• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮದುವೆ ಸಂಭ್ರಮದಲ್ಲಿ ಕೊರೊನಾ ವಾರಿಯರ್ಸ್‍ಗೆ ಗೌರವ

|

ದಾವಣಗೆರೆ, ನವೆಂಬರ್ 20: ಮದುವೆ ಮನೆಯಲ್ಲಿ ಬರೀ ನೆಂಟರು, ಸ್ನೇಹಿತರು, ಆಪ್ತರನ್ನು ಮಾತ್ರ ಆಹ್ವಾನಿಸಲಾಗುತ್ತದೆ. ಆದರೆ ತಮ್ಮ ಮಗಳ ಮದುವೆಯಲ್ಲಿ ಕೊರೊನಾ ವಾರಿಯರ್ಸ್ ಗಳನ್ನೂ ಸಹ ಸ್ವಾಗತಿಸಿ, ಅವರಿಗೆ ಗೌರವ ಸಲ್ಲಿಸುವ ಮೂಲಕವಿಭಿನ್ನವಾಗಿ ಮದುವೆ ಸಂಭ್ರಮ ಆಚರಿಸಲಾಯಿತು.

ಅದ್ಧೂರಿಯಾಗಿ ನಡೆದ ಮದುವೆ, ವಧು-ವರರ ಜೊತೆ ವೇದಿಕೆ ಹಂಚಿಕೊಂಡ ಕೊರೊನಾ ವಾರಿಯರ್ಸ್, ಮದುವೆಗೆ ಆಗಮಿಸಿದ ನೂರಾರು ಬಂಧು-ಬಾಂಧವರು. ಇಂತಹದ್ದೊಂದು ಸನ್ನಿವೇಶ ಕಂಡು ಬಂದಿದ್ದು, ದಾವಣಗೆರೆಯ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ.

ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಸ್ವಾಗತಿಸಿ ಸಂಭ್ರಮಾಚರಣೆ

ಮದುವೆ ಎಂದರೆ ಸಾಕು ಅಲ್ಲಿ ಸಂಭ್ರಮ, ಅರತಕ್ಷತೆ ಕಾಣಿಸುವುದು ಸರ್ವೇ ಸಾಮಾನ್ಯ. ಆದರೆ ದಾವಣಗೆರೆಯ ಮೌನೇಶ್ವರಿ ಬಡಾವಣೆಯ ನಿವಾಸಿ ಶಿಲ್ಪಿ ಸೋಮೇಶ್ ಅವರು ತಮ್ಮ ಮಗಳಾದ ನಿಯತಿ ಅವರ ವಿವಾಹ ವಿಶೇಷತೆಗೆ ಸಾಕ್ಷಿಯಾಯಿತು.

ಕೋವಿಡ್ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಸೇವೆ ಸಲ್ಲಿಸಿದ ಕೊರೊನಾ ವಾರಿಯರ್ಸ್ ಗೆ ಸನ್ಮಾನವನ್ನು ಹಮ್ಮಿಕೊಂಡಿದ್ದರು. ಪೊಲೀಸ್, ವೈದ್ಯಕೀಯ, ಶ್ರಮಿಕ ವರ್ಗ ಹಾಗೂ ಆಶಾ ಕಾರ್ಯಕರ್ತರು ಸೇರಿದಂತೆ 25ಕ್ಕೂ ಹೆಚ್ಚು ಮಂದಿಯನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಅವರನ್ನು ಮದುವೆ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಿದ್ದು ವಿಶೇಷವಾಗಿತ್ತು.

ಮದುವೆಯನ್ನು ಸರಳವಾಗಿ ನಡೆಸಿದ್ದು, ಜನಪ್ರತಿನಿಧಿಗಳು ಹಾಗೂ ವಿವಿಧ ಮಠಾಧೀಶರು ಕೂಡ ಸಾಕ್ಷಿಯಾಗಿದ್ದರು. ಮದುವೆಯನ್ನು ಸಂಬಂಧಿಕರ ಜೊತೆಗೂಡಿ ಆಚರಿಸುವುದು ಸಂಪ್ರದಾಯವಾಗಿದ್ದು, ಜನರ ಜೀವ ಉಳಿಸಲು, ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಕೋವಿಡ್ ಸಮಯದಲ್ಲಿ ಸೇವೆ ಸಲ್ಲಿಸಿದ ಕೊರೊನಾ ವಾರಿಯರ್ಸ್ ಜೊತೆ ಆಚರಿಸಿಕೊಳ್ಳುವುದು ವಿಭಿನ್ನವಾಗಿದೆ.

   Corona ನಿಯಂತ್ರಿಸಲು ಸರ್ಕಾರ ತೆಗೆದುಕೊಂಡ ಕಠಿಣ ನಿರ್ಧಾರ | Oneindia Kannada

   ಅಲ್ಲದೆ ಈ ರೀತಿ ಮದುವೆ ಮಾಡಿಕೊಳ್ಳುವುದು ಸಾಕಷ್ಟು ಸಂತೋಷವಾಗುತ್ತಿದೆ ಎನ್ನುತ್ತಾರೆ ವಧು-ವರರು. ಒಟ್ಟಾರೆಯಾಗಿ ಅದ್ಧೂರಿತನ ಒಳಗೊಂಡು ದುಂದುವೆಚ್ಚ ಮಾಡಿ ಮದುವೆ ಕಾರ್ಯ ಮಾಡುವಂತಹ ಇಂದಿನ ಯುಗದಲ್ಲಿ ಸಾಮಾಜಿಕ ಕಳಕಳಿ ಇಟ್ಟುಕೊಂಡು ಮದುವೆ ಜೊತೆ ಕೊರೊನಾ ವಾರಿಯರ್ಸ್ ಗಳನ್ನು ಸನ್ಮಾನಿಸಿದ್ದು ಶ್ಲಾಘನೀಯವಾಗಿದೆ.

   English summary
   The wedding ceremony in Davanagere was also celebrated differently by welcoming and honoring the Corona Warriors.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X