ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇಕೆದಾಟು ಸಂಬಂಧ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿಲ್ಲ: ಸಿಎಂ ಬೊಮ್ಮಾಯಿ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜೂನ್ 16: ಮೇಕೆದಾಟು ಯೋಜನೆ ಜಾರಿ ವಿಚಾರ ಸಂಬಂಧ ಎಲ್ಲದ್ದಕ್ಕೂ ಉತ್ತರ ಕೊಡುವ ಅವಶ್ಯಕತೆ ಇಲ್ಲ.‌ ಸುಪ್ರೀಂಕೋರ್ಟ್ ಯಾವುದೇ ತಡೆಯಾಜ್ಞೆ ನೀಡಿಲ್ಲ. ಈಗಾಗಲೇ ಸಿಡಬ್ಲ್ಯೂ ಸಹ ಹೇಳಿದೆ. ಈ ಕುರಿತು 15 ಮೀಟಿಂಗ್ ನಡೆದಿದೆ ,ಈ ಪ್ರಕಾರ ಮುಂದಿನ ವಾರವೂ ಸಭೆ ಕರೆಯುವ ಸಾಧ್ಯತೆ ಇದೆ ಎಂದು‌ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

ನಗರದ ಜಿಎಂಐಟಿಯಲ್ಲಿ‌‌ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮೇಕೆದಾಟು ವಿಚಾರ ಸಂಬಂಧ ಈಗಾಗಲೇ‌ ನಮ್ಮ ವಾದವನ್ನು ಮಂಡಿಸಿದ್ದೇವೆ. ಡಿಪಿಆರ್ ಗೆ ಒಪ್ಪಿಗೆ ಸಿಗಲಿದೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.

ಮೇಕೆದಾಟು ಯೋಜನೆ: 'ತಮಿಳುನಾಡು ಕ್ಯಾತೆ ರಾಜಕೀಯ ಸ್ಟಂಟ್' ಎಂದ ಸಿಎಂ ಬೊಮ್ಮಾಯಿಮೇಕೆದಾಟು ಯೋಜನೆ: 'ತಮಿಳುನಾಡು ಕ್ಯಾತೆ ರಾಜಕೀಯ ಸ್ಟಂಟ್' ಎಂದ ಸಿಎಂ ಬೊಮ್ಮಾಯಿ

ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಯಾವಾಗ ಎಂದು ಕೇಳಿದ್ದಕ್ಕೆ , ಪ್ರಕಿಯೆ ನಡೆಯುತ್ತಿದೆ, ಮೊದಲನೇ ಹಂತದಲ್ಲಿ ಬಿಬಿಎಂಪಿ ಚುನಾವಣೆ ನಡೆಯಲಿದೆ. ಆ ನಂತರ ಬಳಿಕ ಮೀಸಲಾತಿ ಪಟ್ಟಿ ತಯಾರಿಸಿ ವರದಿ ನೀಡಲಾಗುತ್ತದೆ‌. ಆ ವರದಿ ಆಧಾರಿಸಿ ರಾಜ್ಯದ ಮೀಸಲಾತಿ ಮಾಡಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸಲಾಗುವುದು ಎಂದು ಹೇಳಿದರು.

Supreme Court Not Issued Injunction Order to Mekedatu Project: CM Basavaraj Bommai

ಕಾಂಗ್ರೆಸ್ ನವರು ಕಾನೂನುಬಾಹಿರ ಭ್ರಷ್ಟಾಚಾರ ಕೇಸ್ ವಿರುದ್ಧ ಹೋರಾಟ ಮಾಡಲು ಹೊರಟಿರುವುದು ಕಾಂಗ್ರೆಸ್‌ನ ದುರಂತ. ಈ ರೀತಿ ಮಾಡಿದರೆ ಕಾಂಗ್ರೆಸ್ ನವರೇ ಮನೆ ಮನೆ ಚಲೋ ನಡೆಸುವಂತೆ ಜನರು ಮಾಡುತ್ತಾರೆ ಎಂದು ಕಾಂಗ್ರೆಸ್ ಚಲೋ ಬಗ್ಗೆ ವ್ಯಂಗ್ಯವಾಡಿದರು.

ಮೇಕೆದಾಟು ಯೋಜನೆ: ನಾಡಿನ ರಾಜಕಾರಣಿಗಳು ಮಾಡಿರುವ 7 ತಪ್ಪುಗಳು!ಮೇಕೆದಾಟು ಯೋಜನೆ: ನಾಡಿನ ರಾಜಕಾರಣಿಗಳು ಮಾಡಿರುವ 7 ತಪ್ಪುಗಳು!

ಸಾಹಿತಿಗಳ ಸಲಹೆ ಸ್ವೀಕರಿಸುತ್ತೇವೆ

ತೀರ್ಥಹಳ್ಳಿ ಪಾದಯಾತ್ರೆ ಬಗ್ಗೆ ಮಾತನಾಡಿ, ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧ ಸಾಹಿತಿಗಳು ತೀರ್ಥಹಳ್ಳಿಯ ಕುಪ್ಪಳ್ಳಿಯಿಂದ ಪಾದಯಾತ್ರೆ ಆರಂಭಿಸಿರುವ ವಿಚಾರ ಕುರಿತಂತೆ ಈಗಾಗಲೇ ಸಚಿವ ನಾಗೇಶ್ ಅವರಿಗೆ ಹೇಳಿದ್ದೇನೆ. ಯಾವ್ಯಾವ ಪಠ್ಯ ಸರಿಪಡಿಸಬೇಕು, ಸಾಹಿತಿಗಳು ಏನೇ ಸಲಹೆ ಕೊಟ್ಟರೂ ಸಹ ಪರಿಗಣನೆಗೆ ತೆಗೆದುಕೊಳ್ಳುತ್ತೇವೆ. ಈಗಿನ ಪಠ್ಯದಲ್ಲೂ ಕೆಲವು ಆಕ್ಷೇಪಣೆಗಳಿವೆ. ಈಗಿರುವುದನ್ನ ಸರಿಪಡಿಸಿಕೊಳ್ಳುತ್ತೇವೆ, ಅದಕ್ಕಾಗಿ ವೆಬ್‌ಸೈಟ್‌ನಲ್ಲಿ ಹಾಕಲು ತಿಳಿಸಿದ್ದೇವೆ. ಹಿಂದಿನ ಪಠ್ಯಪುಸ್ತಕದ ಬಗ್ಗೆಯೂ ಆಕ್ಷೇಪ ಇದೆ. ಒಟ್ಟಾರೆ ಯಾವುದನ್ನು ಸರಿಪಡಿಸಬೇಕು. ಯಾವುದು ಸರಿಯಿದೆ, ಯಾವುದು ಸರಿಯಿಲ್ಲ ಎಂಬ ಬಗ್ಗೆ ಚರ್ಚೆ ನಡೆಸಿ ತೀರ್ಮಾನಕ್ಕೆ ಬರಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.

Recommended Video

IPL ಮ್ಯಾಚ್ ನಲ್ಲಿ ಒಂದು ಬೌಲ್ ಮತ್ತು ಒಂದು ಓವರ್ ನಿಂದ BCCIಬಾಚಿಕೊಳ್ಳೋ ದುಡ್ಡೆಷ್ಟು?|*Cricket|OneIndia Kannada

ಶಾಲೆ ಪ್ರವಾಸ ಹಾಗೂ ಶಾಲೆಗಳಲ್ಲಿ ಹಿಂದಿ ಹೇರಿಕೆ ಕಡ್ಡಾಯ ಎಂಬ ಸುತ್ತೋಲೆ ಬಗ್ಗೆ ಪ್ರತಿಕ್ರಿಯಿಸಿ, ಅದು ಸರಿಯಲ್ಲ ಎಂದು ಸಚಿವ ನಾಗೇಶ್ ಗೆ ಹೇಳಿದ್ದೇನೆ. ಯಾವ ಅಧಿಕಾರಿಗಳು ಆ ಸುತ್ತೋಲೆ ಹೊರಡಿಸಿದ್ದಾರೋ, ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದೇನೆ ಎಂದು ತಿಳಿಸಿದರು.

English summary
Supreme Court has not issued any injunction order to Mekedatu Project, says Chief minister Basavaraj Bommai in Davanagere. he told Karnataka government is confident to get DPR approved for the project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X