ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ; ತಹಶೀಲ್ದಾರ್ ಕಾರ್ಯಕ್ಕೆ ಎಲ್ಲರ ಮೆಚ್ಚುಗೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮೇ 24; ಹನ್ನೆರಡು ದಿನದ ಹಸುಗೂಸು ಹೊತ್ತು ತಾಯಿ ಎರಡು ಕಿಲೋಮೀಟರ್ ನಡೆದುಕೊಂಡು ಬಂದ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ. ಪರಿಸ್ಥಿತಿ ಅರ್ಥ ಮಾಡಿಕೊಂಡ ತಹಶೀಲ್ದಾರ್ ತಮ್ಮ ವಾಹನದಲ್ಲಿ ಮನೆಗೆ ಕಳಿಸಿಕೊಟ್ಟು ಎಲ್ಲರ ಮೆಚ್ಚುಗೆಗಳಿಸಿದ್ದಾರೆ.

ಕೊರೊನಾ ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ದಾವಣಗೆಯನ್ನು ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ. ವಾಹನಗಳ ಓಡಾಟಕ್ಕೆ ನಿಷೇಧ ಹೇರಲಾಗಿದೆ‌. ಇದು ಕೆಲವರಿಗೆ ಸಮಸ್ಯೆಯನ್ನು ತಂದೊಡ್ಡಿದೆ.

ಮೇ 31ರ ತನಕ ದಾವಣಗೆರೆ ಸಂಪೂರ್ಣ ಲಾಕ್‌ಡೌನ್ ಮೇ 31ರ ತನಕ ದಾವಣಗೆರೆ ಸಂಪೂರ್ಣ ಲಾಕ್‌ಡೌನ್

ಚಾಮರಾಜಪೇಟೆಯಲ್ಲಿನ ಹೆರಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮಹಿಳೆ ತನ್ನ ಮಗುವಿನೊಂದಿಗೆ ಬಾಷಾ ನಗರಕ್ಕೆ ಹೋಗಲು ಆಟೋಗಾಗಿ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ವಾಹನ ಸಿಕ್ಕಿಲ್ಲ. ಹೀಗಾಗಿ ಅನಿವಾರ್ಯವಾಗಿ ನಡೆದುಕೊಂಡೇ ಬರುತ್ತಿದ್ದರು.

ದಾವಣಗೆರೆ; ಕಾಂಗ್ರೆಸ್ ಯುವ ಮುಖಂಡರ ವಿರುದ್ಧ ಎಫ್‌ಐಆರ್ ದಾವಣಗೆರೆ; ಕಾಂಗ್ರೆಸ್ ಯುವ ಮುಖಂಡರ ವಿರುದ್ಧ ಎಫ್‌ಐಆರ್

Tahsildar Helps Mother And Baby To Reach Home

ಈ ವೇಳೆ ವಾಹನ ತಪಾಸಣೆಗೆ ಮಹಾತ್ಮಾಗಾಂಧಿ ರಸ್ತೆಯಲ್ಲಿದ್ದ ದಾವಣಗೆರೆ ತಹಶೀಲ್ದಾರ್ ಗಿರೀಶ್ ಮಹಿಳೆ ಹಾಗೂ ಮತ್ತಾಕೆಯ ಸಂಬಂಧಿಕರನ್ನು ವಿಚಾರಿಸಿದ್ದಾರೆ. ವಾಹನ ಸಿಗದ ಕಾರಣ ಎರಡು ಕಿಲೋಮೀಟರ್ ಹಸುಗೂಸು ಹೊತ್ತು ಬಂದಿರುವುದಾಗಿ ತಿಳಿಸಿದ್ದಾರೆ.

ತಾಯಿ-ಮಗುವನ್ನು ನೋಡಿದ ತಹಶೀಲ್ದಾರ್ ತನ್ನ ಕಾರು ಚಾಲಕನಿಗೆ ತಾಯಿ ಮತ್ತು ಮಗು ಅನ್ನು ಸುರಕ್ಷಿತವಾಗಿ ಬಿಟ್ಟು ಬರುವಂತೆ ಹೇಳಿ ಕಳುಹಿಸಿದರು. ಗಿರೀಶ್ ಮಾನವೀಯ ಕಾರ್ಯಕ್ಕೆ ಜನರು ಮೆಚ್ಚುಗೆ ಸೂಚಿಸಿದ್ದಾರೆ.

Recommended Video

Ramesh jaarkiholi ಲೈಂಗಿಕ ಪ್ರಕರಣಕ್ಕೆ ಹೊಸ ಟ್ವಿಸ್ಟ್! | Ramesh Jarkiholi | Oneindia Kannada

ಆಟೋ ಸಿಗದೇ ಬಿಸಿಲಿನಲ್ಲಿ ತಾಯಿ, ಮಗು ನಡೆದುಕೊಂಡು ಹೋಗುತ್ತಿದ್ದ ಪರಿಸ್ಥಿತಿ ಅರ್ಥ ಮಾಡಿಕೊಂಡ ತಹಶೀಲ್ದಾರ್ ತಮ್ಮ ಕಾರಿನಲ್ಲಿ ತಾಯಿ, ಮಗುವನ್ನು ಸುರಕ್ಷಿತವಾಗಿ ಮನೆ ಸೇರಿಸಿದ್ದಾರೆ.

English summary
Davanagere tahsildar Girish help the mother and new born baby to reach home. Mother in trouble after no auto found to reach home from hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X