• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಸೋಂಕಿನಿಂದ ಜಗಳೂರು ಆಂಬುಲೆನ್ಸ್ ಚಾಲಕ ಸಾವು; ಶ್ರೀರಾಮುಲು ಸಂತಾಪ

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಸೆಪ್ಟೆಂಬರ್ 16: ಕೊರೊನಾ ಸೋಂಕಿಗೆ ತುತ್ತಾಗಿ ಜಗಳೂರಿನ ಸಾರ್ವಜನಿಕ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ಅಜ್ಮತ್ (49) ಎಂಬುವರು ಇಂದು ಸಾವನ್ನಪ್ಪಿದ್ದಾರೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಕಳೆದ ಐದು ದಿನಗಳಿಂದ ಅಜ್ಮತ್ ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ನಂತರ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ.

ಸಾಮಾನ್ಯ ನೆಗಡಿಯಿದ್ದರೂ ಕೊವಿಡ್ ಪರೀಕ್ಷೆ ಮಾಡಿಸಿ: ವೈದ್ಯರ ಸಲಹೆ

ಅಜ್ಮತ್ ಅವರ ಸಾವಿಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

   RCB ಈ ಸಲ ಕಪ್ ಗೆದ್ದೇ ಗೆಲ್ತಾರೆ , ಯಾಕೆ ಗೊತ್ತಾ | Oneindia Kannada

   "ಅಜ್ಮತ್ ಅವರು ಕೋವಿಡ್ ವಿರುದ್ಧ ಮುಂಚೂಣಿ ಯೋಧರಾಗಿ ಸತತವಾಗಿ ಕಾರ್ಯ ನಿರ್ವಹಿಸಿದ್ದರು. ಇಂತಹ ನಿಸ್ವಾರ್ಥ ಸೇನಾನಿಗಳು ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವುದರಿಂದಲೇ ಸಾವಿರಾರು ರೋಗಿಗಳ ಜೀವ ಉಳಿಯುತ್ತಿವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ದೇವರು ಅವರ ಕುಟುಂಬಕ್ಕೆ ದುಃಖ‌ ತಡೆಯುವ ಶಕ್ತಿ ನೀಡಲಿ" ಎಂದು ಟ್ವೀಟ್ ಮಾಡಿದ್ದಾರೆ.

   ಅವರ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾದ ಎಲ್ಲ ಸವಲತ್ತುಗಳು ಹಾಗೂ ಪರಿಹಾರಗಳನ್ನು ಶೀಘ್ರವಾಗಿ ತಲುಪಿಸಲಾಗುವುದು ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

   English summary
   Jagaluru government hospital ambulance driver dies due to coronavirus today. Health minister sriramulu expressed his condolence through tweet
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X