ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಿಂಗಾಯತ ಪ್ರತ್ಯೇಕ ಧರ್ಮ : ಶಾಮನೂರು ಶಿವಶಂಕರಪ್ಪ ಹೇಳುವುದೇನು?

|
Google Oneindia Kannada News

ದಾವಣಗೆರೆ, ಮಾರ್ಚ್ 19 : 'ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಬಹಳ ದಿನಗಳಿಂದ ನೆನಗುದಿಗೆ ಬಿದ್ದಿತ್ತು, ಇಂದು ಸುಖ್ಯಾಂತವಾಗಿದೆ. ಕೆಲವೊಂದು ಕರಾರುಗಳನ್ನು ಹಾಕಿ ಶಿಫಾರಸು ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿದೆ' ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.

ಸೋಮವಾರ ದಾವಣಗೆರೆಯಲ್ಲಿ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರು, 'ವೀರಶೈವ ಲಿಂಗಾಯತ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಮಾಡುವ ಇಬ್ಬರನ್ನೂ ಸಮಾಧಾನ ಮಾಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ' ಎಂದರು.

ಲಿಂಗಾಯತ ಪ್ರತ್ಯೇಕ ಧರ್ಮ: ಯಾರು, ಏನು ಹೇಳಿದರು?ಲಿಂಗಾಯತ ಪ್ರತ್ಯೇಕ ಧರ್ಮ: ಯಾರು, ಏನು ಹೇಳಿದರು?

'ತಜ್ಞರ ವರದಿ ಮೂಲೆ ಗುಂಪಾಗಿದೆ, ಸರ್ಕಾರದ ನಿರ್ಧಾರಕ್ಕೆ ಒಪ್ಪಿಗೆ ಕೊಡಬಹುದು. ಸಮಾಜದ ಮುಖಂಡರನ್ನು ಕರೆದು ಮುಂದಿನ ದಿನಗಳಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ' ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.

Shamanur Shivashankarappa

'ವೀರಶೈವ ಲಿಂಗಾಯತ ಬಸವತತ್ವ ಎಲ್ಲವೂ ಸೇರಿ 2ಬಿಗೆ ಶಿಫಾರಸು ಮಾಡಲಾಗಿದೆ. ಅದು ಶೈಕ್ಷಣಿಕ ಉದ್ದೇಶಕ್ಕೆ ಮಾತ್ರವಿದ್ದು, ಉದ್ಯೋಗಕ್ಕೆ ಸೀಮಿತವಾಗಿಲ್ಲ. ಸರ್ಕಾರದ ನಿರ್ಧಾರ ಎಲ್ಲರಿಗೂ ಸಮಾಧಾನ ತಂದಿದೆ' ಎಂದು ಹೇಳಿದರು.

ಟ್ವೀಟ್ಸ್ : 'ಒಡೆದು ಆಳುವ ನೀತಿ ಕಾಂಗ್ರೆಸ್ಸಿಗೆ ಬ್ರಿಟಿಷರ ಕೊಡುಗೆಟ್ವೀಟ್ಸ್ : 'ಒಡೆದು ಆಳುವ ನೀತಿ ಕಾಂಗ್ರೆಸ್ಸಿಗೆ ಬ್ರಿಟಿಷರ ಕೊಡುಗೆ

English summary
Akhila Bharat Veerashaiva Mahasabha president Shamanur Shivashankarappa comment on Lingayat separate religion issue. Karnataka cabinet accepts Justice Nagamohan Das report on Lingayat row.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X