ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೆ.7ರಂದು ಬೆಂಗಳೂರು ತಲುಪಲಿದೆ ಕುರುಬರ ಬೃಹತ್ ಪಾದಯಾತ್ರೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜನವರಿ 20: ಕಾಗಿನೆಲೆ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಕುರುಬರ ಎಸ್ಟಿ ಮೀಸಲಾತಿ ಪಾದಯಾತ್ರೆ ದಾವಣಗೆರೆ ನಗರ ಪ್ರವೇಶಿಸಿದೆ. ಫೆಬ್ರವರಿ 7ರಂದು ಪಾದಯಾತ್ರೆ ಬೆಂಗಳೂರು ನಗರವನ್ನು ತಲುಪಲಿದೆ.

ಪಾದಯಾತ್ರೆ ದಾವಣಗೆರೆ ತಲುಪುತ್ತಿದ್ದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಪಾದಯಾತ್ರೆಯನ್ನು ಸ್ವಾಗತಿಸಿದರು. ದೊಡ್ಡಬಾತಿ ಕೆರೆ ಬಳಿ ಶ್ರೀಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಡೆಯುವ ಸ್ಥಳದ ತನಕ ಸಚಿವರು ಪಾದಯಾತ್ರೆಯಲ್ಲಿ ಪಾಲ್ಗೊಂಡರು.

ಕುರುಬ ಸಮಾಜದಿಂದ ಸಿದ್ದರಾಮಯ್ಯಗೆ ಬಹಿಷ್ಕಾರದ ಎಚ್ಚರಿಕೆ! ಕುರುಬ ಸಮಾಜದಿಂದ ಸಿದ್ದರಾಮಯ್ಯಗೆ ಬಹಿಷ್ಕಾರದ ಎಚ್ಚರಿಕೆ!

ದಾವಣಗೆರೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ನೇತೃತ್ವದ ಪಾದಯಾತ್ರಿಗಳನ್ನು ಅದ್ಧೂರಿಯಾಗಿ ಸಮಾಜದ ಜನರು ಸ್ವಾಗತಿಸಿದರು. ಆನೆಯೂ ಶ್ರೀಗಳನ್ನು ಸ್ವಾಗತಿಸಿತಲ್ಲದೇ ಭಕ್ತರು, ಸಮಾಜದ ಜನರು ಪುಷ್ಪವೃಷ್ಟಿ ಸುರಿಸಿದರು.

ಎಸ್‌ಟಿ ಹೋರಾಟ: ಈಶ್ವರಪ್ಪ ವಿರುದ್ಧ ತಿರುಗಿ ಬಿದ್ದ ಕುರುಬ ನಾಯಕರು!ಎಸ್‌ಟಿ ಹೋರಾಟ: ಈಶ್ವರಪ್ಪ ವಿರುದ್ಧ ತಿರುಗಿ ಬಿದ್ದ ಕುರುಬ ನಾಯಕರು!

ದಾರಿಯೂದ್ದಕ್ಕೂ ರಸ್ತೆಯ ಇಕ್ಕೆಲೆಗಳಲ್ಲಿ ಜನರು ನಿಂತು ಶ್ರೀಗಳನ್ನು ಸ್ವಾಗತಿಸುತ್ತಿದ್ದರು. ಇನ್ನೂ ಪಾದಯಾತ್ರಿಗಳು ಕುರುಬರು ಬಡುಕಟ್ಟು ಜನಾಂಗದವರು, ಎಸ್ಟಿ ಮೀಸಲಾತಿ ನಮ್ಮ ಹಕ್ಕು ಎಂಬ ಘೋಷಣೆ ಹಾಕುತ್ತ ಸಾಗಿದರು.

 ಎಸ್ಟಿಗೆ ಕುರುಬ ಸಮಾಜ ಸೇರ್ಪಡೆಗೆ ಆಗ್ರಹಿಸಿ ಕಾಗಿನೆಲೆ ಶ್ರೀಗಳ ಪಾದಯಾತ್ರೆ ಎಸ್ಟಿಗೆ ಕುರುಬ ಸಮಾಜ ಸೇರ್ಪಡೆಗೆ ಆಗ್ರಹಿಸಿ ಕಾಗಿನೆಲೆ ಶ್ರೀಗಳ ಪಾದಯಾತ್ರೆ

ಪಾದಯಾತ್ರೆಗೆ ಸ್ವಾಗತ

ಪಾದಯಾತ್ರೆಗೆ ಸ್ವಾಗತ

ಜಿಎಂಐಟಿ ಬಳಿ ಅಹಿಂದ ಜನಶಕ್ತಿ ವೇದಿಕೆ ಕಾರ್ಯಕರ್ತರು ಪಾದಯಾತ್ರಿಗಳಿಗೆ ಮಜ್ಜಿಗೆ ಮತ್ತು ನೀರು ವಿತರಿಸಿದರು. ಸಂಸದ ಜಿ. ಎಂ. ಸಿದ್ದೇಶ್ವರ ಅವರು ಜಿಎಂಐಟಿ ಬಳಿ ಶ್ರೀಗಳನ್ನು ಸ್ವಾಗತಿಸಿದರು. ಪಾಲಿಕೆ ಉಪಮೇಯರ್ ಸೌಮ್ಯ ನರೇಂದ್ರ ಕುಮಾರ್, ಪಾಲಿಕೆ ಸದಸ್ಯರಾದ ಎಸ್. ಟಿ. ವೀರೇಶ್, ಪ್ರಸನ್ನ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಜೊತೆಗಿದ್ದರು.

ಸೆಲ್ಫೀ ಜೋರಾಗಿತ್ತು

ಸೆಲ್ಫೀ ಜೋರಾಗಿತ್ತು

ಪಾದಯಾತ್ರೆಯಲ್ಲಿ ಬೆಳ್ಳಿರಥ ಸಾರೋಟ ಮುಂದಿದ್ದು, ಹಿಂದೆ ಶ್ರೀಗಳು ಪಾದಯಾತ್ರಿಗಳಿದ್ದರು. ಡೊಳ್ಳು ಕುಣಿತ, ಗೋರಪ್ಪಗಳ ಗುಂಪು ಕಂಡು ಬಂದಿತು. ಪಾದಯಾತ್ರಿಗಳು ಹಳದಿ ಬಣ್ಣದ ಪೇಟೆ, ಕಂಬಳಿ ಹೆಗಲ ಮೇಲೆ ಹೊತ್ತು ಸಾಗಿದರು.

ಶ್ರೀಗಳು ನಗರ ಪ್ರವೇಶ ಮಾಡುತ್ತಿದ್ದಂತೆ ಯುವಕರು ಶ್ರೀಗಳ ಬಳಿ ತೆರಳಿ ಸೆಲ್ಪಿ ಪಡೆಯುತ್ತಿದ್ದರು. ರಸ್ತೆಯ ಒಂದು ಭಾಗದಲ್ಲಿ ಸಾಗುತ್ತಿದ್ದ ಪಾದಯಾತ್ರೆಯಲ್ಲಿ ವೃದ್ದರೂ ಊರುಗೋಲು ಹಿಡಿದು ಸಾಗುತ್ತಿದ್ದರೇ ಯುವಕರು ಘೋಷಣೆ ಕೂಗುತ್ತಿದ್ದರು. ಮಹಿಳೆಯರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಫೆಬ್ರವರಿ 7ಕ್ಕೆ ಬೆಂಗಳೂರು ತಲುಪಲಿದೆ

ಫೆಬ್ರವರಿ 7ಕ್ಕೆ ಬೆಂಗಳೂರು ತಲುಪಲಿದೆ

ಎಸ್ಟಿ ಮೀಸಲಾತಿ ಪಟ್ಟಿಯಲ್ಲಿ ಕುರುಬ ಸಮುದಾಯವನ್ನು ಸೇರಿಸಬೇಕೆಂಬ ಬೇಡಿಕೆ ಇಟ್ಟುಕೊಂಡು ಜನವರಿ 15ರಂದು ಆರಂಭ ಮಾಡಿರುವ ಈ ಪಾದಯಾತ್ರೆ ದಾವಣಗೆರೆ ಜಿಲ್ಲೆಗೆ ತಲುಪಿದ್ದು, ಚಿತ್ರದುರ್ಗದ ಮೂಲಕ ಸಾಗಿ ಫೆಬ್ರವರಿ 7ರಂದು ಬೆಂಗಳೂರಿಗೆ ತಲುಪಲಿದೆ.

Recommended Video

ಬಿಎಂಟಿಸಿ ಬಸ್ ಅಲ್ಲಿ ಕಾಂಗ್ರೆಸ್ಸ್ ಕಾರ್ಯಕರ್ತರು!! | Oneindia Kannada
ಸರ್ಕಾರಕ್ಕೆ ಮುಟ್ಟುವುದೇ ಕೂಗು

ಸರ್ಕಾರಕ್ಕೆ ಮುಟ್ಟುವುದೇ ಕೂಗು

ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಕಾಗಿನೆಲೆಯಿಂದ ಬೆಂಗಳೂರಿನ ತನಕ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಎಸ್ಟಿ ಮೀಸಲಾತಿಗಾಗಿ ಪಟ್ಟು ಹಿಡಿದಿರುವ ಕುರುಬ ಸಮುದಾಯದ ಮೀಸಲಾತಿ ಹೋರಾಟ ಸರ್ಕಾರವನ್ನು ತಲುಪಲಿದೆಯೇ? ಕಾದು ನೋಡಬೇಕು.

English summary
Kanaka Guru Peetha of Kaginele Niranjanananda Puri Swamiji padayatra reached Davanagere. Padayatra launched from Kaginele to Bengaluru demanding ST status to Kuruba community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X