ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ ದುಗ್ಗಮ್ಮನ ಜಾತ್ರೆಗೆ ಲೋಕಲ್ ರಾಪರ್ ವಿಡಿಯೋ ಹಾಡು

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಫೆಬ್ರವರಿ 27: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಈಗ ದುಗ್ಗಮ್ಮ ಜಾತ್ರೆ ಕಳೆ ಕಟ್ಟುತ್ತಿದೆ. ಮಾರ್ಚ್ 1ರಂದು ಆರಂಭವಾಗಿ ಹದಿನೆಂಟು ದಿನಗಳ ಕಾಲ ನಡೆಯುವ ದಾವಣಗೆರೆ ನಗರ ದೇವತೆ ದುರ್ಗಾಂಬಿಕಾ ದೇವಿ ಜಾತ್ರೆಗೆ ಈ ಬಾರಿ ಮತ್ತೂ ಒಂದು ವಿಶೇಷ ಜೊತೆಯಾಗಿದೆ.

ದಾವಣಗೆರೆಯ ಈ ದೊಡ್ಡ ಜಾತ್ರೆಯ ಮಹತ್ವವನ್ನು ಸಾರಲು ಹುಡುಗರ ತಂಡವೊಂದು ಪಣ ತೊಟ್ಟಿದೆ. ಇಲ್ಲಿನ ಭರತ್ ಕಾಲೋನಿಯ ಲೋಕಲ್ ರಾಪರ್ ಗಳಾದ ರಾಕಿ ಹಾಗೂ ಸ್ನೇಹಿತರ ಬಳಗ ಈ ಜಾತ್ರೆ ಕುರಿತ ವಿಡಿಯೋ ಹಾಡನ್ನು ರೂಪಿಸಿ ಭಿನ್ನ ಪ್ರಯತ್ನವನ್ನು ಮಾಡಿದೆ.

ರಾತ್ರೋ ರಾತ್ರಿ ಸ್ಟಾರ್ ಆದ ವೀಣಾ ವಾದಕ ಮಹೇಶ್ ಪ್ರಸಾದ್ರಾತ್ರೋ ರಾತ್ರಿ ಸ್ಟಾರ್ ಆದ ವೀಣಾ ವಾದಕ ಮಹೇಶ್ ಪ್ರಸಾದ್

ರಾಕಿ ಹಾಗೂ ಆತನ ಸ್ನೇಹಿತರು ಸೇರಿ ಜಾತ್ರೆ ಹೇಗಿರುತ್ತದೆ, ಜಾತ್ರೆ ಸಿದ್ಧತೆ ಹೇಗೆ ನಡೆದಿದೆ?, ಜಾತ್ರೆಯಲ್ಲಿ ಏನೇನು ಆಕರ್ಷಣೆ ಇದೆ ಎಂಬುದನ್ನು ವಿಡಿಯೋ ಮೂಲಕ ತೋರಿಸಲಿದ್ದಾರೆ. ದುಗ್ಗಮ್ಮನ ಜಾತ್ರೆ ಕರಿ ಕಲ್ಲು ಪೂಜೆ, ದೇವಿ ದರ್ಶನ, ಟಗರು ಕಾಳಗ, ನಾನ್ ವೆಜ್ ಗಮ್ಮತ್ತು... ಹೀಗೆ ಜಾತ್ರೆಯ ವಿಶೇಷಗಳನ್ನು ದೃಶ್ಯಗಳ ಮೂಲಕ ತೋರಲಿದ್ದಾರೆ. ಲಕ್ಷಾಂತರ ಜನ ಸೇರುವ ಜಾತ್ರೆ ಕುರಿತು ಹಾಡು ಕಟ್ಟಿ ವಿಡಿಯೋ ಸಾಂಗ್ ಮಾಡಿ ಜಾಲತಾಣಗಳಲ್ಲಿ ಹಾಕಲಿದ್ದಾರೆ.

Rappers Special Video Song For Duggamma Jatre

ಇದೊಂದೇ ಅಲ್ಲ, ರಾಕಿ ಮತ್ತು ಸ್ನೇಹಿತರ ಬಳಗ ಹೀಗೆ ಹತ್ತಾರು ಹಾಡುಗಳನ್ನು ಸಂಯೋಜನೆ ಮಾಡಿದ್ದು, ದೌಲತ್ ದಾವಣಗೆರೆ, ನಮ್ ದಾವಣಗೆರೆ ಸೇರಿದಂತೆ ಹಲವು ರಾಪ್ ಹಾಡುಗಳನ್ನು ಸಂಯೋಜಿಸಿದೆ. ಈ ತಂಡದ ರಾಪ್ ಸಾಂಗ್ ಗೆ ಇಲ್ಲಿನ ಯುವಜನರೂ ಫಿದಾ ಆಗಿದ್ದಾರೆ. ಕಳೆದ ಎರಡು ತಿಂಗಳಿಂದ ಜಾತ್ರೆ ಬಗ್ಗೆ ಚರ್ಚೆಗಳು ಶುರುವಾಗಿವೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ವೇದಿಕೆ ಸಜ್ಜಾಗುತ್ತಿದೆ. ಈ ಎಲ್ಲದರ ನಡುವೆ ಇಲ್ಲಿನ ಯುವಕರು ಜಾತ್ರೆ ಹಾಡು ಮಾಡಿ ಜಾಲತಾಣದಲ್ಲಿ ಹರಿಬಿಡುತ್ತಿರುವುದು ಜಾತ್ರೆ ಸೊಬಗನ್ನು ಮತ್ತಷ್ಟು ಹೆಚ್ಚಿಸಿದೆ.

English summary
The Davangere Bharat Colony's local rappers, Rocky and friends, made a different effort by making a video song about the Duggamma fair
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X