• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಾವಣಗೆರೆಯಲ್ಲಿ ಎರಡು ನಾಡ ಬಂದೂಕು ವಶ: ಒಬ್ಬನ ಬಂಧನ

By ದಾವವಣಗೆರೆ ಪ್ರತಿನಿಧಿ
|

ದಾವಣಗೆರೆ, ಡಿಸೆಂಬರ್ 2: ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಚಿನ್ನಿಕಟ್ಟೆ ಗ್ರಾಮದ ತಮಿಳು ಕಾಲೊನಿಯ ಕುಮ್ರೇಶ ಎಂಬಾತನ ಮನೆ ಮೇಲೆ ಮಂಗಳವಾರ ದಾಳಿ ಮಾಡಿದ ಪೊಲೀಸರು, ಎರಡು ನಾಡ ಬಂದೂಕು (ಕೋವಿ) ವಶಪಡಿಸಿಕೊಂಡಿದ್ದು, ಈ ಸಂಬಂಧ ಒಬ್ಬನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳು ಕಾಲೊನಿಯ ವೀರಸ್ವಾಮಿ ಅಲಿಯಾಸ್ ವೀರಪ್ಪ (48) ಬಂಧಿತ ಆರೋಪಿ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು, ಎರಡು ನಾಡ ಬಂದೂಕು ಸೇರಿ, ಸ್ಟೀಲ್ ಬಾಲ್ಸ್, ಮೊಳೆಗಳು ಹಾಗೂ ಗನ್ ಪೌಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಕುಮ್ರೇಶ್‌ಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.

ದಾವಣಗೆರೆ ಗ್ರಾಮ ಪಂಚಾಯಿತಿ ಚುನಾವಣೆ ಬಗ್ಗೆ ಡಿಸಿ ಮಾಹಿತಿದಾವಣಗೆರೆ ಗ್ರಾಮ ಪಂಚಾಯಿತಿ ಚುನಾವಣೆ ಬಗ್ಗೆ ಡಿಸಿ ಮಾಹಿತಿ

ಚನ್ನಗಿರಿ ಡಿವೈಎಸ್‌ಪಿ ಪ್ರಶಾಂತ ಜಿ.ಮುನ್ನೋಳಿ ನೇತೃತ್ವದಲ್ಲಿ, ಹೊನ್ನಾಳಿ ಸಿಪಿಐ ವೃತ್ತದ ದೇವರಾಜ ಟಿ.ವಿ, ನ್ಯಾಮತಿ ಎಸ್‌ಐ ಪಿ.ಎಸ್. ರಮೇಶ, ಸಿಬ್ಬಂದಿ ಕೆ. ಮಂಜಪ್ಪ, ಎಚ್.ವಿ. ಹರೀಶ, ಚಂದ್ರಶೇಖರ, ಉಮೇಶ, ಚನ್ನೇಶ, ರಾಮಪ್ಪ, ತಿಮ್ಮರಾಜು, ಆನಂದ ದಾಳಿಯಲ್ಲಿ ಪಾಲ್ಗೊಂಡಿದ್ದರು.

   10 ಕೋಟಿ ಕೊಡ್ತೀನಿ ನನ್ನ ಬಿಡುಗಡೆ ಮಾಡಿ ಅಂತ ಹಟ | Shashikala | Oneindia Kannada

   ಪ್ರಾಣಿಗಳ ಬೇಟೆಗೆ ನಾಡ ಬಂದೂಕು ಬಳಕೆ ಮಾಡುತ್ತಿದ್ದರು. ಮರ, ಇನ್ನಿತರೆ ಸಾಮಗ್ರಿಗಳಿಂದ ಬಂದೂಕುಗಳನ್ನು ತಯಾರಿಸಿ ಪ್ರಾಣಿಗಳ ಬೇಟೆಗೆ ಬಳಸುತ್ತಿದ್ದರು ಎನ್ನಲಾಗಿದೆ. ಪೊಲೀಸರು ಅವುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್.ಪಿ ಹನುಮಂತರಾಯ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

   English summary
   Police on Tuesday raided the home of a Tamil colony Kumresh in Chinnikatte village of Nyamati Taluk in Davanagere district and seized two Nada rifles.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X