ಕೊಟ್ಟೂರು ಹಬ್ಬ; ಮೂರು ದಿನ ವಿಶೇಷ ರೈಲು ಸಂಚಾರ
ದಾವಣಗೆರೆ, ಮಾರ್ಚ್ 03: ಕೊಟ್ಟೂರು ಹಬ್ಬದ ಹಿನ್ನಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ವಿಶೇಷ ರೈಲನ್ನು ಓಡಿಸಲಿದೆ. ಮಾರ್ಚ್ 6ರಿಂದ 8ರ ತನಕ ಈ ರೈಲುಗಳು ಸಂಚಾರ ನಡೆಸಲಿವೆ.
ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಲಯ ಹೊಸಪೇಟೆ-ದಾವಣಗೆರೆ-ಹೊಸಪೇಟೆ ನಡುವೆ ವಿಶೇಷ ರೈಲನ್ನು ಓಡಿಸಲಿದೆ. ಮುಂಗಡ ಟಿಕೆಟ್ ಕಾಯ್ದಿರಿಸದೇ ಈ ರೈಲಿನಲ್ಲಿ ಜನರು ಸಂಚಾರ ನಡೆಸಬಹುದಾಗಿದೆ.
ಕೋವಿಡ್ ಪರಿಸ್ಥಿತಿ; ಕೊಟ್ಟೂರು ಶ್ರೀ ಗುರು ಕೊಟ್ಟೂರೇಶ್ವರ ಜಾತ್ರೆ ರದ್ದು
ಮಾರ್ಚ್ 6 ರಿಂದ 8ರ ತನಕ ಮೂರು ದಿನಗಳು ಮಾತ್ರ ರೈಲು ಸಂಖ್ಯೆ 07333/07334 ಹೊಸಪೇಟೆ-ದಾವಣಗೆರೆ-ಹೊಸಪೇಟೆ ನಡುವೆ ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗಂಗಾವತಿಯಿಂದ ಅಕ್ಕಿ ಸಾಗಾಣೆಗೆ ಪ್ರತ್ಯೇಕ ರೈಲು ಮಾರ್ಗ
ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಫೆಬ್ರವರಿ 21ರಂದು ವಿಶೇಷ ರೈಲುಗಳನ್ನು ಓಡಿಸಬೇಕು ಎಂದು ರೈಲ್ವೆ ಇಲಾಖೆಗೆ ಪತ್ರವನ್ನು ಬರೆದಿದ್ದರು. ಈ ಪತ್ರದ ಅನ್ವಯ ವಿಶೇಷ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ.
ಸರ್ಕಾರಿ ಕಡತಗಳಲ್ಲಿ ವಿಜಯನಗರ ಜಿಲ್ಲೆ ಬಳಕೆಗೆ ಸೂಚನೆ
ಕೊಟ್ಟೂರು ಪಟ್ಟಣದಲ್ಲಿ ನಡೆಯುವ ಶ್ರೀ ಗುರು ಕೊಟ್ಟೂರೇಶ್ವರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ಮಾರ್ಚ್ 7ರಂದು ರಥೋತ್ಸವ ನಡೆಯಲಿದೆ. ಸಂಪ್ರದಾಯಿಕ ಪೂಜೆಯ ಆಚರಣೆಗೆ ಮಾತ್ರ ಅವಕಾಶ ನೀಡಲಾಗಿದೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರೇಶ್ವರ ರಥೋತ್ಸವ ರದ್ದು ಮಾಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಂಜುನಾಥ ಹೇಳಿದ್ದಾರೆ. ರಥೋತ್ಸವದಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತಾದಿಗಳು ಆಗಮಿಸುತ್ತಿದ್ದರು.
ಈ ಬಾರಿ ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ರಥೋತ್ಸವಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಸಂಪ್ರದಾಯಿಕ ಪೂಜೆಗಳನ್ನು ಮಾತ್ರ ದೇವಾಲಯದಲ್ಲಿ ನಡೆಸಲು ಅವಕಾಶವನ್ನು ನೀಡಲಾಗಿದೆ.
ರೈಲಿನ ವೇಳಾಪಟ್ಟಿ
ಕೊಟ್ಟೂರು ಹಬ್ಬದ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆಯು 06.03.2021ರಿಂದ 08.03.2021ರವರೆಗೆ ಮೂರು ದಿನಗಳ ಮಟ್ಟಿಗೆ ರೈ. ಸಂ. 07333/07334 ಹೊಸಪೇಟೆ-ದಾವಣಗೆರೆ-ಹೊಸಪೇಟೆ ಆರಕ್ಷಣಾರಹಿತ ವಿಶೇಷ ರೈಲನ್ನು ಓಡಿಸಲಿದೆ. #Hosapete #Davangere #Kottur #SWRRLYTrainupdates pic.twitter.com/4kiQq6uZ1l
— DRM Hubballi (@drmubl) March 3, 2021