ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ; ಸ್ಟಾಫ್‌ನರ್ಸ್‌ ಆತ್ಮಹತ್ಯೆಗೆ ತಿರುವು ಕೊಟ್ಟ ಡೆತ್‌ನೋಟ್

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮೇ 26; ದಾವಣಗೆರೆ ತಾಲೂಕಿನ ಮಾಯಕೊಂಡ ಬಳಿಯ ಹುಚ್ಚವನಹಳ್ಳಿ ಗ್ರಾಮದಲ್ಲಿ ಸ್ಟಾಫ್‌ರ್ಸ್‌ ರಂಗಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಸಾವಿಗೆ ಶರಣಾಗುವ ಮುನ್ನ ಬರೆದಿರುವ ಡೆತ್‌ನೋಟ್ ಕುಟುಂಬದವರಿಗೆ ಸಿಕ್ಕಿದೆ.

ಹುಚ್ಚನಹಳ್ಳಿ ಗ್ರಾಮದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಜಾಸ್ತಿಯಾದ ಕಾರಣ ಕಳೆದ ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದ್ದರು. ಈ ವೇಳೆ ರಂಗಸ್ವಾಮಿ ಖಾಸಗಿಯಾಗಿ ಚಿಕಿತ್ಸೆ ನೀಡುವ ಕುರಿತಂತೆ ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡಿದ್ದರು.‌

ದಾವಣಗೆರೆ; ತಹಶೀಲ್ದಾರ್ ಕಾರ್ಯಕ್ಕೆ ಎಲ್ಲರ ಮೆಚ್ಚುಗೆ ದಾವಣಗೆರೆ; ತಹಶೀಲ್ದಾರ್ ಕಾರ್ಯಕ್ಕೆ ಎಲ್ಲರ ಮೆಚ್ಚುಗೆ

ಸರ್ಕಾರಿ ಉದ್ಯೋಗದಲ್ಲಿದ್ದರೂ ಖಾಸಗಿಯಾಗಿ ಚಿಕಿತ್ಸೆ ನೀಡುತ್ತಿದ್ದರು ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡದಂತೆ ಎಚ್ಚರಿಕೆ ನೀಡಿದ್ದರು. ಕ್ರಮ ಜರುಗಿಸುವುದಾಗಿಯೂ ಎಚ್ಚರಿಕೆ ನೀಡಿದ್ದರು. ಇದರಿಂದ ಹೆದರಿದ ರಂಗಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಾವಣಗೆರೆ; ಕಾಂಗ್ರೆಸ್ ಯುವ ಮುಖಂಡರ ವಿರುದ್ಧ ಎಫ್‌ಐಆರ್ ದಾವಣಗೆರೆ; ಕಾಂಗ್ರೆಸ್ ಯುವ ಮುಖಂಡರ ವಿರುದ್ಧ ಎಫ್‌ಐಆರ್

 Twist To Staff Nurse Suicide Case In Mayakonda

ಡೆತ್‌ನೋಟ್ ಅಲ್ಲಿ ಏನಿದೆ?; "ಎಲ್ಲರೂ ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ಭಾರವಾದ ಮನಸ್ಸಿನಿಂದ ನಿಮ್ಮೆಲ್ಲರನ್ನೂ ಬಿಟ್ಟು ಹೋಗುತ್ತಿದ್ದೇನೆ. ನಿನ್ನೆ ಸಂಜೆ ಆದ ಅವಮಾನದಿಂದ ಘಾಸಿಗೊಂಡಿದ್ದೇನೆ. ನೀವೆಲ್ಲರೂ ನಾನೇನು ಎಂದು ತಿಳಿಸಿಕೊಟ್ಟರೆ ಆತ್ಮಕ್ಕೆ ಶಾಂತಿ ಸಿಗುತ್ತದೆ" ಎಂದು ಬರೆದಿದ್ದಾರೆ.

ದಾವಣಗೆರೆ; ಕೂಲಂಬಿ ಗ್ರಾಮದಲ್ಲಿ 38 ಮಂದಿಗೆ ಕೋವಿಡ್ ಸೋಂಕು ದಾವಣಗೆರೆ; ಕೂಲಂಬಿ ಗ್ರಾಮದಲ್ಲಿ 38 ಮಂದಿಗೆ ಕೋವಿಡ್ ಸೋಂಕು

"ನಾನು ಶಿವಪುರದಲ್ಲಿ ತುಂಬಾ ಖುಷಿಯಾಗಿ ಕೆಲಸ ನಿರ್ವಹಿಸಿಕೊಂಡು ನೆಮ್ಮದಿಯಾಗಿ ಇದ್ದೆ. ಊರಿನ ಜನರಿಗೆ ಸಹಾಯ ಮಾಡಲು ಶ್ರಮಿಸುತ್ತಿದ್ದೆ. ಡಿಸಿ ಸಾಹೇಬರೇ ನಾನು ನಕಲಿ ವೈದ್ಯನಲ್ಲ.‌ ಮೊದಲು ಅದನ್ನು ಅರ್ಥ ಮಾಡಿಕೊಳ್ಳಿ. ನೀವು ನನ್ನ‌ ಮೇಲೆ ಕ್ರಿಮಿನಲ್‌ ಕೇಸ್ ಹಾಕುವುದಲ್ಲ. ನೀವು ನನಗೆ ಸನ್ಮಾನ ಮಾಡಬೇಕಿತ್ತು" ಎಂದು ಹೇಳಿದ್ದಾರೆ.

Recommended Video

ಕೊರೊನದಿಂದ ಚೇತರಿಸಿಕೊಂಡರು ಉಳಿಯಲಿಲ್ಲ ಜೀವ | Oneindia Kannada

"ಏಕೆಂದರೆ Iam covid soldger. ಐಯಾಮ್ ನಾನ್ ಕರೆಪ್ಟ್'' ಎಂದು ಡೆತ್‌ನೋಟ್ ನಲ್ಲಿ ರಂಗಸ್ವಾಮಿ ಬರೆದಿದ್ದಾರೆ. ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Twist to staff nurse Rangaswamy suicide case in Mayakonda, Davanagere. Family members found death note. Case registered in Mayakonda police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X