ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಚ್ಚುಮೆಚ್ಚಿನ ಶಿಕ್ಷಕಿಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ: ಆಡಳಿತ ಮಂಡಳಿ ವಿರುದ್ಧ ಆಕ್ರೋಶ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜನವರಿ 5: ಅಚ್ಚುಮೆಚ್ಚಿನ ಉಪನ್ಯಾಸಕಿ ಮಾಡುವ ಪಾಠವನ್ನು ಕೇಳಲು ವಿದ್ಯಾರ್ಥಿಗಳು ತಯಾರಾಗಿದ್ದರು. ಆದರೆ ಕಾಲೇಜು ಆಡಳಿತ ಮಂಡಳಿ ಆ ಉಪನ್ಯಾಸಕಿಯನ್ನು ಏಕಾಏಕಿ ತೆಗೆದು ಹಾಕಿದ್ದು, ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ವಿದ್ಯಾರ್ಥಿಗಳು ತಮ್ಮ ಮೆಚ್ಚಿನ ಶಿಕ್ಷಕಿಗಾಗಿ ಆಡಳಿತ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದಿರುವ ಘಟನೆ ದಾವಣಗೆರೆಯ ನಗರದ ಹೊರವಲಯದಲ್ಲಿರುವ ಜೈನ್ ಕಾಲೇಜನಲ್ಲಿ ನಡೆದಿದೆ.

ರಾಮ ಮಂದಿರ ನಿರ್ಮಾಣಕ್ಕಾಗಿ ಜ.15ರಿಂದ ದೇಣಿಗೆ ಸಂಗ್ರಹ ಅಭಿಯಾನರಾಮ ಮಂದಿರ ನಿರ್ಮಾಣಕ್ಕಾಗಿ ಜ.15ರಿಂದ ದೇಣಿಗೆ ಸಂಗ್ರಹ ಅಭಿಯಾನ

ಆಡಳಿತ ಮಂಡಳಿ ವಿರುದ್ಧ ಕಿಡಿಕಾರುತ್ತಿರುವ ವಿದ್ಯಾರ್ಥಿಗಳು, ನಮಗೆ ಶಶಿಕಲಾ ಮೇಡಮ್ ಬೇಕೆ ಬೇಕು ಎಂದು ಹಠ ಹಿಡಿದು ಕೂತಿದ್ದಾರೆ. ಕೊರೊನಾದಿಂದ ದೂರ ಉಳಿದಿದ್ದ ಕಾಲೇಜು ವಿದ್ಯಾರ್ಥಿಗಳು ಹೊಸ ವರ್ಷಕ್ಕೆ ಕಾಲೇಜು ಆರಂಭವಾದಾಗ ಎಲ್ಲಿಲ್ಲದ ಖುಷಿಯಿತ್ತು. ಆದರೆ ವಿದ್ಯಾರ್ಥಿಗಳು ಕಾಲೇಜಿಗೆ ಕಾಲಿಟ್ಟಾಗ ಅವರಿಗೆ ಶಾಕ್ ಕಾದಿತ್ತು.

ಅಚ್ಚುಮೆಚ್ಚಿನ ಶಿಕ್ಷಕಿ ಶಶಿಕಲಾ

ಅಚ್ಚುಮೆಚ್ಚಿನ ಶಿಕ್ಷಕಿ ಶಶಿಕಲಾ

ಏಕೆಂದರೆ ತಮ್ಮ ಅಚ್ಚುಮೆಚ್ಚಿನ ಶಿಕ್ಷಕಿ ಶಶಿಕಲಾ ಅವರನ್ನು ಕೆಲಸದಿಂದ ತೆಗೆದಿದ್ದು ವಿದ್ಯಾರ್ಥಿಗಳನ್ನು ಕೆರಳುವಂತೆ ಮಾಡಿತ್ತು. ಜೈನ್ ಕಾಲೇಜ್ ನಲ್ಲಿ ಅತಿಥಿ ಉಪನ್ಯಾಸಕಿ ಆಗಿ ಕೆಲಸ ನಿರ್ವಹಿಸುತ್ತಿದ್ದ ಶಶಿಕಲಾ ಎಂಬುವರನ್ನು ಜೈನ್ ಆಡಳಿತ ಮಂಡಳಿ ಕಾರಣವಿಲ್ಲದೆ ಕೆಲಸದಿಂದ ಬಿಡುಗಡೆಗೊಳಿಸಿತ್ತು. ಹೀಗಾಗಿಯೇ ಬೀದಿಗಿಳಿದ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕಿ ಶಶಿಕಲಾ ಮೇಡಂ ಬೇಕೇ ಬೇಕು. ಇಲ್ಲವಾದರೆ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿದ್ಯಾರ್ಥಿಗಳ ಕಲಿಕಾ ಪ್ರದರ್ಶನ ಕೂಡ ಕಡಿಮೆ

ವಿದ್ಯಾರ್ಥಿಗಳ ಕಲಿಕಾ ಪ್ರದರ್ಶನ ಕೂಡ ಕಡಿಮೆ

ಇನ್ನೂ ಈ ಬಗ್ಗೆ ಜೈನ್ ಕಾಲೇಜು ಪ್ರಾಂಶುಪಾಲ ಸದಾನಂದ ಅವರು ಹೇಳಿದ್ದೇನೆಂದರೆ, ""ಶಿಕ್ಷಕಿ ಶಶಿಕಲಾ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಹೀಗಾಗಿ ಕಾಲೇಜ್ ನ ಕೆಲ ವಿದ್ಯಾರ್ಥಿಗಳು ಅವರ ವಿರುದ್ಧ ದೂರು ನೀಡಿದರು. ಅವರು ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳ ಕಲಿಕಾ ಪ್ರದರ್ಶನ ಕೂಡ ಕಡಿಮೆಯಾಗಿತ್ತು. ಹಾಗಾಗಿ ಶಿಕ್ಷಕಿಯನ್ನು ಕೆಲಸದಿಂದ ರಿಲೀವ್ ಮಾಡಲಾಗಿದೆ ಎಂದರು.

Recommended Video

ಅಮೆರಿಕಾ ಕಿರಿ ಕಿರಿ ಜಾಸ್ತಿ ಆಗ್ತಿದೆ !! | Oneindia Kannada
ಆಡಳಿತ‌ ಮಂಡಳಿ ಹಾಗೂ ಪ್ರಿನ್ಸಿಪಾಲ್ ಕುತಂತ್ರ

ಆಡಳಿತ‌ ಮಂಡಳಿ ಹಾಗೂ ಪ್ರಿನ್ಸಿಪಾಲ್ ಕುತಂತ್ರ

ಇದರಿಂದ ಕೆರಳಿದ ವಿದ್ಯಾರ್ಥಿಗಳು, ಆಡಳಿತ ಮಂಡಳಿ ನಿರ್ದೇಶಕಿ ನಿಖಿತಾ, ಪ್ರಿನ್ಸಿಪಾಲ್ ಸದಾನಂದ ವಿರುದ್ಧ ವಾಗ್ವಾದಕ್ಕೆ ಇಳಿದರು. ಅಲ್ಲದೆ ಶಶಿಕಲಾ ಅವರನ್ನು ಡಿಸೆಂಬರ್ 30 ರಂದು ರಿಲೀವ್ ಮಾಡಿದರೆ. ಅವರ ಮೇಲೆ ವಿದ್ಯಾರ್ಥಿಗಳು ನೀಡಿದ ದೂರು ಜನವರಿ 4 ರಂದು ನೀಡಿದ್ದಾರೆ‌. ಇದರಿಂದ ಆಡಳಿತ‌ ಮಂಡಳಿ ಹಾಗೂ ಪ್ರಿನ್ಸಿಪಾಲ್ ಕುತಂತ್ರ ಎದ್ದು ಕಾಣುತ್ತಿದೆ ಎಂದು ಅನೇಕ ವಿದ್ಯಾರ್ಥಿಗಳು ಆರೋಪಿಸಿದರು.

ಯಾವುದೇ ಕಾರಣಕ್ಕೂ ಕಾಲೇಜಿಗೆ ಸೇರಿಸುವುದಿಲ್ಲ

ಇನ್ನು ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ವಿದ್ಯಾನಗರ ಪೊಲೀಸರು ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿಯವರನ್ನು ಠಾಣೆಗೆ ಕರೆದು ವಿಚಾರಣೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ನಮಗೆ ಹಳೆ ಶಿಕ್ಷಕಿ ಬೇಕೇ ಬೇಕು ಅಂತ ವಿದ್ಯಾರ್ಥಿಗಳು ಪಟ್ಟು ಹಿಡಿದರೆ, ಕಾಲೇಜು ಆಡಳಿತ ಮಂಡಳಿ ನಿಯಮದ ಪ್ರಕಾರ ನಾವು ಶಿಕ್ಷಕಿಯನ್ನು ನಾವು ತೆಗೆದು ಹಾಕಿದ್ದೇವೆ. ಯಾವುದೇ ಕಾರಣಕ್ಕೂ ನಾವು ಅವರನ್ನು ಕಾಲೇಜಿಗೆ ಸೇರಿಸುವುದಿಲ್ಲ ಅಂತ ಹೇಳುತ್ತಿದ್ದಾರೆ. ಇದೀಗ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರಕರಣ ಯಾವ ರೀತಿ ಸುಖಾಂತ್ಯ ಕಾಣುತ್ತದೆ ಎಂಬುದನ್ನು ಕಾದು ನೋಡಬೇಕು.

English summary
The Davanagere Jain college administration body removal of the lecturer has led to students' outrage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X