ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇ 17 ರವರೆಗೆ ಮದ್ಯ ಮಾರಾಟಕ್ಕೆ ಅವಕಾಶ: ಮಹಾಂತೇಶ ಬೀಳಗಿ

|
Google Oneindia Kannada News

ದಾವಣಗೆರೆ ಮೇ.13: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮೇ 4 ರಂದು ಜಾರಿ ಮಾಡಲಾಗಿದ್ದ ಮದ್ಯ ನಿಷೇಧ ಆದೇಶವನ್ನು ಹಿಂಪಡೆಯಲಾಗಿರುತ್ತದೆ. ಹಾಲಿ ಇರುವ ಮದ್ಯ ದಾಸ್ತಾನು ಮುಗಿಯುವವರೆಗೂ ಅಥವಾ ಮೇ 17 ರವರೆಗೆ ಮಾತ್ರ ಮಾರಾಟಕ್ಕೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ಅಬಕಾರಿ ಆಯುಕ್ತಾಲಯದ ಆದೇಶದಂತೆ ಹಾಲಿ ಮುಚ್ಚಲಾಗಿರುವ ಸಿಎಲ್-4, ಸಿಎಲ್-7 ಮತ್ತು ಸಿಎಲ್-9 ಸನ್ನದುಗಳನ್ನು ಸಿಎಲ್-2 ಸನ್ನದುಗಳ ರೀತಿಯಲ್ಲಿ ಮೇ 17 ರವರೆಗೆ ಹಾಲಿ ಇರುವ ಮದ್ಯ/ಬಿಯರ್ ದಾಸ್ತಾನು ಖಾಲಿ ಆಗುವವರೆಗೆ ಅಥವಾ ಮೇ17 ರವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಮಾತ್ರ ಕಾರ್ಯನಿರ್ವಹಿಸಲು ಕೆಲವು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ದಾವಣಗೆರೆಯಲ್ಲಿ ಷರತ್ತುಬದ್ಧ ವ್ಯಾಪಾರಕ್ಕೆ ಅನುಮತಿ; ವಹಿವಾಟು ಆರಂಭದಾವಣಗೆರೆಯಲ್ಲಿ ಷರತ್ತುಬದ್ಧ ವ್ಯಾಪಾರಕ್ಕೆ ಅನುಮತಿ; ವಹಿವಾಟು ಆರಂಭ

ಈ ಆದೇಶವು ಜಿಲ್ಲಾಡಳಿತವು ಘೋಷಿಸಿರುವ ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಇರುವಂತಹ ಸನ್ನದುಗಳಿಗೆ ಅನ್ವಯವಾಗುವುದಿಲ್ಲ ಮತ್ತು ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಮದ್ಯ ಮಾರಾಟ ಸನ್ನದುಗಳು ಕಾರ್ಯ ನಿರ್ವಹಿಸುವಂತಿಲ್ಲ.

Sale of Liquor allowed till May 17 : DC Mahantesh Bilagi

ಕಾರ್ಯನಿರ್ವಹಿಸುವ ಸನ್ನದುಗಳು ಆದೇಶಿತ ಅವಧಿಯಲ್ಲಿ ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆವರೆಗೆ ಮಾತ್ರವೇ ಮದ್ಯ ಮಹಿವಾಟನ್ನು ನಡೆಸುವುದು. ಉಳಿದಂತೆ ರೆಸ್ಟೋರೆಂಟ್‍ನಲ್ಲಿ ಕೇವಲ ಪಾರ್ಸಲ್ ರೂಪದಲ್ಲಿ ಮಾತ್ರ ನೀಡಲು ಅನುಮತಿ ನೀಡಲಾಗಿದೆ.

ಮದ್ಯ ವ್ಯಸನಿಗಳ ಕಾಟ: ಬಾರ್ ಬಂದ್ ಮಾಡಿಸಿದ ಗ್ರಾಮಸ್ಥರುಮದ್ಯ ವ್ಯಸನಿಗಳ ಕಾಟ: ಬಾರ್ ಬಂದ್ ಮಾಡಿಸಿದ ಗ್ರಾಮಸ್ಥರು

ಸನ್ನದು ಮಳಿಗೆಯಲ್ಲಿ ಕೇವಲ 5 ಜನರು ಮಾತ್ರ ಗ್ರಾಹಕರು ಇರುವಂತೆಯು ಹಾಗೂ ಅವರುಗಳು ಸಾಮಾಜಿಕ ಅಂತರವಾದ 6 ಅಡಿಗಳಿಗೆ ಕಡಿಮೆ ಇಲ್ಲದಂತೆ ಕಾಪಾಡಿಕೊಳ್ಳುವುದು ಸೇರಿದಂತೆ ಇತರೆ ಷರತ್ತುಗಳನ್ನು ಅನುಸರಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ

English summary
Sale of Liquor allowed till May 17 in Davanagere District and no sales in Containment Zones sadi DC Mahantesh Bilagi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X