ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ : ವಿವಾದ ಹುಟ್ಟು ಹಾಕಿದ ಸಿಡಿ ಉತ್ಸವ

|
Google Oneindia Kannada News

ದಾವಣಗೆರೆ, ಜನವರಿ 28 : ದಾವಣಗೆರೆ ಜಿಲ್ಲೆಯ ಕೆಂಚಿಕೊಪ್ಪ ಗ್ರಾಮದಲ್ಲಿ ನಡೆದ ಸಿಡಿ ಉತ್ಸವ ವಿವಾದಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಉತ್ಸವಕ್ಕೆ ಚಾಲನೆ ನೀಡಿದ್ದರು.

ಮಂಗಳವಾರ ದಾವಣಗೆರೆಯ ಕೆಂಚಿಕೊಪ್ಪ ಗ್ರಾಮದಲ್ಲಿ ಸಿಡಿ ಉತ್ಸವ ನಡೆದಿದೆ. ಸಾವಿರಾರು ಭಕ್ತರು ಈ ಇದರಲ್ಲಿ ಪಾಲ್ಗೊಂಡಿದ್ದರು. ರಾಜ್ಯದಲ್ಲಿ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ಬಂದ ಬಳಿಕ ಸಿಡಿ ಉತ್ಸವ ನಡೆದಿರುವುದು ವಿವಾದಕ್ಕೆ ಕಾರಣವಾಗಿದೆ.

ಪ್ರಗತಿಪರರು ಸ್ಮಶಾನದಲ್ಲಿ ಮಾಂಸಾಹಾರ ತಿಂದರೆ ಮೌಢ್ಯ ತೊಲಗುವುದೆ? ಪ್ರಗತಿಪರರು ಸ್ಮಶಾನದಲ್ಲಿ ಮಾಂಸಾಹಾರ ತಿಂದರೆ ಮೌಢ್ಯ ತೊಲಗುವುದೆ?

ಆರು ದಿನಗಳ ಹಿಂದೆ ಜಾರಿಗೆ ಬಂದ ಮೌಢ್ಯ ನಿಷೇಧ ಕಾಯ್ದೆ ಅನ್ವಯ ಕೊಕ್ಕೆಯಿಂದ ನೇತು ಹಾಕುವ ಸಿಡಿ ಉತ್ಸವ, ದೇಹಕ್ಕೆ ಚುಚ್ಚಿಕೊಂಡ ಕೊಕ್ಕೆಯ ಮೂಲಕ ರಥ ಎಳೆಯುವುದು ನಿಷೇಧವಾಗಿದೆ.

ಮೌಢ್ಯ ನಿಷೇಧ ಕಾಯ್ದೆ ಸದನದಲ್ಲಿ ಮಂಡನೆ, ಮುಖ್ಯಾಂಶಗಳುಮೌಢ್ಯ ನಿಷೇಧ ಕಾಯ್ದೆ ಸದನದಲ್ಲಿ ಮಂಡನೆ, ಮುಖ್ಯಾಂಶಗಳು

Sidi Utsva In Davanagere Sparks Controversy

ಆದರೂ ಕೆಂಚಿಕೊಪ್ಪದಲ್ಲಿ ನಡೆದ ಸಿಡಿ ಉತ್ಸವದಲ್ಲಿ ದಲಿತ ಮಹಿಳೆಯನ್ನು ಬಳಸಿಕೊಂಡು ಸಿಡಿ ಉತ್ಸವ ನಡೆಸಲಾಗಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಅವರೇ ಉತ್ಸವಕ್ಕೆ ಚಾಲನೆ ನೀಡಿದ್ದಾರೆ.

ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ಸಚಿವ ಸಂಪುಟ ಒಪ್ಪಿಗೆಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ಸಚಿವ ಸಂಪುಟ ಒಪ್ಪಿಗೆ

ಮೌಢ್ಯ ನಿಷೇಧ ಕಾಯ್ದೆ ಅನ್ವಯ ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಜಾಗೃತ ಅಧಿಕಾರಿಯಾಗಿದ್ದಾರೆ. ಮೌಢ್ಯಾಚರಣೆ ಕಂಡು ಬಂದರೆ ಇವರಿಗೆ ದೂರು ನೀಡಬಹುದಾಗಿದೆ. ಆಗ ಅವರು ಕಡ್ಡಾಯವಾಗಿ ಎಫ್‌ಐಆರ್ ದಾಖಲು ಮಾಡಿಕೊಳ್ಳಬೇಕು.

Sidi Utsva In Davanagere Sparks Controversy

ಪೊಲೀಸ್ ಇನ್ಸ್‌ಪೆಕ್ಟರ್ ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಳ್ಳಲು ಅವಕಾಶವನ್ನು ಮೌಢ್ಯ ನಿಷೇಧ ಕಾಯ್ದೆಯಲ್ಲಿ ನೀಡಲಾಗಿದೆ.

English summary
Sidi utsva held in Davanagere district on January 28, 2020 sparked controversy. Anti superstition law come to effect in Karnataka which banned Sidi Utsva.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X