ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಂಗಾ ಭದ್ರಾ ನೀರಿಗೆ ಕೈ ಹಾಕಿದ್ರೆ ರಕ್ತಪಾತವಾದೀತು ಎಚ್ಚರ!

|
Google Oneindia Kannada News

ಹರಿಹರ, ಜೂನ್ 17: ತುಂಗ ಭದ್ರಾ ನದಿ ನೀರನ್ನು ಬೆಂಗಳೂರಿಗೆ ಹರಿಸಿ, ನಗರವಾಸಿಗಳ ಕುಡಿಯುವ ನೀರಿನ ಬವಣೆ ನೀಗಿಸಲು ಕರ್ನಾಟಕ ಸರ್ಕಾರ ಮುಂದಾಗಿರುವುದು ಗೊತ್ತಿರಬಹುದು. ಆದರೆ, ತುಂಗ ಭದ್ರಾ ನೀರಿಗೆ ಕೈ ಹಾಕಿದ್ರೆ ರಕ್ತಪಾತವಾದೀತು ಎಚ್ಚರ ಎಂದು ಸ್ಥಳೀಯ ಸಂಸದರು ಗುಡುಗಿದ್ದಾರೆ.

ದಾವಣಗೆರೆಯಲ್ಲಿ ಹ್ಯಾಟ್ರಿಕ್ ಬಾರಿಸಿರುವ ಜಿ.ಎಂ.ಸಿದ್ದೇಶ್ವರ ಪರಿಚಯ ದಾವಣಗೆರೆಯಲ್ಲಿ ಹ್ಯಾಟ್ರಿಕ್ ಬಾರಿಸಿರುವ ಜಿ.ಎಂ.ಸಿದ್ದೇಶ್ವರ ಪರಿಚಯ

ಹರಿಹರದ ತರಳಬಾಳು ಶಾಲೆಯಲ್ಲಿ ಮತದಾರರಿಂದ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿಜೆಪಿ ಸಂಸದ ಜಿ.ಎಂ ಸಿದ್ದೇಶ್ವರ, ಈ ಭಾಗದ ಶಿವಮೊಗ್ಗ, ದಾವಣಗರೆ, ಚಿತ್ರದುರ್ಗ ಜಿಲ್ಲೆಯ ರೈತರಿಗೆ ತುಂಗ ಭದ್ರಾ ಜೀವ ನದಿಯಾಗಿದೆ. ಸರಿಯಾಗಿ ಮಳೆ ಬೀಳದೆ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಇಂಥ ಸಂದರ್ಭದಲ್ಲಿ ಸರ್ಕಾರದ ಪ್ರಸ್ತಾವಿತ ಯೋಜನೆ ಸರಿಯಾಗುದ್ದಲ್ಲ. ಇದು ಅವೈಜ್ಞಾನಿಕ ಕ್ರಮ, ಪರಿಸರ ವಿಜ್ಞಾನಿಗಳ ಸಲಹೆ ಪಡೆಯದೆ ಕೇವಲ ನೀರಾವರಿ ತಜ್ಞರ ಅಭಿಪ್ರಾಯ ಪಡೆದು ಯೋಜನೆಯನ್ನು ಕಾರ್ಯಗತ ಗೊಳಿಸಲು ಎಚ್ ಡಿ ಕುಮಾರಸ್ವಾಮಿ ಅವರ ಸರ್ಕಾರ ಮುಂದಾಗಿದೆ ಎಂದರು.

ಬೆಂಗಳೂರಿನ ದಾಹ ತಣಿಸಲು ಶರಾವತಿ, ತುಂಗಾ ಭದ್ರಾ ನೀರುಬೆಂಗಳೂರಿನ ದಾಹ ತಣಿಸಲು ಶರಾವತಿ, ತುಂಗಾ ಭದ್ರಾ ನೀರು

ಸರ್ಕಾರ ತನ್ನ ಹಠಮಾರಿತನವನ್ನು ಮುಂದುವರೆಸಿದರೆ, ಜಿಲ್ಲೆಯ ಸಂಸದರು, ಶಾಸಕರು ರಾಜೀನಾಮೆ ನೀಡಿ ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ. ಲಿಂಗನಮಕ್ಕಿ ಅಣೆಕಟ್ಟಿನಿಂದ ಮೊದಲಿಗೆ ಬೆಂಗಳೂರಿಗೆ ಹರಿಸಲಿ ನೋಡೋಣ ಎಂದರು.

Tunga Bhadra water to Bengaluru: GM Siddeshwara warns HDK Govt

ಕರ್ನಾಟಕ ಸರ್ಕಾರದ 'ಜಲಾಮೃತ' ಯೋಜನೆ ಮುಖ್ಯಾಂಶಗಳು ಕರ್ನಾಟಕ ಸರ್ಕಾರದ 'ಜಲಾಮೃತ' ಯೋಜನೆ ಮುಖ್ಯಾಂಶಗಳು

ಕಳೆದ ಮುಂಗಾರು ಋತುವಿನಲ್ಲಿ 30 ಟಿಎಂಸಿಯಷ್ಟು ಮಳೆ ಕಂಡಿದ್ದ ಈ ಭಾಗ ಈಗ 1 ಟಿಎಂಸಿ ಮಾತ್ರ ಸಂಗ್ರಹವಾಗಿದೆ. ರೈತರಿಗೆ, ನಾಗರಿಕರಿಗೆ ಸಮಸ್ಯೆಯಾಗಿದೆ. ಜಿಲ್ಲೆಯ 2000ಕ್ಕೂ ಅಧಿಕ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದೆ ಈ ಬಗ್ಗೆ ಶೀಘ್ರವೇ ಗಮನ ಹರಿಸಲಾಗುವುದು ಎಂದರು.

English summary
BJP MP GM Siddeshwara has warned HD Kumaraswamy about using Tunga Bhadra water for Bengaluru for drinking water purpose. Don' t dare to do it, otherwise one has t witness bloodshed he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X