ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಲೆ ಆರಂಭ; ಹೂಮಳೆ ಸುರಿಸಿ, ಚಾಕಲೇಟ್ ನೀಡಿ ಮಕ್ಕಳಿಗೆ ಸ್ವಾಗತ!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಅಕ್ಟೋಬರ್ 25; ಒಂದರಿಂದ 5 ನೇ ತರಗತಿಯ ಶಾಲೆಗಳು ಸೋಮವಾರದಿಂದ ಆರಂಭವಾಗಿವೆ. ಮಕ್ಕಳು ಉತ್ಸಾಹದಿಂದಲೇ ಆಗಮಿಸಿದ್ದಾರೆ. ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ವಿಶೇಷವಾಗಿ ಮಕ್ಕಳನ್ನು ಬರಮಾಡಿಕೊಳ್ಳಲಾಗಿದೆ. ಮಕ್ಕಳಿಗೂ ಶಾಲೆಗೆ ಬಂದ ಖುಷಿಯ ಜೊತೆಗೆ ವಿಶೇಷ ಆತಿಥ್ಯ ಸಿಕ್ಕಿದೆ.

ದಾವಣಗೆರೆ ಮಹಾನಗರ ಪಾಲಿಕೆಯ 21ನೇ ವಾರ್ಡಿನ ಬಸಾಪುರದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೂಮಳೆ ಸುರಿಸಿ ಮಕ್ಕಳಿಗೆ ಸ್ವಾಗತ ಕೋರಲಾಗಿದೆ. ಬಸಾಪುರ ಸರ್ಕಾರಿ ಶಾಲಾ
ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಮಕ್ಕಳನ್ನು ಬರಮಾಡಿಕೊಂಡರು.

ದಾವಣಗೆರೆ ಮೇಯರ್ ಕಾರಿಗೆ ಸಿನಿಮಾ ಸ್ಟೈಲ್‌ನಲ್ಲಿ ಬೈಕ್ ಡಿಕ್ಕಿ: ಹೆಲ್ಮೆಟ್ ಉಳಿಸಿತು ಪ್ರಾಣ! ದಾವಣಗೆರೆ ಮೇಯರ್ ಕಾರಿಗೆ ಸಿನಿಮಾ ಸ್ಟೈಲ್‌ನಲ್ಲಿ ಬೈಕ್ ಡಿಕ್ಕಿ: ಹೆಲ್ಮೆಟ್ ಉಳಿಸಿತು ಪ್ರಾಣ!

ಎರಡು ವರ್ಷಗಳಿಂದ ಶಾಲೆಗೆ ತೆರಳದೆ ಮನೆಯಲ್ಲೇ ಇದ್ದ 1-5ನೇ ತರಗತಿಯ ಮಕ್ಕಳು ಸೋಮವಾರ ಹುಮ್ಮಸ್ಸಿನಿಂದ ಶಾಲೆಗೆ ಆಗಮಿಸಿದ್ದರು. ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗ ಮತ್ತು ಎಸ್‌ಡಿಎಂಸಿ ಅಧ್ಯಕ್ಷ ಸಿದ್ದಾರ್ಥ್, ಉಪಾಧ್ಯಕ್ಷೆ ನಾಗವೇಣಿ ಹಾಗೂ ಸದಸ್ಯರು ಮಕ್ಕಳಿಗೆ ಹೂಮಳೆ ಸುರಿಸಿ, ಗುಲಾಬಿ ಹೂ, ಚಾಕಲೇಟ್ ನೀಡುವ ಮೂಲಕ ಸಂತೋಷದಿಂದ ಶಾಲೆಗೆ ಸ್ವಾಗತಿಸಿದರು.

20 ತಿಂಗಳುಗಳ ನಂತರ ಪ್ರಾಥಮಿಕ ಶಾಲೆ ಆರಂಭ: ಮಾರ್ಗಸೂಚಿಗಳು ಇಲ್ಲಿದೆ20 ತಿಂಗಳುಗಳ ನಂತರ ಪ್ರಾಥಮಿಕ ಶಾಲೆ ಆರಂಭ: ಮಾರ್ಗಸೂಚಿಗಳು ಇಲ್ಲಿದೆ

School Reopen Students Welcomes In Davanaere With Flower

ಸುಮಾರು 280 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವ ಶಾಲೆಯಲ್ಲಿ ಇಂದು ಹಬ್ಬದ ವಾತಾವರಣವಿತ್ತು. ಈ ಸಂದರ್ಭದಲ್ಲಿ ನೂತನವಾಗಿ ಆಂಗ್ಲಭಾಷಾ ಶಿಕ್ಷಕರಾಗಿ ಶಾಲೆಗೆ ಆಗಮಿಸಿದಂತಹ ಶಿಕ್ಷಕ ರವಿ ಬಿ. ಸಿ. ಅವರನ್ನು ಸಹ ಆತ್ಮೀಯವಾಗಿ ಸ್ವಾಗತಿಸಲಾಯಿತು. ಎರಡನೇ ತರಗತಿ ಶಿಕ್ಷಕಿ ನಿಂಗಮ್ಮ ಕೆ.ಎಂ. ತಮ್ಮ ತರಗತಿಯ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್ಸಿಲ್ ನೀಡುವ ಮೂಲಕ ವಿಶೇಷವಾಗಿ ಸ್ವಾಗತಿಸಿದರು.

1 ರಿಂದ 5ನೇ ತರಗತಿ ಶಾಲೆ ಓಪನ್; ವೇಳಾಪಟ್ಟಿ ಪ್ರಕಟ 1 ರಿಂದ 5ನೇ ತರಗತಿ ಶಾಲೆ ಓಪನ್; ವೇಳಾಪಟ್ಟಿ ಪ್ರಕಟ

ಈ ಸಂದರ್ಭದಲ್ಲಿ ಪ್ರಭಾರಿ ಮುಖ್ಯೋಪಾಧ್ಯಾಯರಾದ ಸಂತೋಷ್ ಕುಮಾರ್, ಎಸ್‌. ಡಿ. ಎಂ. ಸಿ. ಸದಸ್ಯರಾದ ತಿಪ್ಪೇಶ್, ಮಹಾಂತೇಶ್, ರಮೇಶ್, ಗುರುಸಿದ್ದಯ್ಯ, ಸಂತೋಷ್, ಸುನೀತ, ಸುಮಿತ್ರ, ಪುಷ್ಪ, ಗ್ರಾಮಸ್ಥರಾದ ಕೆ. ಎಲ್.ಹರೀಶ್, ಬಾತಿ ಜಯರಾಜ್, ಕರಿಬಸಪ್ಪ, ಗಣೇಶ್, ಹಾಲೇಶ್, ಶಾಲೆಯ ಶಿಕ್ಷಕರು ಹಾಗೂ ಶಾಲಾ ಅಕ್ಷರ ದಾಸೋಹ ಕಾರ್ಯಕರ್ತರು,
ಪೋಷಕರು ಹಾಗೂ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.

ಢಣಢಣ ಗಂಟೆ ಸದ್ದು; ಕೊರೊನಾ ಲಾಕ್‌ಡೌನ್ ಬಳಿಕ ಪ್ರಾಥಮಿಕ ಶಾಲಾ ತರಗತಿಗಳು ಇಂದಿನಿಂದ ಪುನಾರಂಭಗೊಂಡಿವೆ. ಮತ್ತೆ ಶಾಲೆಗಳಲ್ಲಿ ಢಣಢಣ ಗಂಟೆ ಸದ್ದು, ಮಕ್ಕಳ ಕಲರವ, ಸದ್ದು, ಗದ್ದಲ, ಮಕ್ಕಳ ಕಿರುಚಾಟ, ಗಲಾಟೆ ಶುರುವಾಗಿದೆ.

ಇಂದಿನಿಂದ ಪ್ರಾಥಮಿಕ ಶಾಲೆಗಳ 1 ರಿಂದ 5ನೇ ತರಗತಿಗಳು ಮತ್ತೆ ಆರಂಭವಾದ ಹಿನ್ನಲೆಯಲ್ಲಿ ಒಂದೂವರೆ ವರ್ಷದ ನಂತರ ಪ್ರಾಥಮಿಕ ಶಾಲೆಗಳ ಬಾಗಿಲು ತೆರೆಯಲಾಗಿದೆ. ದಾವಣಗೆರೆಯಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಇಂದು ಮಕ್ಕಳು ಆಗಮಿಸಿದ್ದಾರೆ.

ಮಕ್ಕಳ ಆಗಮನ ಹಿನ್ನೆಲೆಯಲ್ಲಿ ಬೆಣ್ಣೆನಗರಿ ದಾವಣಗೆರೆ ನಗರ ಹಾಗೂ ಜಿಲ್ಲೆಯ ಶಾಲೆಗಳಲ್ಲಿ ಶಿಕ್ಷಕರು ಕೂಡ ಸ್ವಾಗತಕ್ಕೆ ಸಿದ್ದತೆಯನ್ನ ಮಾಡಿಕೊಂಡಿದ್ದು, ಮೊದಲ ದಿನ ಶಾಲೆಗೆ ಬಂದ ಮಕ್ಕಳಿಗೆ ಹೂ, ಹಣ್ಣು ಮತ್ತು ಕೆಲವೆಡೆ ಚಾಕ್ ಲೇಟ್ ಹಾಗೂ ಸ್ವೀಟ್ ಅನ್ನ ನೀಡಿ ಸ್ವಾಗತಿಸಲಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿ ಪ್ರಾಥಮಿಕ ಒಟ್ಟು 1,713 ಶಾಲೆಗಳಿದ್ದು, ಶಾಲಾ ಶಿಕ್ಷಕರಿಗೆ ಲಸಿಕಾಕರಣ ಸಂಪೂರ್ಣವಾಗಿದೆ. ಈ ಪೈಕಿ ದಾವಣಗೆರೆ ತಾಲೂಕಿನಲ್ಲಿ 617, ಹರಿಹರ 237, ಹೊನ್ನಾಳಿ 266, ಚನ್ನಗಿರಿ 363, ಜಗಳೂರು ತಾಲೂಕಿನಲ್ಲಿ 230 ಪ್ರಾಥಮಿಕ ಶಾಲೆಗಳಿವೆ. ಇನ್ನು, ದಾವಣಗೆರೆ ಜಿಲ್ಲಾದ್ಯಂತ ಒಟ್ಟು 1,34,291 ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ದಾವಣಗೆರೆ ತಾಲೂಕಿನಲ್ಲಿ 60,041, ಹರಿಹರ 20,745, ಹೊನ್ನಾಳಿ 16,591, ಚನ್ನಗಿರಿ 22,426, ಜಗಳೂರು 14,488 ವಿದ್ಯಾರ್ಥಿಗಳಿದ್ದಾರೆ.

ಕೊರೊನಾ ಬಗ್ಗೆ ಎಚ್ಚರ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಕೋವಿಡ್‌ ನಿಯಮಾವಳಿ ಪಾಲನೆ ಕಡ್ಡಾಯ ಮಾಡಲಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ ಮಾಸ್ಕ್‌, ಶಾಲೆಯಲ್ಲಿ ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ಯಾನಿಂಗ್‌ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಕುಡಿಯುವ ನೀರು ಮನೆಯಿಂದಲೇ ತರಲು ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿತ್ತು.

English summary
Schools for students of classes 1 to 5 reopened in Karnataka on Monday with strict Covid-19 protocol. In Davanagere students welcomed with flower and chocolate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X