ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಬಕಾರಿ ಸಚಿವ ನಾಗೇಶ್ ಹೇಳಿಕೆ ವಿರುದ್ಧ ರೇಣುಕಾಚಾರ್ಯ ಅಸಮಾಧಾನ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಸೆಪ್ಟೆಂಬರ್ 6: ಮನೆ ಬಾಗಿಲಿಗೆ ಮದ್ಯ ವಿತರಿಸುವುದಾಗಿ ಹೇಳಿಕೆ‌ ನೀಡಿದ್ದ ಅಬಕಾರಿ ಸಚಿವ ನಾಗೇಶ್ ವಿರುದ್ಧ ಹೊನ್ನಾಳಿಯ ಬಿಜೆಪಿ ಶಾಸಕ ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುಡುಕರಿಗೆ ಆಸೆ ಹುಟ್ಟಿಸಿ ಮತ್ತೆ ತಣ್ಣೀರು ಸುರಿದ ಅಬಕಾರಿ ಸಚಿವ!ಕುಡುಕರಿಗೆ ಆಸೆ ಹುಟ್ಟಿಸಿ ಮತ್ತೆ ತಣ್ಣೀರು ಸುರಿದ ಅಬಕಾರಿ ಸಚಿವ!

ನ್ಯಾಮತಿಯ ದೊಡ್ಡಯತ್ತಿನಹಳ್ಳಿಯಲ್ಲಿ ಕೆರೆಗೆ ಬಾಗಿನ ಅರ್ಪಿಸಿ ‌ಮಾತನಾಡಿದ ರೇಣುಕಾಚಾರ್ಯ, "ಅಬಕಾರಿ ಸಚಿವ ನಾಗೇಶ್ ಮನೆ ಮನೆಗೆ ಮದ್ಯ ಹಾಗೂ ಮೊಬೈಲ್ ಬಾರ್ ಗಳ ಬಗ್ಗೆ ಮಾತನಾಡಬಾರದಿತ್ತು. ಈ ರೀತಿಯ ಹೇಳಿಕೆಯಿಂದ ಯಡಿಯೂರಪ್ಪನವರ ಸರ್ಕಾರ ಹಾಗೂ ಬಿಜೆಪಿ ಮೇಲೆ‌ ಜನರು ಇಟ್ಟಿರುವ ವಿಶ್ವಾಸ ನಂಬಿಕೆ ಕಡಿಮೆಯಾಗುತ್ತದೆ" ಎಂದಿದ್ದಾರೆ.

Renukacharya Commented On Excise Minister Nagesh

ಮದ್ಯಪ್ರಿಯರಿಗೆ ಸರ್ಕಾರದ ಗುಡ್‌ ನ್ಯೂಸ್: ಮನೆ ಬಾಗಿಲಿಗೇ ಬರಲಿದೆ ಮದ್ಯಮದ್ಯಪ್ರಿಯರಿಗೆ ಸರ್ಕಾರದ ಗುಡ್‌ ನ್ಯೂಸ್: ಮನೆ ಬಾಗಿಲಿಗೇ ಬರಲಿದೆ ಮದ್ಯ

"ಸರ್ಕಾರದ ಆದಾಯ ಹೆಚ್ಚಿಸಬೇಕು ಎಂದರೆ ಮೊದಲು ಅಕ್ರಮ ಮದ್ಯ ಹಾಗೂ ಕಳ್ಳಭಟ್ಟಿಯನ್ನು ನಿಲ್ಲಿಸಲಿ. ಆಗ ಸರ್ಕಾರಕ್ಕೆ ತಾನಾಗಿಯೇ ಆದಾಯ ಬರುತ್ತದೆ. ಅದನ್ನು ಬಿಟ್ಟು ಈ ರೀತಿ ಹೇಳಿಕೆ ನೀಡಬಾರದು" ಎಂದು ಅಬಕಾರಿ ಸಚಿವರ ವಿರುದ್ಧ ‌ಮಾತನಾಡಿದ್ದಾರೆ.

English summary
Honnali BJP MLA Renukacharya has expressed his displeasure over the excise minister Nagesh statement that he would distribute liquor at the door.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X