ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ: ಟ್ರಾಫಿಕ್ ಪೊಲೀಸ್ ಲಂಚಾವತಾರ ವಿಡಿಯೋದಲ್ಲಿ ಸೆರೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಅಕ್ಟೋಬರ್ 02: ಕೇಂದ್ರ ಸರ್ಕಾರವು ಮೊಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ಸಂಚಾರ ಉಲ್ಲಂಘನೆ ದಂಡ ಪ್ರಮಾಣ ಭಾರಿ ಹೆಚ್ಚಾಗಿ ಸಾರ್ವಜನಿಕರು ತಲೆಮೇಲೆ ಕೈಹೊತ್ತು ಕೂತಿದ್ದರು, ಕೆಲವು ಪೊಲೀಸರು ಇದನ್ನೇ ತಮ್ಮ ಲಂಚಕೋರತನಕ್ಕೆ ದಾರಿ ಮಾಡಿಕೊಂಡಿದ್ದಾರೆ.

ಮೋಟಾರು ವಾಹನ ಕಾಯ್ದೆ ತಿದ್ದುಪಡಿಯ ನಂತರ ಸಂಚಾರಿ ಪೊಲೀಸರ ಲಂಚ ವಸೂಲಿ ಹೆಚ್ಚಾಗಿದೆ ಎಂಬ ದೂರು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಇದಕ್ಕೆ ಸಾಕ್ಷ್ಯ ಎಂಬಂತೆ ಸಂಚಾರಿ ಪೊಲೀಸ್ ಒಬ್ಬರ ಲಂಚಾವತಾರದ ವಿಡಿಯೋ ಹರಿದಾಡುತ್ತಿದೆ.

ದಂಡದ ಹಣ ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದು ಸವಾರನ ನಿಂದಿಸಿದ ಪೇದೆದಂಡದ ಹಣ ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದು ಸವಾರನ ನಿಂದಿಸಿದ ಪೇದೆ

ದಾವಣಗೆರೆ ಬಿಪಿ ರಸ್ತೆಯಲ್ಲಿ ಟ್ರಾಫಿಕ್ ಪೇದೆಯೊಬ್ಬ ದಂಡ ವಸೂಲಿ ಮಾಡುವ ನೆಪದಲ್ಲಿ ಹೆಚ್ಚು ಹಣ ಕೀಳುತ್ತಿದ್ದು, ಸಾರ್ವಜನಿಕರೊಬ್ಬರು ಇದನ್ನು ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

Traffic Police Taking Bribe in Davangere Video Went Viral

ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಸವಾರರಿಂದ ದಂಡದ ಬದಲು 600 ರೂಪಾಯಿ ಹಣವನ್ನು ಮುಖ್ಯ ಪೇದೆಯು ಸವಾರನಿಂದ ಹಣ ವಸೂಲಿ ಮಾಡುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

ವಿಡಿಯೋದಲ್ಲಿ ಲಂಚ ಪಡೆಯುತ್ತಿರುವ ಮುಖ್ಯ ಪೇದೆಯ ಹೆಸರು ರವಿ ಎನ್ನಲಾಗಿದ್ದು, ಈತ ದಕ್ಷಿಣ ಸಂಚಾರಿ ಠಾಣೆಯ ಮುಖ್ಯ ಪೇದೆಯಾಗಿದ್ದಾರೆ.

ಬೆಂಗಳೂರು - ಟ್ರಾಫಿಕ್ ಉಲ್ಲಂಘನೆ: ಬೆಚ್ಚಿಬೀಳಿಸುವ ಸಂಗ್ರಹವಾದ ದಂಡದ ಮೊತ್ತಬೆಂಗಳೂರು - ಟ್ರಾಫಿಕ್ ಉಲ್ಲಂಘನೆ: ಬೆಚ್ಚಿಬೀಳಿಸುವ ಸಂಗ್ರಹವಾದ ದಂಡದ ಮೊತ್ತ

ವಿಡಿಯೋದಲ್ಲಿ ದಾಖಲಾಗಿರುವಂತೆ, ಸವಾರರಿಂದ ಹಣ ವಸೂಲಿ ಮಾಡಿ ಜೇಬಿಗೆ ಇಳಿಸಿಕೊಳ್ಳುತ್ತಿರುವ ಮುಖ್ಯ ಪೇದೆ ರವಿ, ಇನ್ನು ಹಣ ಕೊಡುವಂತೆ, ಪರ್ಸ್ ಚಕ್ ಮಾಡು ಎಂದು ಪೀಡಿಸುತ್ತಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಚಾರಿ ಪೊಲೀಸರ ಲಂಚಗುಳಿತನಕ್ಕೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.

English summary
A Traffic police taking bribe from a vehicle driver video went viral. Saying that that cop is working in Davangere south traffic police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X