮ್ಮ ದಂಪತಿಯ ಐವರು ಪುತ್ರಿಯರಲ್ಲಿ ಇಬ್ಬರು. ದಾವಣಗೆರೆಯ ಆಂಜನೇಯ ಕಾಟನ್ ಮಿಲ್‌ನಲ್ಲಿ‌ ಕೂಲಿ ಕೆಲಸ ಮಾಡುತ್ತಿದ್ದರು.

Recommended Video

ಚೀನಾ vs ಅಮೆರಿಕ ಗೆಲುವು ಯಾರಿಗೆ? | Oneindia Kannada

ಸಹೋದರಿಯರ ಶವಗಳು ಪತ್ತೆಯಾದ ದಿನ ಮಾತನಾಡಿದ್ದ ಮೃತರ ಅಕ್ಕನ ಪುತ್ರಿ ಚಂದ್ರಮ್ಮ, "ಕಳೆದ ಶನಿವಾರದಿಂದ ಇಬ್ಬರೂ ಕಂಡಿರಲಿಲ್ಲ. ಎಲ್ಲೋ ಹೊರಗೆ ಹೋಗಿರಬೇಕೆಂದುಕೊಂಡು ಸುಮ್ಮನಾಗಿದ್ದೆ. ಭಾನುವಾರವೂ ಕೆಲಸಕ್ಕೆ ಬಂದಿರಲಿಲ್ಲ. ಮತ್ತೆ ಬುಧವಾರ ಆಂಜನೇಯ ಕಾಟನ್ ಮಿಲ್‌ ಬಡಾವಣೆಗೆ ಬಂದು ಬಾಗಿಲು ಬಡಿದೆ. ಕಿಟಕಿ ಹಾಗೂ ಮನೆ ಬಾಗಿಲು ಸಂಪೂರ್ಣವಾಗಿ ಮುಚ್ಚಿದ್ದರಿಂದ ವಾಪಾಸ್ ಬಂದಿದ್ದೆ. ಆದರೆ ನಿನ್ನೆ ಹೋದಾಗ ಕೆಟ್ಟ ವಾಸನೆ ಬರುತಿತ್ತು‌. ಅಕ್ಕಪಕ್ಕದವರು ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. ಬಳಿಕ ಬಾಗಿಲು ಒಡೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಗೌರಮ್ಮ ಹಾಗೂ ರಾಧಕ್ಕ ಶವ ಪತ್ತೆಯಾಗಿದ್ದು, ಚಿಕ್ಕಪ್ಪ ಇದ್ದರು ಎಂದಷ್ಟೇ ಗೊತ್ತು'' ಎಂದು ಹೇಳಿದ್ದರು.

English summary
Davanagere Vidya Nagar police arrested Manjunath in connection with the murder of two women at their home. Body found in house after 6 days of murder.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X