• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಕೇಶ್ ಸಿದ್ದರಾಮಯ್ಯ ಮೃತಪಟ್ಟಿದ್ದು ಡ್ರಗ್ ಸೇವನೆಯಿಂದ: ಮುತಾಲಿಕ್ ನೇರ ಆರೋಪ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಸೆಪ್ಟೆಂಬರ್ 3: ಮುಸ್ಲಿಮರ ಹೆಸರಿನಲ್ಲಿ ಡ್ರಗ್ ಜಿಹಾದ್ ಹುಟ್ಟಿಕೊಂಡಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಗ ಮೃತಪಟ್ಟಿದ್ದು ಡ್ರಗ್ ಸೇವನೆಯಿಂದ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇರ ಆರೋಪ ಮಾಡಿದರು.

   Sandalwood Drug Mafia ಬಗ್ಗೆ Kannada film Chamber ವಿಶೇಷ ಪತ್ರಿಕಾಗೋಷ್ಠಿ | Oneindia Kannada

   ದಾವಣಗೆರೆಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಇಂದು ಡ್ರಗ್ ಮಾಫಿಯಾದಲ್ಲಿ ಇಡೀ ಚಿತ್ರರಂಗ ಭಾಗಿಯಾಗಿದೆ ಎಂದು ಇಂದ್ರಜಿತ್ ಲಂಕೇಶ್ ಆರೋಪ ಮಾಡುತ್ತಿದ್ದಾರೆ. ಆದರೆ ಈ ಡ್ರಗ್ ಮಾಫಿಯಾದಲ್ಲಿ ರಾಜಕಾರಣಿ ಹಾಗೂ ಪೊಲೀಸ್ ಇಲಾಖೆ ಕೈವಾಡ ಇದೆ, ಪ್ರತಿಯೊಂದು ಮಾಹಿತಿ ಪೊಲೀಸರಿಗೆ ಗೊತ್ತು. ಆದರೆ ರಾಜಕಾರಣಿಗಳ ಕೈ ಅವರನ್ನು ಹಿಡಿದಿಟ್ಟಿದೆ ಎಂದರು.

   ಗೌರಿ ಲಂಕೇಶ್ ಸಾವಿನ ಬಗ್ಗೆ ಮಾತನಾಡಿದ್ದು ನೋವು ತಂದಿದೆ: ಇಂದ್ರಜಿತ್ಗೌರಿ ಲಂಕೇಶ್ ಸಾವಿನ ಬಗ್ಗೆ ಮಾತನಾಡಿದ್ದು ನೋವು ತಂದಿದೆ: ಇಂದ್ರಜಿತ್

   ಇಷ್ಟೇ ಅಲ್ಲದೆ, ಕರ್ನಾಟಕದ ಪೊಲೀಸ್ ಇಲಾಖೆಯ ಬೇಗುಗಾರಿಕೆ ಸಂಪೂರ್ಣ ವಿಫಲವಾಗಿದೆ. ಬೇಹುಗಾರಿಕೆ ಇಲಾಖೆಯವರು ಡ್ರಗ್ ಮಾಫಿಯಾದಲ್ಲಿ ಭಾಗಿಯಾಗಿದೆ. ಜೊತೆಗೆ, ಎಲ್ಲಾ ಮೂರು ಪಕ್ಷಗಳು ಇದರಲ್ಲಿ ಶಾಮೀಲಾಗಿವೆ. ಇವತ್ತಿನ ಪ್ರಕರಣದಲ್ಲಿ ಬೇಹುಗಾರಿಕೆ ಮಾಡಲು ಬಿಜೆಪಿ ವಿಫಲವಾಗಿದೆ ಎಂದು ಆರೋಪಿಸಿದರು.

   ಕುಮಾರಸ್ವಾಮಿ ಅವರನ್ನು ಕೂಡಾ ವಿಚಾರಣೆ ಮಾಡಿ

   ಕುಮಾರಸ್ವಾಮಿ ಅವರನ್ನು ಕೂಡಾ ವಿಚಾರಣೆ ಮಾಡಿ

   ಇದರ ಜೊತೆಗೆ ಮಹಮ್ಮದ್ ನಲಪಾಡ್ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಶೋಭಾ ಕರಂದ್ಲಾಜೆ ಅವರು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದರು. ಆದರೆ ಇಂದು ನಿಮ್ಮ ಸರ್ಕಾರ ಇದೆ. ಈಗ ನಲಪಾಡ್ ಪ್ರಕರಣ ರೀ ಓಪನ್ ಮಾಡಿ ಕ್ರಮ ಕೈಗೊಳ್ಳಿ ಎಂದು ಶೋಭಾ ಕರಂದ್ಲಾಜೆಗೆ ಮುತಾಲಿಕ್ ಸವಾಲು ಹಾಕಿದರು.

   ಡ್ರಗ್ಸ್ ನ ಹಣ ಕಾಂಗ್ರೆಸ್ ಹಾಗೂ ಬಿಜೆಪಿಗೆ ಹೋಗಿದೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದರು. ಇಂದ್ರಜಿತ್ ಹೇಗೆ ವಿಚಾರಣೆ ಮಾಡುತ್ತಿದ್ದಿರೋ ಅದೇ ರೀತಿ ಕುಮಾರಸ್ವಾಮಿ ಅವರನ್ನು ಕೂಡಾ ವಿಚಾರಣೆ ಮಾಡಿ ಎಂದು ಒತ್ತಾಯಿಸಿದರು.

   ಸನಾವುಲ್ಲಾನನ್ನು 24 ಗಂಟೆಯೊಳಗೆ ಬಂಧನ ಮಾಡಿ

   ಸನಾವುಲ್ಲಾನನ್ನು 24 ಗಂಟೆಯೊಳಗೆ ಬಂಧನ ಮಾಡಿ

   ದಾವಣಗೆರೆ ಡಿಆರ್ ಪೊಲೀಸ್ ಸನಾವುಲ್ಲಾ "ಪವರ್ ಆಫ್ ಪಾಕಿಸ್ತಾನ್' ಪೇಜ್ ಷೇರ್ ಮಾಡಿದ ವಿಚಾರದ ಬಗ್ಗೆ ಮಾತನಾಡಿದ ಅವರು, ಸನಾವುಲ್ಲಾ ಅವರನ್ನು ಅಮಾನತು ಮಾಡಿ ನಾಟಕ ಮಾಡ್ತಾ ಇದ್ದೀರಾ? ನೀವು ನಾಲಾಯಕ್ ಎಂದು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದರು.

   ಸನಾವುಲ್ಲಾನನ್ನು 24 ಗಂಟೆಯೊಳಗೆ ಬಂಧನ ಮಾಡದಿದ್ದರೆ ದಾವಣಗೆರೆಯಲ್ಲಿ ಉಗ್ರ ಹೋರಾಟ ಮಾಡುತ್ತೇವೆ. ದೇಶದ್ರೋಹಿ, ಸಮಾಜ ಕಂಟಕನನ್ನು ಸೇಫ್ ಮಾಡುವ ಕೆಲಸ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಮಾಡುತ್ತಿದ್ದಾರೆ ಎಂದು ಮುತಾಲಿಕ್ ಗಂಭೀರ ಆರೋಪ ಮಾಡಿದರು.

   ಡ್ರಗ್ಸ್ ಬಗ್ಗೆ ಮತ್ತೊಂದು ಆಘಾತಕಾರಿ ಸುದ್ದಿ ತಿಳಿಸಿದ ಪ್ರಮೋದ್ ಮುತಾಲಿಕ್ಡ್ರಗ್ಸ್ ಬಗ್ಗೆ ಮತ್ತೊಂದು ಆಘಾತಕಾರಿ ಸುದ್ದಿ ತಿಳಿಸಿದ ಪ್ರಮೋದ್ ಮುತಾಲಿಕ್

   ಬಿಜೆಪಿ, ಕಾಂಗ್ರೆಸ್ ನವರು ಎಂಇಎಸ್ ಜೊತೆ ಕೈ ಜೋಡಿಸಿದ್ದಾರೆ

   ಬಿಜೆಪಿ, ಕಾಂಗ್ರೆಸ್ ನವರು ಎಂಇಎಸ್ ಜೊತೆ ಕೈ ಜೋಡಿಸಿದ್ದಾರೆ

   ಸಂಗೊಳ್ಳಿ ರಾಯಣ್ಣ ಮೂರ್ತಿ ವಿಚಾರವಾಗಿ, ದೇಶಕ್ಕಾಗಿ ಹೋರಾಟ ಮಾಡಿದವರಿಗೆ ಜಾತಿ, ಗಡಿ ಪಟ್ಟ ಕಟ್ಟಬೇಡಿ, ಸಂಗೊಳ್ಳಿ ರಾಯಣ್ಣಗೆ ಅವಮಾನ ಮಾಡುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್ ನವರು ಎಂಇಎಸ್ ಜೊತೆಗೆ ಕೈ ಜೋಡಿಸಿದ್ದಾರೆ ಎಂದು ಸಂಗೊಳ್ಳಿ ರಾಯಣ್ಣ ವಿಚಾರದಲ್ಲಿ ಹೇಳಿಕೆ ನೀಡಿದರು.

   ಗೌರಿ ಲಂಕೇಶ್ ಹತ್ಯೆಯಲ್ಲಿ ನಮ್ಮದು ಯಾವ ಕೈವಾಡವಿಲ್ಲ, ಈಗಾಗಲೇ ಗೌರಿ ಹತ್ಯೆ ವಿಚಾರದಲ್ಲಿ ಅವರನ್ನು ಬಂಧಿಸಿದ್ದಾರೆ. ಆದರೆ ಗೌರಿ ಎಲ್ಲಿ ಡ್ರಗ್ ಸೇವನೆ ಮಾಡುತ್ತಿದ್ದರು, ಯಾವ ಪಬ್ ಹೋಗುತ್ತಿದ್ದರು ಎಂಬುದನ್ನು ನಾನು ಸಾಬೀತು ಮಾಡ್ತಿನಿ, ನೀವು ಹೇಳಿ ನಿಮ್ಮ ಅಕ್ಕ ಡ್ರಗ್ ಸೇವನೆ ಮಾಡುತ್ತಿದ್ದರೋ, ಇಲ್ಲವೋ? ಎಂದು ಇಂದ್ರಜಿತ್ ಲಂಕೇಶ್ ಗೆ ಮುತಾಲಿಕ್ ಮರುಪ್ರಶ್ನೆ ಮಾಡಿದರು.

   ಡ್ರಗ್ ವಿಚಾರಕ್ಕೆ ನನ್ನನ್ನು ಗೋವಾದಲ್ಲಿ ಬ್ಯಾನ್ ಮಾಡಲಾಯಿತು

   ಡ್ರಗ್ ವಿಚಾರಕ್ಕೆ ನನ್ನನ್ನು ಗೋವಾದಲ್ಲಿ ಬ್ಯಾನ್ ಮಾಡಲಾಯಿತು

   ಇನ್ನು ಡ್ರಗ್ ಮಾಫಿಯಾದಲ್ಲಿ ದಾವಣಗೆರೆ ಬಾಪೂಜಿ ಮೆಡಿಕಲ್ ಕಾಲೇಜ್, ಬೆಂಗಳೂರಿನ ಸೆಂಟ್ ಜೋಸೆಫ್, ಬಿಷಪ್ ಕಾಟನ್ ಕಾಲೇಜ್, ಲಾಡ್ರವಿನ್ ಕಾಲೇಜ್, ಬಾಲ್ಡ್ ವಿನ್ ಗರ್ಲ್ಸ್ ಕಾಲೇಜ್ ನಲ್ಲಿ ಕೂಡ ಡ್ರಗ್ ಮಾಫಿಯಾ ನಡೆಯುತ್ತಿದೆ. ಇದು ಹ್ಯಾರಿಸ್ ಅವರ ಕ್ಷೇತ್ರದಲ್ಲಿ ನಡೆಯುತ್ತಿರೋದು ಎಂದು ಮುತಾಲಿಕ್ ನೇರ ಆರೋಪ ಮಾಡಿದ್ದಾರೆ.

   ಇನ್ನು ಇದೇ ಡ್ರಗ್ ವಿಷಯವನ್ನು ಮಾತನಾಡಿದ್ದಕ್ಕೆ ನನ್ನನ್ನು ಗೋವಾದಲ್ಲಿ ಬ್ಯಾನ್ ಮಾಡಲಾಗಿದೆ. ಜೊತೆಗೆ ಡ್ರಗ್ ವಿಚಾರ ಮಾತನಾಡಿದ್ದಕ್ಕೆ ಇದೇ ಬಿಜೆಪಿ ಸರ್ಕಾರ ನನ್ನನ್ನು ಗೋವಾದಲ್ಲಿ ಬ್ಯಾನ್ ಮಾಡಿದೆ ಎಂದರು.

   English summary
   Srirama Sena chief Pramod Muthalik blamed the death of Former CM Siddaramaiah's son Rakesh for drug overdose.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X