ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ: ಗೊಂದಲಕ್ಕೆ ತೆರೆ, ಕೈ ಅಭ್ಯರ್ಥಿ ಪರ ಸಮೀವುಲ್ಲಾ ಪ್ರಚಾರ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮೇ 15: ಕಾಂಗ್ರೆಸ್ ಪಕ್ಷ ಸೇರಿ, ಬಳಿಕ ರಾಜಕೀಯ ನಾಟಕದ ಬೆಳವಣಿಗೆ ನಡೆದು ಬಳಿಕ ಜೆಡಿಎಸ್ ಅಭ್ಯರ್ಥಿ ಅಧಿಕೃತವಾಗಿ ಕೈ ಅಭ್ಯರ್ಥಿ ಪರ ಪ್ರಚಾರ ಮಾಡಲು ಬರುವ ಮೂಲಕ ಎಲ್ಲಾ ಊಹಾಪೋಹಗಳು, ವದಂತಿಗೆ ತೆರೆ ಎಳೆದಿದ್ದಾರೆ.

ದಾವಣಗೆರೆ ಮಹಾನಗರ ಪಾಲಿಕೆಯ 28ನೇ ವಾರ್ಡ್ ಭಗತ್ ಸಿಂಗ್ ನಗರ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿಯಾಗಿದ್ದ ಸಮೀವುಲ್ಲಾ ಕಳೆದ ಎರಡು ದಿನಗಳ ಹಿಂದೆಯಷ್ಟೇ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಸಮ್ಮುಖದಲ್ಲಿ ಕಲ್ಲೇಶ್ವರ ರೈಸ್ ಮಿಲ್ ನಲ್ಲಿ ಕಾಂಗ್ರೆಸ್ ಧ್ವಜ ಹಿಡಿದಿದ್ದರು. ತಾನು ಕಾಂಗ್ರೆಸ್ ಅಭ್ಯರ್ಥಿ ಹುಲ್ಲುಮನೆ ಗಣೇಶ್ ಪರ ಪ್ರಚಾರ ಮಾಡುವುದಾಗಿ ಹೇಳಿದ್ದರು.

ಆದ್ರೆ ನಿನ್ನೆ ಆದ ಕೆಲ ಬದಲಾವಣೆ ಹಿನ್ನೆಲೆ ಗೊಂದಲ ಸೃಷ್ಟಿಯಾಗಿತ್ತು. ರಾಜಕೀಯ ಡ್ರಾಮಾಕ್ಕೂ ಕಾರಣವಾಗಿತ್ತು. ಆದ್ರೆ ಇಂದು ಸಮೀವುಲ್ಲಾ ಅವರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲು ಆಗಮಿಸುವ ಮೂಲಕ ಎಲ್ಲಾ ಅನುಮಾನಕ್ಕೂ ತೆರೆ ಎಳೆದಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಅಭ್ಯರ್ಥಿಗೆ ಬಲ ಬಂದಂತಾಗಿದೆ.

Samiulla campaigns for Congress candidates and clears all confusion and rumours

ಜೆಡಿಎಸ್ ಪಕ್ಷದಿಂದ ಬಿ ಫಾರಂ ಪಡೆದು ಭಗತ್ ಸಿಂಗ್ ನಗರ ವಾರ್ಡ್‌ನಿಂದ ಕಣಕ್ಕಿಳಿದಿದ್ದೆ. ಕಾಂಗ್ರೆಸ್ ಪಕ್ಷ ಸೇರಿಲ್ಲ ಎಂದು ಜೆಡಿಎಸ್ ಅಭ್ಯರ್ಥಿ ಸಮೀವುಲ್ಲಾ ಉಲ್ಟಾ ಹೊಡೆದಿದ್ದರು ಎನ್ನಲಾಗಿದೆ. ಜೆ. ಅಮಾನುಲ್ಲಾ ಖಾನ್ ಸೇರಿದಂತೆ ಜೆಡಿಎಸ್ ಮುಖಂಡರು ಬಿ ಫಾರಂ ಪಡೆದು ಅಭ್ಯರ್ಥಿಯಾಗಿ ಕಣಕ್ಕಿಳಿದ ಬಳಿಕ ಯಾಕೆ ಹಿಂದೆ ಸರಿಯುವುದು, ಹಣಕ್ಕೆ ಮಾರಿಕೊಂಡರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಜೆಡಿಎಸ್‌ನ ಮೂಲಗಳು ತಿಳಿಸಿವೆ.

Samiulla campaigns for Congress candidates and clears all confusion and rumours

Recommended Video

ಜಿತೇಂದ್ರ ಶರ್ಮಾ ಇದ್ದಿದ್ರೆ ಗೆಲುವು ನಮ್ಮದೆ! | Oneindia Kannada

ಸಮೀವುಲ್ಲಾ ಅವರು ತನು, ಮನ, ಧನದಿಂದ ಸ್ವಯಂಪ್ರೇರಿತರಾಗಿ ಬಂದಿದ್ದಾರೆ. ನಾನು ನಿಮ್ಮ ಜೊತೆ ಇರುತ್ತೇನೆ. ನಿಮ್ಮ ಜೊತೆ ನಾನು ಇರುತ್ತೇನೆ ಎಂದು ಮುಸ್ಲಿಂ ಸಮಾಜದ ಮುಖಂಡರ ಸಮ್ಮುಖದಲ್ಲಿ ಸಮೀವುಲ್ಲಾ ಹೇಳಿದ್ದಾರೆ. ಮಲ್ಲಣ್ಣನವರ ಅಭಿವೃದ್ಧಿ ಕೆಲಸ, ವಾರ್ಡ್ ನ ಕೆಲಸ ಕಾರ್ಯಗಳ ಬಗ್ಗೆ ಆಶ್ವಾಸನೆ ಸಿಕ್ಕಿದೆ. ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಬಂದಿದ್ದಾರೆ. ನಾವೆಲ್ಲರೂ ಧನ್ಯವಾದ ಅರ್ಪಿಸುತ್ತೇನೆ. ಮೇ. 20ರವರೆಗೆ ನಮ್ಮ ಜೊತೆಗೆ ಇರುತ್ತೇವೆ ಎಂದು ಸಮೀವುಲ್ಲಾ ಹೇಳಿದ್ದು, ಹುಲ್ಲುಮನೆ ಗಣೇಶ್ ಅವರ ಗೆಲುವಿಗೆ ಶ್ರಮಿಸಲಿದ್ದಾರೆ ಕಾಂಗ್ರೆಸ್ ನ ಅಲ್ಪಸಂಖ್ಯಾತ ಮುಖಂಡರು ತಿಳಿಸಿದ್ದಾರೆ.

English summary
Samiulla campaigns for Congress candidates and clears all confusion and rumours .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X