ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ರ್ಯಾಕ್ಟರ್ ಓಡಿಸಿದ ಶಾಸಕ ಎಂ.ಪಿ.ರೇಣುಕಾಚಾರ್ಯ,

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ: ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದ್ದು, ಶಾಸಕ ಎಂ.ಪಿ. ರೇಣುಕಾಚಾರ್ಯ ಟ್ರ್ಯಾಕ್ಟರ್ ಚಾಲನೆ ಮಾಡಿದರೆ ಡಿಸಿ ಪಕ್ಕದಲ್ಲಿ ಕುಳಿತು ಆಗಮಿಸಿದ್ದು ವಿಶೇಷವಾಗಿತ್ತು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರೇಣುಕಾಚಾರ್ಯ ಅವರು ಅಧಿಕಾರಿಗಳನ್ನು ಹೊತ್ತ ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಗಮನ ಸೆಳೆದರು. ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ರಾಮದಲ್ಲಿ ಭಾಗಿಯಾದರು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಗಮನ ಸೆಳೆದವು.

ಹೊನ್ನಾಳಿ ಗಣಮಗನ ಹತ್ಯೆ: ಸುಪಾರಿ ಹಂತಕರನ್ನು ಬಂಧಿಸಿದ ಪೊಲೀಸರುಹೊನ್ನಾಳಿ ಗಣಮಗನ ಹತ್ಯೆ: ಸುಪಾರಿ ಹಂತಕರನ್ನು ಬಂಧಿಸಿದ ಪೊಲೀಸರು

ಅಧಿಕಾರಿಗಳು ಹಾಗೂ ಶಾಸಕರನ್ನು ಆತ್ಮೀಯವಾಗಿ ಬರಮಾಡಿಕೊಂಡ ಗ್ರಾಮಸ್ಥರು ತಮ್ಮ ಕಷ್ಟಗಳನ್ನು ಹೇಳಿಕೊಂಡರು. ಈ ವೇಳೆ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಅವರು ವೃದ್ಧೆಯವರ ಬಳಿ ತೆರಳಿ ವೃದ್ಧಾಪ್ಯ ಬರುತ್ತಾ? ಹಣ ಬರುತ್ತಿದೆಯಾ ಇಲ್ವೋ, ರೇಷನ್ ಸಿಗುತ್ತಿದೆಯೋ ಇಲ್ವೋ ಎಂದು ವಿಚಾರಿಸಿದರು. ಇದಕ್ಕೆ ವೃದ್ಧೆಯರು ಬರುತ್ತಿದೆ ಎಂದರು. ಈ ಹಣ ಏನ್ ಮಾಡ್ತೀಯಾ ಎಂದು ಡಿಸಿ ಕೇಳಿದಾಗ ತಿನ್ನುತ್ತೇನೆ ಎಂಬ ವೃದ್ಧೆ ಉತ್ತರಕ್ಕೆ ಎಲ್ಲರೂ ನಗೆಗಡಲಲ್ಲಿ ತೇಲಿದರು.

Renukacharya drives tractor during Village Stay program in his Honnali constituency

ಮದುವೆ ದಿಬ್ಬಣದಲ್ಲಿ ಟ್ರ್ಯಾಕ್ಟರ್ ಚಾಲಕನಾದ ರೇಣುಕಾಚಾರ್ಯ:

ಇತ್ತೀಚಿಗೆ ಮದುವೆ ಮನೆಯಲ್ಲಿ ಕರಿಮಣಿ ಪೋಣಿಸಿ ಸುದ್ದಿಯಾಗಿದ್ದ ಬಿಜೆಪಿ ಎಂ.ಪಿ.ರೇಣುಕಾಚಾರ್ಯ ಮತ್ತೆ ವಿನೂತನ ಕೆಲಸ ಮಾಡಿ ಸುದ್ದಿಯಾಗಿದ್ದಾರೆ. ಭಾನುವಾರ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನಲ್ಲಿ ನಡೆದ ಮದುವೆಯ ದಿಬ್ಬಣದಲ್ಲಿ ಟ್ರ್ಯಾಕ್ಟರ್ ಓಡಿಸಿದ್ದಾರೆ. ಈ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

Renukacharya drives tractor during Village Stay program in his Honnali constituency

ಬೆಳಗುತ್ತಿ ಗ್ರಾಮದ ಮಲ್ಲಿಕಾರ್ಜುನ ಅಪ್ಪನವರ್ ಪುತ್ರ ಪ್ರಶಾಂರ್ ಹಾಗೂ ಪ್ರಿಯಾ ಅವರ ಮದುವೆಯಲ್ಲಿ ರೇಣುಕಾಚಾರ್ಯ ಪಾಲ್ಗೊಂಡಿದ್ದು, ಬಳಿಕ ಮದುವದೆ ದಿಬ್ಬಣ ಹೊತ್ತ ಟ್ರ್ಯಾಕ್ಟರ್ ಅನ್ನು ಚಲಾಯಿಸಿದ್ದಾರೆ. ಇಂದು ದಾವಣಗೆರೆಯ ಬೆಳೆ ಹಾನಿ ಪ್ರದೇಶಗಳಿಗೆ ರೇಣುಕಾಚಾರ್ಯ ಭೇಟಿ ನೀಡಿದ್ದು, ಬಳಿಕ ಮದುವೆಗೆ ತೆರಳಿದ್ದರು. ಮದುವೆಯ ದಿಬ್ಬಣದಲ್ಲಿ ಟ್ರ್ಯಾಕ್ಟರ್ ಚಲಾಯಿಸಿದ ಬಳಿಕ ರೇಣುಕಾಚಾರ್ಯ ನವಜೋಡಿಗೆ ಆಶೀರ್ವದಿಸಿದರು.

(ಒನ್ಇಂಡಿಯಾ ಸುದ್ದಿ)

English summary
BJP MLA M.P. Renukacharya himself drives tractor during Village Stay, as part of DC village visit program at his home constituency of Honnali.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X