ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ; ಗಲಾಟೆ, ಶ್ರೀ ಸೇವಾಲಾಲ್ ದೇವಾಲಯ ಧ್ವಂಸ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಫೆಬ್ರವರಿ 17; ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅರೇಹಳ್ಳಿ ಗೋಮಾಳದಲ್ಲಿ ನಿರ್ಮಾಣವಾಗಬೇಕಿದ್ದ ದೇವಾಲಯದ ವಿಚಾರದಲ್ಲಿ ಗಲಾಟೆ ನಡೆದಿದೆ. ಈ ವೇಳೆ ದೇವಾಲಯವನ್ನು ಧ್ವಂಸ ಮಾಡಲಾಗಿದ್ದು, ಪೊಲೀಸರು ಶಾಂತಿ ಸಭೆ ಮಾಡಿದ್ದಾರೆ.

ಗೋಮಾಳದಲ್ಲಿ ಶ್ರೀ ಕುಕ್ಕುವಾಡೇಶ್ವರಿ ದೇವಿಯ ದೇವಸ್ಥಾನವಿದೆ. ಅದರ ಪಕ್ಕದಲ್ಲಿನ ಸ್ಥಳದಲ್ಲಿ ಶ್ರೀ ಸೇವಾಲಾಲ್ ಸಂತರ ದೇವಾಲಯ ನಿರ್ಮಾಣದ ಕನಸನ್ನು ಲಂಬಾಣಿ ಸಮುದಾಯದ ಜನರು ಕಂಡಿದ್ದರು. ಸುಮಾರು 20 ವರ್ಷದ ಹಿಂದೆಯೇ ಇಲ್ಲಿ ದೇವಾಲಯ ನಿರ್ಮಾಣಕ್ಕೆ ಅಡಿಪಾಯ ತೆಗೆದು, ಶ್ರೀ ಸೇವಾಲಾಲ್ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು ಹಾಗೂ ಪೂಜಾ ಕೈಂಕರ್ಯ ನಡೆಸಲಾಗುತ್ತಿತ್ತು.

ಹೊನ್ನಾವರ: ಶ್ರೀಧರರು ಭೇಟಿ ನೀಡಿದ್ದ ಶ್ರೀಕ್ಷೇತ್ರ ಧನ್ವಂತರೀ ಮಹಾವಿಷ್ಣು ದೇವಾಲಯಹೊನ್ನಾವರ: ಶ್ರೀಧರರು ಭೇಟಿ ನೀಡಿದ್ದ ಶ್ರೀಕ್ಷೇತ್ರ ಧನ್ವಂತರೀ ಮಹಾವಿಷ್ಣು ದೇವಾಲಯ

ಫೆಬ್ರವರಿ 14ರ ಸಂತ ಸೇವಾಲಾಲ್‌ರ ಜಯಂತಿ ಆಚರಣೆಯನ್ನು ಸಹ ಈ ಸ್ಥಳದಲ್ಲಿ ಆಚರಿಸಿದ್ದರು. ಇದೀಗ ಲಂಬಾಣಿ ಸಮುದಾಯದ ಯುವಕರು ದೇವಾಲಯದ ಮುಂದೆ ಮಣ್ಣು ಹಾಕಿ ಸಮತಟ್ಟು ಮಾಡಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅನ್ಯ ಕೋಮಿನವರು ದೇವಾಲಯ ಧ್ವಂಸಗೊಳಿಸಿದ ಘಟನೆ ನಡೆದಿದೆ.

11 ತಿಂಗಳ ಬಳಿಕ ತೆರೆದ ನಂಜುಂಡೇಶ್ವರ ದಾಸೋಹ ಭವನ 11 ತಿಂಗಳ ಬಳಿಕ ತೆರೆದ ನಂಜುಂಡೇಶ್ವರ ದಾಸೋಹ ಭವನ

Davanagere Tension Prevails In Channagiri Village After Temple Demolished

ಗೋಮಾಳ ಜಾಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಸಂತ ಸೇವಾಲಾಲ್‌ ದೇವಾಲಯದ ಅಡಿಪಾಯವನ್ನು ಕೆಡವಿಹಾಕಿದ್ದರಿಂದ ಬಂಜಾರ ಹಾಗೂ ಇನ್ನಿತರ ಸಮುದಾಯಗಳ ನಡುವೆ ಘರ್ಷಣೆ ನಡೆದಿದೆ. ಇದರಿಂದಾಗಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್ ಮಾಡಲಾಗಿದೆ.

 ಧ್ವಂಸಗೊಂಡಿದ್ದ ಹಿಂದೂ ದೇವಾಲಯ ಪುನರ್ ನಿರ್ಮಾಣಕ್ಕೆ ಪಾಕಿಸ್ತಾನದ ಸುಪ್ರೀಂಕೋರ್ಟ್ ಆದೇಶ ಧ್ವಂಸಗೊಂಡಿದ್ದ ಹಿಂದೂ ದೇವಾಲಯ ಪುನರ್ ನಿರ್ಮಾಣಕ್ಕೆ ಪಾಕಿಸ್ತಾನದ ಸುಪ್ರೀಂಕೋರ್ಟ್ ಆದೇಶ

ಸೇವಾಲಾಲ್‌ ದೇವಾಲಯದ ಅಡಿಪಾಯವನ್ನು ಒಂದು ಗುಂಪಿನವರು ಕೆಡವಿ ಹಾಕಿದ್ದು, ಗರ್ಭಗಡಿಯಲ್ಲಿ ಕಸದ ತೊಟ್ಟಿ ಇಟ್ಟು ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿದೆ. ಸಂತ ಸೇವಾಲಾಲ್ ಭಕ್ತರು ಈ ಜಾಗದಲ್ಲಿ ಪ್ರತಿಮೆ ಸೃಷ್ಟಿಸಿ ಅರಿಶಿಣ ಕುಂಕುಮ ಲೇಪಿಸಿ ಪೂಜೆ ಸಲ್ಲಿಸಿದ್ದಾರೆ. ಅಲ್ಲಿ ಪೂಜೆ ಮಾಡುತ್ತಿದ್ದೇವೆಯೇ ಹೊರತು ಕಟ್ಟಡ ನಿರ್ಮಿಸುತ್ತಿರಲಿಲ್ಲ ಎಂಬುದು ಸೇವಾಲಾಲರ ಭಕ್ತರ ವಾದ.

ಶಾಂತಿ ಸಭೆ; ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಡಿವೈಎಸ್‌ಪಿ ಪ್ರಶಾಂತ್ ಮನ್ನೋಳಿ, ಸಿಪಿಐ ಆರ್. ಆರ್. ಪಾಟೀಲ್, ಚನ್ನಗಿರಿ ತಹಶೀಲ್ದಾರ್‌ ಎನ್. ‌ಜೆ. ನಾಗರಾಜ್‌ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.

ಜಾತಿ ನಿಂದನೆ ಹಾಗೂ ದೇವಾಲಯ ಕೆಡವಿದ ಆರೋಪದಡಿ 16 ಜನರ ವಿರುದ್ಧ ಬಸವಾಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಗ್ರಾಮದಲ್ಲಿ ಸಿಪಿಐ ಆರ್. ಆರ್. ಪಾಟೀಲ್ ನೇತೃತ್ವದಲ್ಲಿ 10 ಮಂದಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.

ಪೊಲೀಸರು ಶಾಂತಿ ಸಭೆ ನಡೆಸಿದ್ದು, ಸಭೆಯಲ್ಲಿ ರೈತ ಮುಖಂಡ ತೇಜಸ್ವಿ ಪಟೇಲ್‌ ಮಾತನಾಡಿ, "ಗ್ರಾಮದವರೆಲ್ಲರೂ ಸೇರಿಕೊಂಡು ಜಾತ್ಯತೀತವಾಗಿ ಸಂತ ಸೇವಾಲಾಲ್ ದೇವಸ್ಥಾನ ನಿರ್ಮಿಸಲು ಸಹಾಯ ಮಾಡಬೇಕು" ಎಂದು ಮನವಿ ಮಾಡಿದರು.

English summary
Communal tension at Arehalli village of Channagiri taluk, Davanagere district after under construction Sant sevalala temple demolished.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X