ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮುಂಡೇಶ್ವರಿ ಸೋಲು ನೆನಪಿಸಿಕೊಂಡು ಬೇಸರಗೊಂಡ ಸಿದ್ದರಾಮಯ್ಯ

|
Google Oneindia Kannada News

Recommended Video

ಬೇಸರಗೊಂಡ ಸಿದ್ದರಾಮಯ್ಯ | Oneindia Kannada

ದಾವಣಗೆರೆ, ಡಿಸೆಂಬರ್ 04 : 'ಕೆಲಸ ಮಾಡುವವರನ್ನು ಜನರು ಮರೆತಿದ್ದಾರೆ. ಜನರಿಗೆ ಸೇವೆ ಮಾಡಿದ ನನ್ನನ್ನು ಸಹ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದರು' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಮಂಗಳವಾರ ಹರಪನಹಳ್ಳಿ ಕ್ಷೇತ್ರದ ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಅವರಿಗೆ 'ನುಡಿ-ನಮನ' ಸಲ್ಲಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಅವರು, ವಿಧಾನಸಭೆ ಚುನಾವಣೆ ಫಲಿತಾಂಶವನ್ನು ನೆನಪು ಮಾಡಿಕೊಂಡರು.

ಒಂದೇ ತಿಂಗಳಿನಲ್ಲಿ ವಿಧಿಯ ಕರೆಗೆ ಓಗೊಟ್ಟ ಆಪ್ತ ಸ್ನೇಹಿತರು!ಒಂದೇ ತಿಂಗಳಿನಲ್ಲಿ ವಿಧಿಯ ಕರೆಗೆ ಓಗೊಟ್ಟ ಆಪ್ತ ಸ್ನೇಹಿತರು!

'ಎಂ.ಪಿ.ರವೀಂದ್ರ ಅವರು ಹರಪನಹಳ್ಳಿಯನ್ನು 371ಜೆ ಕಲಂಗೆ ಸೇರಿಸಲು ಸಾಕಷ್ಟು ಹೋರಾಟ ಮಾಡಿದ್ದರು. ಏಕಾಏಕಿ ಚುನಾವಣಾ ನಿವೃತ್ತಿ ಘೋಷಣೆ ಮಾಡಿದಾಗ ನಾನು ಅವರಿಗೆ ಕರೆ ಮಾಡಿ, ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕೇಳಿದ್ದೆ' ಎಂದು ಸಿದ್ದರಾಮಯ್ಯ ಹೇಳಿದರು.

ಎಂಪಿ ಪ್ರಕಾಶ್ ಪುತ್ರ, ಮಾಜಿ ಶಾಸಕ ಎಂಪಿ ರವೀಂದ್ರ ವಿಧಿವಶಎಂಪಿ ಪ್ರಕಾಶ್ ಪುತ್ರ, ಮಾಜಿ ಶಾಸಕ ಎಂಪಿ ರವೀಂದ್ರ ವಿಧಿವಶ

ಮಾಜಿ ಸಚಿವ ಎಂ.ಪಿ.ಪ್ರಕಾಶ್ ಪುತ್ರ ಎಂ.ಪಿ.ರವೀಂದ್ರ ಅವರು ನವೆಂಬರ್ 3ರಂದು ವಿಧಿವಶರಾಗಿದ್ದರು. 2013ರ ಚುನಾವಣೆಯಲ್ಲಿ ಅವರು ಹರಪನಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2018ರ ಚುನಾವಣೆಯಲ್ಲಿ ಅವರು ಸೋಲು ಅನುಭವಿಸಿದ್ದರು.

ಎಂ.ಪಿ.ರವೀಂದ್ರ ರಾಜಕೀಯ ನಿವೃತ್ತಿ : ಸಿದ್ದರಾಮಯ್ಯ ಹೇಳುವುದೇನು?ಎಂ.ಪಿ.ರವೀಂದ್ರ ರಾಜಕೀಯ ನಿವೃತ್ತಿ : ಸಿದ್ದರಾಮಯ್ಯ ಹೇಳುವುದೇನು?

ಜನ ನನ್ನನ್ನೇ ಸೋಲಿಸಿದರು

ಜನ ನನ್ನನ್ನೇ ಸೋಲಿಸಿದರು

'ಇಂದಿನ ದಿನಗಳಲ್ಲಿ ಜನರು ಕೆಲಸ ಮಾಡುವವರನ್ನು ಮರೆಯುತ್ತಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ನಾಡಿನ ಜನರಿಗಾಗಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿತ್ತು. ನಾನು ಚುನಾವಣೆಯಲ್ಲಿ ಸೋಲುತ್ತೇನೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಆದರೆ, ಚಾಮುಂಡೇಶ್ವರಿ ಕ್ಷೇತ್ರದ ಜನರು ನನ್ನನ್ನೇ ಸೋಲಿಸಿದರು. ಬಾದಾಮಿ ಜನರಿಗೆ ಕೈ ಹಿಡಿದಿದ್ದರಿಂದ ಮಾತನಾಡುವಂತಾಗಿದೆ' ಎಂದು ಸಿದ್ದರಾಮಯ್ಯ ಹೇಳಿದರು.

ಬಾದಾಮಿ ಕ್ಷೇತ್ರದ ಜನರಿಗೆ ಕೃತಜ್ಞತೆ

ಬಾದಾಮಿ ಕ್ಷೇತ್ರದ ಜನರಿಗೆ ಕೃತಜ್ಞತೆ

'2018ರ ವಿಧಾನಸಭೆ ಚುನಾವಣೆ ಫಲಿತಾಂಶದ ದಿನ ಚಾಮುಂಡೇಶ್ವರಿ ಕ್ಷೇತ್ರದ ಫಲಿತಾಂಶ ನೋಡಿ ನಾನು ಒಂದು ಕ್ಷಣ ದಿಗ್ಬ್ರಮೆಗೊಂಡೆ. ಒಂದು ವೇಳೆ ಬಾದಾಮಿ ಕ್ಷೇತ್ರದ ಜನರು ನನ್ನ ಕೈ ಹಿಡಿಯದೇ ಇದ್ದರೆ ನಾನು ಇಲ್ಲಿಯವರೆಗೂ ಬರಲು ಸಾಧ್ಯವಾಗುತ್ತಿರಲಿಲ್ಲ' ಎಂದು ಹೇಳಿದ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸಿದರು.

ಸಿದ್ದರಾಮಯ್ಯ ಸೋಲು

ಸಿದ್ದರಾಮಯ್ಯ ಸೋಲು

2018ರ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು 85283 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು. ಜೆಡಿಎಸ್‌ನ ಜಿ.ಟಿ.ದೇವೇಗೌಡ ಅವರು 121325 ಮತಗಳನ್ನು ಪಡೆದು ಜಯಗಳಿಸಿದ್ದರು. ಆದರೆ, ಸಿದ್ದರಾಮಯ್ಯ ಅವರು ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲಿ ಜಯಗಳಿಸಿದ್ದರು.

ಅಭಿವೃದ್ಧಿ ಕನಸನ್ನು ಹೊಂದಿದ್ದರು

ಅಭಿವೃದ್ಧಿ ಕನಸನ್ನು ಹೊಂದಿದ್ದರು

'ಎಂ.ಪಿ.ರವೀಂದ್ರ ಅವರು ಒಳ್ಳೆಯ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯಾಗಿದ್ದರು. ಸದಾ ಅಭಿವೃದ್ಧಿ ಕನಸನ್ನು ಹೊಂದಿದ್ದರು. ಎಂ.ಪಿ.ಪ್ರಕಾಶ್ ಅವರು ಕೂಡಾ ಉತ್ತಮ ಸಾಹಿತಿ, ಹಾಡುಗಾರ, ಆಡಳಿತಗಾರ. ತಂದೆಯ ಗುಣಗಳನ್ನು ರವೀಂದ್ರ ಅವರು ಬೆಳೆಸಿಕೊಂಡಿದ್ದರು' ಎಂದು ಸಿದ್ದರಾಮಯ್ಯ ಬಣ್ಣಿಸಿದರು.

ಚುನಾವಣೆ ನಿವೃತ್ತಿ ಘೋಷಣೆ ಮಾಡಿದರು

ಚುನಾವಣೆ ನಿವೃತ್ತಿ ಘೋಷಣೆ ಮಾಡಿದರು

'ಎಂ.ಪಿ.ರವೀಂದ್ರ ಅವರು ಏಕಾಏಕಿ ಚುನಾವಣಾ ನಿವೃತ್ತಿ ಘೋಷಣೆ ಮಾಡಿದರು. ಆಗ ನಾನೇ ಅವರಿಗೆ ಕರೆ ಮಾಡಿ ಚುನಾವಣೆಗೆ ಸ್ಪರ್ಧಿಸುವಂತೆ ಕೇಳಿದ್ದೆ. ಆಗ ಅವರು ಹರಪನಹಳ್ಳಿಯನ್ನು 371 ಜೆ ಕಲಂಗೆ ಸೇರಿಸಬೇಕು ಎಂದು ಬೇಡಿಕೆ ಇಟ್ಟಿದ್ದರು. ಅವರ ಮನವಿಯಂತೆ ಹರಪನಹಳ್ಳಿಯನ್ನು 371 ಜೆ ಕಲಂಗೆ ಸೇರಿಸಿದ್ದೆ' ಎಂದು ಸಿದ್ದರಾಮಯ್ಯ ನೆನಪು ಮಾಡಿಕೊಂಡರು.

2018ರ ಚುನಾವಣೆ ಸೋಲು

2018ರ ಚುನಾವಣೆ ಸೋಲು

ಎಂ.ಪಿ.ರವೀಂದ್ರ ಅವರು 2013ರ ಚುನಾವಣೆಯಲ್ಲಿ ಹರಪನಹಳ್ಳಿ ಕ್ಷೇತ್ರದಲ್ಲಿ ಜಯಗಳಿಸಿದ್ದರು. 2018ರ ಚುನಾವಣೆಯಲ್ಲಿ ಬಿಜೆಪಿಯ ಜಿ.ಕರುಣಾಕರ ರೆಡ್ಡಿ ಅವರ ವಿರುದ್ಧ 57956 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು. ನವೆಂಬರ್‌ನಲ್ಲಿ ಅವರು ವಿಧಿವಶರಾಗಿದ್ದಾರೆ.

English summary
Former Chief Minister Siddaramaiah remembered the Karnataka assembly election 2018 defeat in Chamundeshwarichamundeshwari assembly constituency, Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X