ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿವೇಕಾನಂದರು ಹಿಂದೂವಾದಿಗಳು ಎಂದು ಬಿಂಬಿಸುವುದು ತಪ್ಪು

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜನವರಿ 12: "ಸಾಮಾಜಿಕ ಜಾಲತಾಣಗಳಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಗಳನ್ನು ಹಾಕಿಕೊಂಡು ವಿವೇಕಾನಂದರು ಹಿಂದುತ್ವದ ಐಕಾನ್, ನಮ್ಮ ನಾಯಕರು ಎಂದು ಹೇಳಿಕೊಂಡು ಮೆರೆದಾಡಿದವರು ಇಂದು ಮೌನವಾಗಿದ್ದಾರೆ" ಎಂದು ಪ್ರಗತಿ ಪರ ಚಿಂತಕ ದಿನೇಶ್ ಅಮಿನ್ ಮಟ್ಟು ಹೇಳಿದರು.

ದಾವಣಗೆರೆ ನಗರದ ಎ. ಕಮಲಮ್ಮ ಮಹಿಳಾ ಕಾಲೇಜಿನ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ಎನ್ಎಸ್‌ಯುಐ ಆಶ್ರಯದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದವರ 158ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 ಕೋಟದ ಮೂಡುಗಿಳಿಯಾರಿನಲ್ಲಿ ಅತೀ ಎತ್ತರದ ವಿವೇಕಾನಂದ ಪ್ರತಿಮೆ ಕೋಟದ ಮೂಡುಗಿಳಿಯಾರಿನಲ್ಲಿ ಅತೀ ಎತ್ತರದ ವಿವೇಕಾನಂದ ಪ್ರತಿಮೆ

"ಸ್ವಾಮಿ ವಿವೇಕಾನಂದ ಅವರು ಹಿಂದೂತ್ವದ ಐಕಾನ್ ಎಂದು ಹೇಳಿಕೊಂಡು ಮೆರದಾಡಿದವರು ಇಂದು ಸ್ವಾಮಿ ವಿವೇಕಾಂದರ ಜಯಂತಿಯನ್ನು ಆಚರಣೆ ಮಾಡುತ್ತಿಲ್ಲ. ಅದೇ ರೀತಿ ಕಳೆದ 8 ವರ್ಷಗಳಿಂದ ವಿಜೃಂಭಣೆಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ ಮಾಡುತ್ತಿರುವರು ಈಗ ಸ್ತಬ್ತವಾಗಿದ್ದಾರೆ" ಎಂದರು.

ಚಿಕ್ಕಮಗಳೂರು: ರಾತ್ರೋರಾತ್ರಿ ಸ್ವಾಮಿ ವಿವೇಕಾನಂದ ಮೂರ್ತಿ ನೆಲಸಮಚಿಕ್ಕಮಗಳೂರು: ರಾತ್ರೋರಾತ್ರಿ ಸ್ವಾಮಿ ವಿವೇಕಾನಂದ ಮೂರ್ತಿ ನೆಲಸಮ

Some Projecting Swami Vivekanandaa As Hindutvawadi

"ಅಂದು ಜಯಂತಿ ಆಚರಣೆ ಮಾಡದವರು ಇಂದು ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ ಮಾಡುತ್ತಿದ್ದಾರೆ. ಸ್ವಾಮಿ ವಿವೇಕಾನಂದರು ಇಡಿ ವಿಶ್ವದ ಫಿಲಾಸಫಿಗಳನ್ನುಅರಿತು ವಿಶ್ವಗುರು ಎನ್ನಿಸಿಕೊಂಡ ಮಹಾನ್ ಸನ್ಯಾಸಿ" ಎಂದು ದಿನೇಶ್ ಅಮಿನ್ ಮುಟ್ಟು ಬಣ್ಣಿಸಿದರು.

"ವಿವೇಕಾನಂದರ ಜೀವನ ಚರಿತೆ, ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಅವರ ಚಿಂತನೆಗಳನ್ನು ಅಧ್ಯಯನ ಮಾಡಿದರೆ. ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹದು. ಸ್ವಾಮಿ ವಿವೇಕಾನಂದರ ಬಗ್ಗೆ ಇರುವ ಸತ್ಯಾಂಶಗಳನ್ನು ತಿಳಿಸಿಕೊಟ್ಟರೆ. ಅವರ ವಿರುದ್ಧ ಮಾತನಾಡುತ್ತಾರೆ ಎಂದು ಕೆಲ ಕಿಡಿಗೇಡಿಗಳು ಬಿಂಬಿಸುತ್ತಾರೆ" ಎಂದರು.

ವಿವೇಕಾನಂದ, ಬಸವಣ್ಣನವರನ್ನು ಕೊಲೆ ಮಾಡಲಾಗಿದೆ: ಪ್ರೊ.ಕೆ ಎಸ್ ಭಗವಾನ್ವಿವೇಕಾನಂದ, ಬಸವಣ್ಣನವರನ್ನು ಕೊಲೆ ಮಾಡಲಾಗಿದೆ: ಪ್ರೊ.ಕೆ ಎಸ್ ಭಗವಾನ್

"ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ಸುಧಾರಣೆ ಮಾಡುವಂತ ಕೆಲಸ ಮಾಡಿದ್ದಾರೆ. ಆದರೆ, ಅವರು ಯಾವುದೇ ಸಂದರ್ಭದಲ್ಲಿ ಸಹ ನಾನು ಹಿಂದೂ ಎಂದು ಹೇಳಿಕೊಂಡಿಲ್ಲ. ಕೆಲವರು ಸ್ವಾಮಿ ವಿವೇಕಾನಂದರು ಹಿಂದೂ ವಾದಿಗಳು ಎಂದು ಬಿಂಬಿಸುತ್ತಿದ್ದು, ಅದು ಸುಳ್ಳು" ಎಂದು ತಿಳಿಸಿದರು.

Some Projecting Swami Vivekanandaa As Hindutvawadi

"ಸ್ವಾಮಿ ವಿವೇಕಾನಂದರ ತಂದೆ-ತಾಯಿಗಳಿಗೆ ಹತ್ತು ಜನ ಮಕ್ಕಳು. ಅದರಲ್ಲಿ ಆರನೇ ಮಗನೇ ಸ್ವಾಮಿ ವಿವೇಕಾನಂದರು. ಇವರು ಸಾಕಷ್ಟು ಬಡತನ, ಹಸಿವು, ಅಸಮಾನತೆಯನ್ನು ಅನುಭವಿಸಿ ಬೆಳೆದಂತಹ ಮಹಾನ್ ನಾಯಕರು" ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಬಿ. ಪಿ. ಕುಮಾರ್, ಪದವಿ ಪೂರ್ವ ಕಾಲೇಜು ವಿಭಾಗದ ಶಿವನಗೌಡ, ಕೆಪಿಸಿಸಿ ವಕ್ತಾರ ಡಿ. ಬಸವರಾಜು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

English summary
Some people projecting Swami Vivekanandaa as Hindutvawadi it's false said Dinesh Amin Mattu senior journalist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X