ಚಿನ್ನ ಮಾರಿ ನೆರೆ ಸಂತ್ರಸ್ತರ ಮನೆ ನಿರ್ಮಾಣಕ್ಕೆ ದೇಣಿಗೆ ಕೊಡಲು ಮುಂದಾದ ಶ್ರೀಶೈಲ ಪೀಠ
ದಾವಣಗೆರೆ, ಸೆಪ್ಟೆಂಬರ್ 10: ನೆರೆಯಿಂದಾಗಿ ನೆಲೆ ಕಳೆದುಕೊಂಡವರಿಗೆ ಸಹಾಯ ಹಸ್ತ ಚಾಚಲು ಶ್ರೀಶೈಲ ಪೀಠ ಮುಂದಾಗಿದೆ. ನೆರೆ ಸಂತ್ರಸ್ತರಿಗೆಂದು ಶ್ರೀಶೈಲ ಪೀಠದಿಂದ 630 ಗ್ರಾಂ ಚಿನ್ನವನ್ನು ದೇಣಿಗೆ ನೀಡಲಾಗುತ್ತಿದೆ.
ಪ್ರವಾಹ ಪರಿಹಾರ: ಕಾಳಜಿ ಕೇಂದ್ರದಲ್ಲಿ ಕಣ್ಮನ ಸೆಳೆದ ಮಹಿಳಾ ಅಧಿಕಾರಿ
ದಾವಣಗೆರೆಯಲ್ಲಿ ಇಂದು ನಡೆದ ಶ್ರೀಶೈಲ ಮಠದ ಕಾರ್ಯಕ್ರಮದಲ್ಲಿ ಶ್ರೀಶೈಲ ಪೀಠದ ಡಾ. ಚನ್ನಸಿದ್ದರಾಮ ಶಿವಾಚಾರ್ಯ ಶ್ರೀಗಳು ನೆರೆ ಸಂತ್ರಸ್ತರಿಗೆ ಶ್ರೀಶೈಲ ಮಠದ ವತಿಯಿಂದ 100 ಮನೆಗಳ ನಿರ್ಮಾಣ ಮಾಡಿಕೊಡುವ ಉದ್ದೇಶ ಹೊಂದಿದ್ದು, 634 ಗ್ರಾಂ ಚಿನ್ನ ಮಾರಿ ಬಂದ ಹಣದಿಂದ ಮನೆಗಳ ನಿರ್ಮಾಣ ಮಾಡುವುದಾಗಿ ತಿಳಿಸಿದರು.
ಶ್ರೀ ಶೈಲ ಪೀಠದ ಜಗದ್ಗುರುಗಳ ಲಿಂಗೋದ್ಭವ ಮೂರ್ತಿ ಸುವರ್ಣ ಕವಚಕ್ಕೆ ಇಟ್ಟಿದ್ದ ಚಿನ್ನವನ್ನು ಮನೆ ನಿರ್ಮಾಣಕ್ಕೆ ಬಳಕೆ ಮಾಡುವುದಾಗಿ ಹೇಳಿದ್ದಾರೆ.