• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿದ್ದರಾಮಯ್ಯ ಮಾತನಾಡದಿದ್ದರೆ ಕಳೆದು ಹೋಗ್ತಾರೆ; ಕಟೀಲ್

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜನವರಿ 06: " ಸಿದ್ದರಾಮಯ್ಯ ಅವರು ಸದಾ ಪ್ರಚಾರದಲ್ಲಿ ಇರಬೇಕೆಂದು ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಅವರು ಏನನ್ನಾದರೂ ಮಾತನಾಡದಿದ್ದರೆ ಕಾಂಗ್ರೆಸ್‌ನಲ್ಲಿ ಕಳೆದು ಹೋಗ್ತಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದರು.

ಬುಧವಾರ ದಾವಣಗೆರೆಯಲ್ಲಿ ಮಾತನಾಡಿದ ಅವರು, "ಸಿದ್ದರಾಮಯ್ಯಗೆ ಗೋಹತ್ಯೆ, ಆರ್​ಎಸ್ಎಸ್ ಮೇಲೆ ಕೋಪ ಇಲ್ಲ, ಬದಲಿಗೆ ಕಾಂಗ್ರೆಸ್​​ನಲ್ಲಿ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ಅವರು ತಮ್ಮ ಕೋಪವನ್ನು ಡಿಕೆಶಿ ಮೇಲೆ ತೋರುವ ಬದಲು ಬಿಜೆಪಿ ವಿರುದ್ಧ ಏನೇನೋ ಮಾತನಾಡುತ್ತಿದ್ದಾರೆ" ಎಂದರು.

ನಾಯಕತ್ವ ವಿಚಾರದಲ್ಲಿ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ: ನಳಿನ್ ಕುಮಾರ್ ಕಟೀಲ್ ನಾಯಕತ್ವ ವಿಚಾರದಲ್ಲಿ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ: ನಳಿನ್ ಕುಮಾರ್ ಕಟೀಲ್

"ಕಾಂಗ್ರೆಸ್​​ ಪಕ್ಷದಲ್ಲಿ ಡಿ. ಕೆ. ಶಿವಕುಮಾರ್ ಪ್ರಭಾವ ಹೆಚ್ಚಾಗಿ ಎಲ್ಲಾ ಕಡೆ ಅವರೇ ಕಾಣುತ್ತಿರುವುದರಿಂದ ಸಿದ್ದರಾಮಯ್ಯ ಹೀಗೆಲ್ಲಾ ಮಾಡುತ್ತಿದ್ದಾರೆ. ಮಾತನಾಡಲಿಲ್ಲ ಎಂದರೆ ಪಕ್ಷದಲ್ಲಿ ಅವರು ಕಳೆದು ಹೋಗುತ್ತಾರೆ" ಎಂದು ಟೀಕಿಸಿದರು.

ಸಿದ್ದರಾಮಯ್ಯಗೆ ಮೂಲೆಗುಂಪಾಗುವ ಭಯವಿದೆ: ನಳಿನ್ ಕುಮಾರ್ ಕಟೀಲ್ಸಿದ್ದರಾಮಯ್ಯಗೆ ಮೂಲೆಗುಂಪಾಗುವ ಭಯವಿದೆ: ನಳಿನ್ ಕುಮಾರ್ ಕಟೀಲ್

"ಡಿಕೆಶಿಯನ್ನು ಮುಗಿಸಲು ಪ್ರತಿದಿನ ಸಿದ್ದರಾಮಯ್ಯನವರು ಬಿಜೆಪಿ ನಾಯಕರ ಬಗ್ಗೆ ಮಾಧ್ಯಮಗಳಲ್ಲಿ ಬೇಕಾಬಿಟ್ಟಿಯಾಗಿ ಮಾತನಾಡುತ್ತಿದ್ದಾರೆ. ಡಿಕೆಶಿ ಹಾಗೂ ಸಿದ್ದರಾಮಯ್ಯನವರ ಮಧ್ಯೆ ಸ್ಪರ್ಧೆ ಜಾಸ್ತಿಯಾಗಿದೆ. ಆದ್ದರಿಂದ, ಕಾಂಗ್ರೆಸ್​​ನಲ್ಲಿ ಒಳ ಜಗಳ ಹೆಚ್ಚಾಗಿದೆ" ಎಂದು ಹೇಳಿದರು.

ಸಿದ್ದರಾಮಯ್ಯ, ನಳಿನ್ ಕಟೀಲ್ ಜುಗಲ್ ಬಂದಿ: ಜನರಿಗೆ ಪುಕ್ಸಟೆ ರಸಕವಳ ಸಿದ್ದರಾಮಯ್ಯ, ನಳಿನ್ ಕಟೀಲ್ ಜುಗಲ್ ಬಂದಿ: ಜನರಿಗೆ ಪುಕ್ಸಟೆ ರಸಕವಳ

"ಆರ್​ಎಸ್ಎಸ್​ಗೆ ಅದರದ್ದೇ ಆದ ಕೆಲಸ ಕಾರ್ಯಗಳಿವೆ. ಎಲ್ಲಾ ಸಮುದಾಯಗಳನ್ನು ಜೋಡಿಸುವ ಕಾರ್ಯವನ್ನು ಆರ್​ಎಸ್​ಎಸ್​ ಮಾಡುತ್ತಿದೆ" ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ನಳಿನ್ ಕುಮಾರ್ ಕಟೀಲ್ ಅವರ ನಡುವೆ ಆಗಾಗ ಮಾತಿನ ಮಲ್ಲಯುದ್ಧ ನಡೆಯುತ್ತದೆ. ಸಿದ್ದರಾಮಯ್ಯ ನಳಿನ್ ಕುಮಾರ್‌ ಅವರನ್ನು ಪೋಕರಿ ಎಂದು ಕರೆದಿದ್ದರು. ಅದನ್ನು ಟ್ವೀಟ್ ಸಹ ಮಾಡಿದ್ದರು.

ಸಂಪುಟ ವಿಸ್ತರಣೆ ಬಗ್ಗೆ ಕಟೀಲ್ ಮಾತು

English summary
Karnataka BJP president Nalin Kumar Kateel said that Siddaramaiah facing identity crisis in Congress party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X