ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯಲ್ಲಿ ಸಾರಿಗೆ ಬಸ್ ಸಂಚಾರ ಸ್ಥಗಿತ: ಪ್ರಯಾಣಿಕರ ಗೋಳಾಟ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಡಿಸೆಂಬರ್ 11: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಬಸ್ ಸಂಚಾರ ಸ್ಥಗಿತಗೊಳಿಸಿ ಶುಕ್ರವಾರ ಮುಷ್ಕರ ಆರಂಭಿಸಿರುವುದರಿಂದ ದಾವಣಗೆರೆಯಲ್ಲಿ ಪ್ರಯಾಣಿಕರಿಗರಿಗೆ ತೊಂದರೆಯಾಗಿದೆ.

ಹೆರಿಗೆಯಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದಿದ್ದ ಬಾಣಂತಿ ಸೇರಿದಂತೆ ದಾವಣಗೆರೆ ಜಿಲ್ಲೆಯಿಂದ ಬೇರೆಡೆಗೆ ಪ್ರಯಾಣ ಬೆಳೆಸಲು ಹಲವು ಪ್ರಯಾಣಿಕರಿಗೆ ನಗರದ ಕೆ.ಎಸ್‍.ಆರ್‍.ಟಿ.ಸಿ ಬಸ್ ನಿಲ್ದಾಣದಲ್ಲಿ ತೊಂದರೆ ಅನುಭವಿಸಬೇಕಾಯಿತು.

ರಾಮನಗರದಲ್ಲಿ ಬಸ್ ಸಂಚಾರ ಬಂದ್ ಮಾಡಿ ಸಾರಿಗೆ ನೌಕರರ ಪ್ರತಿಭಟನೆರಾಮನಗರದಲ್ಲಿ ಬಸ್ ಸಂಚಾರ ಬಂದ್ ಮಾಡಿ ಸಾರಿಗೆ ನೌಕರರ ಪ್ರತಿಭಟನೆ

ದಾವಣಗೆರೆಯ ಎರಡು ಹಾಗೂ ಹರಿಹರದ ಒಂದು ಡಿಪೋ ಸೇರಿ 164 ಬಸ್ ಗಳಲ್ಲಿ ಬೆಂಗಳೂರು, ಮುದ್ದೇಬಿಹಾಳ್, ಶ್ರೀಶೈಲ ಹಾಗೂ ಹುಬ್ಬಳ್ಳಿಗಳಿಗೆ 4 ಬಸ್ ಗಳು ಮಾತ್ರ ಸಂಚರಿಸಿದವು. ಬೆಳಿಗ್ಗೆ 7 ಗಂಟೆಯ ಬಳಿಕ ಬಸ್ ಗಳ ಸಂಚಾರ ಸ್ಥಗಿತಗೊಂಡಿತು.

ಪಟ್ಟು ಸಡಿಲಿಸುತ್ತಿಲ್ಲ

ಪಟ್ಟು ಸಡಿಲಿಸುತ್ತಿಲ್ಲ

ಚಾಲಕರು ಹಾಗೂ ನಿರ್ವಾಹಕರು ಸೇವೆಯಿಂದ ಹೊರಗುಳಿದು ಬಸ್ ಸಂಚಾರ ಬಂದ್ ಮಾಡಿದರು. ಇದರಿಂದಾಗಿ ಬೇರೆ ಊರಿಗೆ ತೆರಳಲು ಬಂದಿದ್ದ ಪ್ರಯಾಣಿಕರು ಪರದಾಡುವಂತಾಯಿತು.ಬಸ್ ಓಡಿಸುವಂತೆ ಬೆಳಿಗ್ಗೆಯಿಂದಲೇ ಸಾರಿಗೆ ನೌಕರರ ಮನವೊಲಿಸುತ್ತಿದ್ದೇವೆ. ಆದರೆ ಅವರು ಪಟ್ಟು ಸಡಿಲಿಸುತ್ತಿಲ್ಲ' ಎಂದು ಕೆ.ಎಸ್‍.ಆರ್‍.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಹೆಬ್ಬಾಳ್ ತಿಳಿಸಿದರು.

ಪ್ರತಿಭಟನೆ ಮುಂದುವರೆಸುತ್ತೇವೆ

ಪ್ರತಿಭಟನೆ ಮುಂದುವರೆಸುತ್ತೇವೆ

""ನಾಗಮಂಗಲಕ್ಕೆ ಹೋಗಬೇಕಿತ್ತು, ಬೆಳಿಗ್ಗೆಯೇ ಬಸ್ ನಿಲ್ದಾಣಕ್ಕೆ ಬಂದೆವು. ಆದರೆ ಯಾವ ಬಸ್ ಗಳು ಹೋಗುತ್ತಿಲ್ಲ. ಯಾವುದೇ ಸೂಚನೆ ಕೊಡದೇ ಬಸ್ ಸ್ಥಗಿತಗೊಳಿಸಿದರೆ ಎಲ್ಲಿ ಹೋಗುವುದು' ಎಂಬುದು ಹೊನ್ನೇನಹಳ್ಳಿಯ ಹೆಸರು ಹೇಳಲು ಇಚ್ಚಿಸದ ಪ್ರಯಾಣಿಕನ ಪ್ರಶ್ನೆಯಾಗಿತ್ತು.ಪ್ರಮುಖ ಬೇಡಿಕೆಗಳು ಈಡೇರದಿದ್ದರೆ ಪ್ರತಿಭಟನೆ ಮುಂದುವರೆಸುತ್ತೇವೆ. ರಾಜ್ಯ ಸರ್ಕಾರ ಬೇಡಿಕೆ ಈಡೇರಿಸಿದರೆ ಕೆಲಸ ಪುನರಾರಂಭಿಸುತ್ತೇವೆ' ಎಂದು ನೌಕರರ ಸಿಬ್ಬಂದಿಗಳು ಹೇಳಿದರು.

ಖಾಸಗಿ ವಾಹನ ದರ ಏರಿಕೆ

ಖಾಸಗಿ ವಾಹನ ದರ ಏರಿಕೆ

ಸಾರಿಗೆ ನೌಕರರ ಧಿಡೀರ್ ಬಂದ್ ಗೆ ಕರೆಗೆ ನೀಡಿದ ಹಿನ್ನೆಲೆಯಿಂದ ಪ್ರಯಾಣಿಕರಿಂದ ಖಾಸಗಿ ವಾಹನದವರಿಂದ ಡಬಲ್ ರೇಟ್ ಪಡೆಯುತ್ತಿರುವುದು ಕಂಡುಬಂತು. ಖಾಸಗಿ ವಾಹನಗಳಿಗೆ ಚಿತ್ರದುರ್ಗ‍ಕ್ಕೆ ಮೊದಲು 70 ರೂ. ನೀಡುತಿದ್ದ ಪ್ರಯಾಣಿಕರು, ಇಂದು ಕೆ.ಎಸ್‍.ಆರ್‍.ಟಿ.ಸಿ ಬಸ್ ಸಂಚಾರ ಬಂದಾಗಿದ್ದರಿಂದ ದಿಢೀರ್ 100 ರಿಂದ 140 ರೂಪಾಯಿಗೆ ಖಾಸಗಿ ವಾಹನ ದರ ಏರಿಕೆ ಮಾಡಿ ಪ್ರಯಾಣಿಕರಿಂದ ಸುಲಿಗೆ ಮಾಡಿದರು.

ಡಬಲ್ ಹಣ ನೀಡಿದ ಪ್ರಯಾಣಿಕರು

ಡಬಲ್ ಹಣ ನೀಡಿದ ಪ್ರಯಾಣಿಕರು

ಈ ವೇಳೆ ಅನಿವಾರ್ಯವಾಗಿ ಡಬಲ್ ಹಣ ನೀಡಿ ಪ್ರಯಾಣಿಕರು ಪ್ರಯಾಣ ನಡೆಸಿದರು. ಸಾರಿಗೆ ಇಲಾಖೆ ನೌಕರರ ಬಂದ್ ಕರೆ ಹಿನ್ನೆಲೆಯಲ್ಲಿ ಸ್ವತಃ ಅಡುಗೆ ಮಾಡಿ ಊಟ ಮಾಡಿದರು. ನಮ್ಮ ಬೇಡಿಕೆ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವ ತನಕ ಹೋರಾಟದಿಂದ ಹಿಂದಕ್ಕೆ ಸರಿಯಲ್ಲ ಎಂದು ಸಾರಿಗೆ ನೌಕರರು ನಿರ್ಧಾರ ಮಾಡಿದ್ದಾರೆ.

English summary
Drivers and Conductors were out of service and the bus traffic was Bandh in Davanagere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X