ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಗ್ರಾಮಸ್ಥರು ಕುರಿ ಸಾಕಿದ್ದಕ್ಕೆ ದಿನಕ್ಕೆ 80 ಸಾವಿರ ರೂಪಾಯಿ ನಷ್ಟ!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಡಿಸೆಂಬರ್.01: ಅಚ್ಚರಿ ಅನಿಸಿದರೂ ಇದು ಸತ್ಯ ಘಟನೆ. ಈ ಊರಿನ ಜನರು ಅಂತಾ ಮಾಡಿಬಾರದ ತಪ್ಪನ್ನೇನೂ ಮಾಡಿಲ್ಲ. ಹೊಟ್ಟೆಪಾಡಿಗಾಗಿ ಮಾಡುತ್ತಿದ್ದ ದುಡಿಮೆಯೇ ಈಗ ಜನರನ್ನು ಬೀದಿಗೆ ತಳ್ಳುವಂತಾ ಸ್ಥಿತಿ ನಿರ್ಮಾಣವಾಗಿದೆ.

ಕುರಿ ಸಾಕಾಣಿಕೆ ನಡೆಸಿದ ಗ್ರಾಮಸ್ಥರು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಆಗಿದೆ. ಬದುಕಿಗೆ ದಾರಿದೀಪದಂತೆ ಬೆಳಕು ನೀಡುತ್ತಿದ್ದ ಕುರಿಗಳೇ ಸಾವಿನ ಮನೆ ಸೇರುತ್ತಿದ್ದು, ಅವುಗಳ ಮಾಲೀಕ ಆರ್ಥಿಕ ಸಂಕಷ್ಟ ಎಂದ ಕತ್ತಲೆಯಲ್ಲಿ ದಿನ ಕಳೆಯುವಂತಾಗಿದೆ.

ಕೊಪ್ಪದಲ್ಲಿ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಗಮನ ಸೆಳೆದ ಕುರಿಕೊಪ್ಪದಲ್ಲಿ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಗಮನ ಸೆಳೆದ ಕುರಿ

ಅಷ್ಟಕ್ಕೂ ಇಂಥದೊಂದು ಘಟನೆ ನಡೆದಿರುವುದು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಗಂಗನರಸಿ ಗ್ರಾಮದಲ್ಲಿ. ಈ ಗ್ರಾಮದಲ್ಲಿ ಕಾಣಿಸಿಕೊಂಡಿರುವ ವಿಚಿತ್ರ ರೋಗಕ್ಕೆ ಕುರಿಗಳ ಮಾರಣಹೋಮವೇ ಆಗುತ್ತಿದೆ. ದಿನನಿತ್ಯ ಏಳರಿಂದ ಎಂಟು ಕುರಿಗಳು ಪ್ರಾಣ ಬಿಡುತ್ತಿದ್ದು, ಕುರಿಗಾಹಿಗಳು ಕಣ್ಣು ಕಣ್ಣು ಬಿಡುವಂತೆ ಆಗಿದೆ.

Sheep Deaths From A Strange Disease

ಹೌದು, ವಿಚಿತ್ರ ಖಾಯಿಯಿಂದ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗಂಗನರಸಿ ಗ್ರಾಮದಲ್ಲಿ ಈಗಾಗಲೇ ನೂರಾರು ಕುರಿಗಳು ಬಲಿಯಾಗಿವೆ. ನೀಲಿ ನಾಲಿಗೆ ರೋಗದಿಂದ ದಿನೇ ದಿನೆ ಸಾವನ್ನಪ್ಪುತ್ತಿದ್ದು, ಕುರಿಗಾಹಿಗಳನ್ನು ಚಿಂತೆಗೀಡು ಮಾಡಿದೆ.

ಬ್ಯಾಕ್ಟೀರಿಯಾ ಸೋಂಕು; ಶಿಕಾರಿಪುರದಲ್ಲಿ ರಾತ್ರಿ ಕಳೆದು ಬೆಳಗಾಗುವುದರಲ್ಲಿ 60 ಕುರಿಗಳು ಸಾವುಬ್ಯಾಕ್ಟೀರಿಯಾ ಸೋಂಕು; ಶಿಕಾರಿಪುರದಲ್ಲಿ ರಾತ್ರಿ ಕಳೆದು ಬೆಳಗಾಗುವುದರಲ್ಲಿ 60 ಕುರಿಗಳು ಸಾವು

ದಿನಕ್ಕೆ ಏಳರಿಂದ ಎಂಟು ಕುರಿಗಳ ಸಾವನ್ನಪ್ಪುತ್ತಿದ್ದು, ಯಾವ ಕಾರಣಕ್ಕೆ ಕುರಿಗಳಿಗೆ ಈ ರೋಗ ಬರುತ್ತಿದೆ ಎನ್ನುವುದೇ ಕುರಿಗಾಹಿಗಳಿಗೆ ತಿಳಿಯದಂತಾಗಿದೆ. ಒಂದೊಂದು ಕುರಿಗೆ 10 ರಿಂದ 12 ಸಾವಿರ ಬೆಲೆ ಬಾಳುತ್ತಿವೆ. ಪ್ರತಿನಿತ್ಯ 7 ರಿಂದ 8 ಕುರಿಗಳು ಸಾವನ್ನಪ್ಪಿದ್ದು, ಕುರಿಗಾಯಿಗಳಿಗೆ ದಿನಕ್ಕೆ 70 ರಿಂದ 80 ಸಾವಿರ ರೂಪಾಯಿ ನಷ್ಟವಾಗುತ್ತಿದೆ.

ಆರೋಗ್ಯವಾಗಿ ಮೇವು ತಿನ್ನುತ್ತಿದ್ದ ಕುರಿಗಳಿಗೆ ಇದ್ದಕ್ಕಿದ್ಸಂತೆ ವಿಚಿತ್ರ ರೋಗದಿಂದ ಸಾವನ್ನಪ್ಪುತ್ತಿದ್ದು ಮಾಲೀಕರಲ್ಲಿ ಆತಂಕ ಸೃಷ್ಟಿಯಾಗುದ್ದು. ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಪಶು ಇಲಾಖೆಗೆ ಕುರಿ ಮಾಲೀಕರ ಆಗ್ರಹಿಸುತ್ತಿದ್ದಾರೆ.

English summary
Sheep Deaths From A Strange Disease In Davanagere. Increased anxiety In Shepherds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X