ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕಿತ್ಸೆಗೆ ಬಾರದ ತಬ್ಲಿಘಿಗಳನ್ನು ಗುಂಡಿಟ್ಟು ಕೊಲೆ ಮಾಡಿದರೂ ತಪ್ಪಿಲ್ಲ- ರೇಣುಕಾಚಾರ್ಯ

|
Google Oneindia Kannada News

ದಾವಣಗೆರೆ, ಏಪ್ರಿಲ್ 07: ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದರ ಬಗ್ಗೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮಾತನಾಡಿದ್ದಾರೆ. ಚಿಕಿತ್ಸೆ ಪಡೆಯದ ತಬ್ಲಿಘಿಗಳ ಮೇಲೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗಿಯಾಗಿ ಬಂದು ಚಿಕಿತ್ಸೆ ಪಡೆಯದ ಬಾರದವರನ್ನು ದೇಶದ್ರೋಹಿಗಳು ಎಂದಿದ್ದಾರೆ. ಹೀಗೆ ಮಾಡುವವರನ್ನು ಗುಂಡಿಟ್ಟು ಕೊಂದರು ತಪ್ಪಿಲ್ಲ ಎಂದು ಕೋಪದಿಂದ ನುಡಿದಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು ವೈರಸ್‌ ಹರಡಿಸುವವರು ಭಯೋತ್ಪಾದಕರು ಇದ್ದಂತೆ ಎಂದಿದ್ದಾರೆ.

ತಬ್ಲಿಘಿ ಜಮಾತ್ ಸಂಪೂರ್ಣ ನಿಷೇಧಕ್ಕೆ ವಿಶ್ವ ಹಿಂದೂ ಪರಿಷತ್ ಆಗ್ರಹತಬ್ಲಿಘಿ ಜಮಾತ್ ಸಂಪೂರ್ಣ ನಿಷೇಧಕ್ಕೆ ವಿಶ್ವ ಹಿಂದೂ ಪರಿಷತ್ ಆಗ್ರಹ

ಲಾಕ್‌ಡೌನ್ ನಿರ್ಬಂಧವನ್ನು ಉಲ್ಲಂಘನೆ ಮಾಡಿ ದೆಹಲಿಯಲ್ಲಿ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಸಭೆ ಮಾಡಲಾಗಿತ್ತು. ಸಾವಿರಾರೂ ಸಂಖ್ಯೆಯ ಮುಸ್ಲಿಮರು ಇದರಲ್ಲಿ ಭಾಗಿಯಾಗಿದ್ದರು. ಇಲ್ಲಿಂದ ಬೇರೆ ಬೇರೆ ಭಾಗಗಳಿಂದ ತೆರಳಿದ ತಬ್ಲಿಘಿಗಳಿಂದ ಭಾರತದಲ್ಲಿ ಇನ್ನಷ್ಟು ವೈರಸ್‌ ಜಾಸ್ತಿಯಾಯ್ತು. ಕರ್ನಾಟಕದಲ್ಲಿಯೂ ಪಾಸಿಟಿವ್ ಪ್ರಕರಣಗಳು ಹೆಚ್ಚಾಯ್ತು.

ನಿಜಾಮುದ್ದೀನ್ ಸಭೆಗೆ ಅನುಮತಿ ಯಾರು ನೀಡಿದ್ದರು?: ಶರದ್ ಪವಾರ್ ಪ್ರಶ್ನೆನಿಜಾಮುದ್ದೀನ್ ಸಭೆಗೆ ಅನುಮತಿ ಯಾರು ನೀಡಿದ್ದರು?: ಶರದ್ ಪವಾರ್ ಪ್ರಶ್ನೆ

ವೈರಸ್‌ ತಡೆಯಲು ಸರ್ಕಾರ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗಿಯಾದವರ ಮೇಲೆ ತೀವ್ರ ನಿಗಾ ಇಟ್ಟಿದೆ. ಆದರೆ, ಕೆಲವರು ಚಿಕಿತ್ಸೆಗೆ ಬಾರದೆ ಗುಟ್ಟಾಗಿ ಇದ್ದಾರೆ. ಕೆಲವರು ವೈರಸ್‌ ಹರಡುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಆರೋಪವೂ ಇದೆ.

ಗುಂಡಿಟ್ಟು ಕೊಂದರೂ ತಪ್ಪಿಲ್ಲ

ಗುಂಡಿಟ್ಟು ಕೊಂದರೂ ತಪ್ಪಿಲ್ಲ

ದಾವಣಗೆರೆಯಲ್ಲಿ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದರ ಬಗ್ಗೆ ಶಾಸಕ ರೇಣುಕಾಚಾರ್ಯ ಮಾತನಾಡಿದ್ದಾರೆ. ಚಿಕಿತ್ಸೆಗೆ ಬಾರದೆ, ವೈರಸ್ ಹಬ್ಬಿಸಲು ಪ್ರಯತ್ನ ಮಾಡುತ್ತಿರುವ ತಬ್ಲಿಘಿಗಳನ್ನು ಗುಂಡಿಟ್ಟು ಕೊಂದರೂ ತಪ್ಪಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು ಮನವಿ ಮಾಡಿದರೂ ಕೆಲವರು ಉದ್ದೇಶಪೂರ್ವಕವಾಗಿ ಹೀಗೆ ಮಾಡುತ್ತಿದ್ದಾರೆ ಎಂದರು.

ಇದು ದೇಶದ್ರೋಹದ ಕೆಲಸ

ಇದು ದೇಶದ್ರೋಹದ ಕೆಲಸ

ಚಿಕಿತ್ಸೆ ಬಾರದೆ ಇರುವ ತಬ್ಲಿಘಿಗಳನ್ನು ದೇಶದ್ರೋಹಗಳು ಎಂದಿರುವ ರೇಣುಕಾಚಾರ್ಯ, ವೈರಸ್ ಹರಿಸುವುದು ದೇಶಾದ್ರೋಹದ ಕೆಲಸ ಎಂದು ಹೇಳಿಕೆ ನೀಡಿದ್ದಾರೆ. ಲಾಕ್ ಡೌನ್ ನಿಂದ ದೇಶದಲ್ಲಿ ಕೊರೊನಾ ಪ್ರಕರಣಗಳು ಕಡಿಮೆ ಆಗುತ್ತಿತ್ತು. ಆದರೆ, ದೆಹಲಿ ಸಭೆಗೆ ಹೋದ ಹಲವರು ಅಲ್ಲಿಂದ ನೇರವಾಗಿ ಆಸ್ಪತ್ರೆಗೆ ಹೋಗದೇ, ಜನರ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದ್ದಾರೆ ಹೀಗಾಗಿ ವೈರಸ್ ಹೆಚ್ಚಾಗಿದೆ ಎಂದಿದ್ದಾರೆ.

ಒಬ್ಬ ವ್ಯಕ್ತಿಯಿಂದ ಹರಡಿದ ವೈರಸ್‌

ಒಬ್ಬ ವ್ಯಕ್ತಿಯಿಂದ ಹರಡಿದ ವೈರಸ್‌

ಚೀನಾದಲ್ಲಿ ಒಬ್ಬ ವ್ಯಕ್ತಿಯಿಂದ ಇಡೀ ವಿಶ್ವಕ್ಕೆ ವೈರಸ್ ಹರಡಿದೆ. ಹೀಗಾಗಿ ದೆಹಲಿ ನಿಜಾಮುದ್ದೀನ್ ಸಭೆಯಲ್ಲಿ ಭಾಗಿಯಾಗಿದ್ದವರು ಚಿಕಿತ್ಸೆಗೆ ತೆರಳಬೇಕು ಆಸ್ಪತ್ರೆಗೆ ಹೋಗದೆ ಇರುವ, ತಬ್ಲಿಘಿಗಳಿಗೆ ಯಾರೂ ತಪ್ಪಿಸಿಕೊಳ್ಳಲು ಆಸರೆ ನೀಡಬಾರದು. ಯಾರು ಈ ವೈರಸ್ ಹರಡುತ್ತಾರೋ ಅವರನ್ನು ಭಯೋತ್ಪಾದಕರು. ಇದರಿಂದ ದೇಶಕ್ಕೆ 36 ಸಾವಿರ ಕೋಟಿ ನಷ್ಟ ಆಗಿದೆ ಎಂದಿದ್ದಾರೆ.

ಕ್ಷೇತ್ರದ ಊರುಗಳಿಗೆ ರೇಣುಕಾಚಾರ್ಯ ಭೇಟಿ

ಕ್ಷೇತ್ರದ ಊರುಗಳಿಗೆ ರೇಣುಕಾಚಾರ್ಯ ಭೇಟಿ

ಕೆಲ ದಿನಗಳ ಹಿಂದೆ ತಮ್ಮ ಹೊನ್ನಾಳಿ ಕ್ಷೇತ್ರದಲ್ಲಿ ಜನರಿಗೆ ಕೊರೊನಾ ಅರಿವು ಮೂಡಿಸಲು ರೇಣುಕಾಚಾರ್ಯ ಹೋಗಿದ್ದರು. ಆದರೆ, ತಮ್ಮ ಬೆಂಬಲಿಗರೊಂದಿಗೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವ ಕಾರಣ ದಾವಣಗೆರೆ ಜಿಲ್ಲಾಧಿಕಾರಿ ಮಹಂತೇಶ್ ಬೀಳಗಿ ತರಾಟೆಗೆ ತೆಗೆದುಕೊಂಡಿದ್ದರು. ಹಳ್ಳಿಯೊಬ್ಬರಲ್ಲಿ ತಾವೇ ಕ್ರಿಮಿನಾಶಕ ಸಿಂಪಡನೆ ಮಾಡಿ, ಸುದ್ದಿ ಮಾಡಿದ್ದರು.

English summary
Honnalli MLA Renukacharya statement on Nizamuddin Tablighi Jamaat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X