ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ಹರಡುವಿಕೆ; ದಾವಣಗೆರೆ ಸೇಫ್ ಝೋನ್‌ನಲ್ಲಿದೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮೇ 07; "ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ದಾವಣಗೆರೆ ಜಿಲ್ಲೆ ಸೇಫ್ ಝೋನ್ ನಲ್ಲಿದೆ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.

ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ದಾವಣಗೆರೆಯ ಪರಿಸ್ಥಿತಿ ಬೇರೆ. ಬೇರೆ ಜಿಲ್ಲೆಗಳ ಸ್ಥಿತಿಯೇ ಬೇರೆ. ಯಾವೊಬ್ಬ ನಾಗರಿಕರಿಗೂ ತೊಂದರೆ ಆಗದ ರೀತಿಯಲ್ಲಿ ಕೆಲಸ ನಿರ್ವಹಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ‌ನೀಡಿದ್ದೇನೆ‌. ಬೆಡ್, ಆಕ್ಸಿಜನ್ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು" ಎಂದರು.

"ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಸಹಕರಿಸಬೇಕು. ಮನೆಯಿಂದ ಹೊರ ಬರಬೇಡಿ. ಜಿಲ್ಲೆಯ ಕೊರೊನಾ ಸೋಂಕಿತರ ಸಂಖ್ಯೆ ವಿಚಾರ ಸೇರಿದಂತೆ ಎಲ್ಲಾ‌‌ ಮಾಹಿತಿಯನ್ನು ಪಡೆದಿದ್ದೇನೆ. ಪ್ರತಿ ತಾಲೂಕಿಗೂ ಭೇಟಿ ನೀಡಿ ಇಂದು ಮತ್ತು ನಾಳೆ ಪರಿಶೀಲನೆ ನಡೆಸುತ್ತೇವೆ. ನಗರದ ಚಿಗಟೇರಿ ಸರ್ಕಾರಿ ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆಗಳಿಗೂ ಭೇಟಿ ನೀಡುತ್ತೇನೆ" ಎಂದು ಸಚಿವರು ತಿಳಿಸಿದರು.

ದಾವಣಗೆರೆ: ಕೋವಿಡ್ ತಡೆಗೆ ಪಿಯುಸಿ ವಿದ್ಯಾರ್ಥಿ ಸಮಾಜಮುಖಿ ಕಾರ್ಯ ದಾವಣಗೆರೆ: ಕೋವಿಡ್ ತಡೆಗೆ ಪಿಯುಸಿ ವಿದ್ಯಾರ್ಥಿ ಸಮಾಜಮುಖಿ ಕಾರ್ಯ

Spread Of Coronavirus Davanagere In Safe Zone

ಲಾಕ್ ಡೌನ್; "ಸಂಪೂರ್ಣ ಲಾಕ್ ಡೌನ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಿದ್ದೇವೆ‌. ಈಗ ಜಾರಿಗೊಳಿಸಿರುವ ಕರ್ಫ್ಯೂ ಲಾಕ್ ಡೌನ್ ಗೆ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮ ಅನಿವಾರ್ಯ" ಎಂದು ಸಚಿವರು ಅಭಿಪ್ರಾಯಪಟ್ಟರು.

ದಂಡ ಹಾಕಿದ ದಾವಣಗೆರೆ ಪೊಲೀಸರು: ರಸ್ತೆಯಲ್ಲಿ ಪ್ರತಿಭಟಿಸಿದ ವೃದ್ಧದಂಡ ಹಾಕಿದ ದಾವಣಗೆರೆ ಪೊಲೀಸರು: ರಸ್ತೆಯಲ್ಲಿ ಪ್ರತಿಭಟಿಸಿದ ವೃದ್ಧ

ಸಿದ್ದರಾಮಯ್ಯ ವಿರುದ್ಧ ಅಸಮಾಧಾನ; ಸಚಿವರು ಪ್ರತಿಪಕ್ಷ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. "ಸಿದ್ದರಾಮಯ್ಯ ಮನೆಯಲ್ಲಿ ಕುಳಿತು ಹೇಳುತ್ತಾರೆ. ಇಲ್ಲಿಗೆ ಬಂದು ಕೆಲಸ‌ ಮಾಡಲಿ ಗೊತ್ತಾಗುತ್ತೆ" ಎಂದರು.

"ಫೋನ್‌ನಲ್ಲಿ ಸಿದ್ದರಾಮಯ್ಯ ಹೇಳಿಬಿಟ್ಟರೆ ಎಲ್ಲವೂ ಆಗುತ್ತಾ?, ಕಾಂಗ್ರೆಸ್ ನವರು ವಿನಾಕಾರಣ ಟೀಕೆ ಮಾಡುತ್ತಾರೆ. ಇದು ಸರಿಯಲ್ಲ, ಕಾಂಗ್ರೆಸ್ ನವರ ಆರೋಪಗಳೆಲ್ಲವೂ ಸುಳ್ಳು. ಏನೋ ಹೇಳಬೇಕೆಂದು ಆರೋಪ ಮಾಡುತ್ತಾರೆ ಅಷ್ಟೇ" ಎಂದು ಸಚಿವರು ತಿಳಿಸಿದರು.

English summary
Davanagere district in-charge minister Byrathi Basavaraj said that compare to other district Davanagere is in safe zone in spread of Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X