ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈತರ ಹೋರಾಟ ಬೆಂಬಲಿಸಿ ಜ.20ರಂದು ರಾಜ್ ಭವನ ಚಲೋ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜನವರಿ 19: ದೇಶದ ಅನ್ನದಾತರು ಕಳೆದ ಎರಡು ತಿಂಗಳಿಂದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಸುತ್ತಿರುವ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದ್ದು, ಜ.20ರಂದು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಿಂದ ವಿಧಾನಸೌಧದ ವರೆಗೆ ರೈತರ ಜೊತೆ ಪಾದಯಾತ್ರೆ ಮೂಲಕ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಿದ್ದೇವೆ ಎಂದು ಮಾಜಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದರು.

ಮಂಗಳವಾರ ಬಾಪೂಜಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ರೈತರಿಗೆ ಮರಣ ಶಾಸನವನ್ನು ಬರೆದಿದ್ದು, ಈ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿಯಲ್ಲಿ ಕೊರೆವ ಚಳಿಯಲ್ಲಿ ಕಳೆದ ಎರಡು ತಿಂಗಳಿಂದ ರೈತರು ಹೋರಾಟ ನಡೆಸುತ್ತಿದ್ದರೂ, ಕೇಂದ್ರ ಅವರಿಗೆ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸ್ವಾತಂತ್ರ್ಯ ನಂತರ ದೇಶದ ಬೆನ್ನೆಲುಬಾಗಿರುವ ರೈತರು ನಡೆಸುತ್ತಿರುವ ಮೊದಲ ಹೋರಾಟ ಎರಡು ತಿಂಗಳಾದರೂ ಪರಿಹಾರ ಸಿಗುತ್ತಿಲ್ಲ. ದೆಹಲಿಯಲ್ಲಿ ಆಗುತ್ತಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಅವರಿಗೆ ರಕ್ಷಣೆಯಿಲ್ಲ. ದೇಶದ ಅನ್ನದಾತರಾಗಿರುವ ರೈತರು ಈ ದಿನ ಅನಾಥರಾಗುತ್ತಿದ್ದಾರೆ ಎಂದರು.

ವ್ಯವಸಾಯದ ಉತ್ಪನ್ನಗಳ ಮೇಲೆ ದೇಶದ ಆರ್ಥಿಕತೆ

ವ್ಯವಸಾಯದ ಉತ್ಪನ್ನಗಳ ಮೇಲೆ ದೇಶದ ಆರ್ಥಿಕತೆ

ಬೆಳೆದ ಬೆಳೆಗೆ ಬೆಲೆ ಸಿಗುತ್ತಿಲ್ಲ. ಕಠೋರ ಕಾನೂನು ಮಾಡುವ ಮೂಲಕ ರಾಷ್ಟ್ರದಲ್ಲಿ ಭಾರತ ದೇಶದಲ್ಲಿ ಆರ್ಥಿಕ ಸ್ಥಿತಿ ವ್ಯವಸಾಯದ ಉತ್ಪನ್ನಗಳ ಮೇಲೆ ನಿಂತಿದೆ. ಶೇ.60-70 ಜನ ಕೃಷಿಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ಈಗ ಜಾರಿಗೆ ತರಲು ಹೊರಟಿರುವ ಕೃಷಿ ಕಾಯ್ದೆಗಳು ಮಾರಕವಾಗಿವೆ. ಅದಕ್ಕೆ ಪೂರಕವಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಮಾರ್ಗದರ್ಶನದಂತೆ ಜ.20 ರಂದು ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ, ರಾಜ್ಯಾದ್ಯಂತ ಎಲ್ಲಾ ರೈತರ, ಕಾರ್ಮಿಕರು ರೈತರ ಹೋರಾಟಕ್ಕೆ ಬೆಂಬಲ ಕೊಡಲಿದ್ದೇವೆ ಎಂದು ಹೇಳಿದರು.

120 ಕೋಟಿ ರೂ. ವೆಚ್ಚದಲ್ಲಿ ದಾವಣಗೆರೆ ಬಸ್ ನಿಲ್ದಾಣ ಪುನರ್ ನಿರ್ಮಾಣ120 ಕೋಟಿ ರೂ. ವೆಚ್ಚದಲ್ಲಿ ದಾವಣಗೆರೆ ಬಸ್ ನಿಲ್ದಾಣ ಪುನರ್ ನಿರ್ಮಾಣ

70 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದೆವು

70 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದೆವು

70 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದೆವು. 2 ಕೋಟಿ ರೈತರ ಕುಟುಂಬಗಳ ಕಣ್ಣೀರು ಒರೆಸಿದ್ದು, ಯುಪಿಯ ಸರ್ಕಾರ. ಇದು ಇತಿಹಾಸ. ಈಗ ಏಳು ವರ್ಷದಿಂದ ನರೇಂದ್ರ ಮೋದಿ ಬಂದು ರೈತರಿಗೆ ಯಾವ ತರಹದ ಸಾಲ ಮನ್ನಾ ಮಾಡಲಿಲ್ಲ, ನೆಮ್ಮದಿ ನೀಡಿಲ್ಲ. ಕರಾಳವಾದ ಕಾನೂನು ತಂದು ಎಂಎಸ್ಪಿ ಸಹ ಕೊಡಲಿಲ್ಲ. ಆದಾನಿ, ಅಂಬಾನಿ ಅಂತಹವರಿಗೆ ಬೆಂಬಲವಾಗುವ ಕಾನೂನು ತಂದಿದ್ದಾರೆ. ಈ ದೇಶದ ಬಹುಸಂಖ್ಯಾತ ಕುಟುಂಬಗಳು ಏನಾಗಬೇಕೆಂಬ ಯೋಚನೆ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು.

ರೈತರಿಗೆ ಬೆಂಬಲ ನೀಡಲಿದ್ದೇವೆ

ರೈತರಿಗೆ ಬೆಂಬಲ ನೀಡಲಿದ್ದೇವೆ

ಕಾರ್ಮಿಕರು ರಸ್ತೆಗೆ ಬಂದಿದ್ದಾರೆ. ಎಪಿಎಂಸಿ ಕಾಯ್ದೆ ಸಣ್ಣ ಮತ್ತು ಅತಿ ಸಣ್ಣ ರೈತ ಅವನು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಬ್ಯಾಂಕಿಂದ ಪಡೆದ ಸಾಲ ಕಟ್ಟುವುದಾದರೂ ಹೇಗೆ. ಈ ಕಾನೂನು ಕರಾಳವಾಗಿದ್ದು, ಕಾಂಗ್ರೆಸ್ ಎಲ್ಲಾ ರಾಜ್ಯಗಳಲ್ಲಿ ಹೋರಾಟ ನಡೆಸುವ ಮೂಲಕ ರೈತರಿಗೆ ಬೆಂಬಲ ನೀಡಲಿದ್ದೇವೆ. ಸ್ವತಂತ್ರ ಭಾರತದಲ್ಲಿ ಈ ರೀತಿಯ ಕರಾಳ ದಿನಗಳನ್ನು ರೈತರು ಎಂದೂ ಅನುಭವಿಸಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ರೈತರ ಪರವಾಗಿ ಬೆಂಬಲವಾಗಿ ಕಾಂಗ್ರೆಸ್

ರೈತರ ಪರವಾಗಿ ಬೆಂಬಲವಾಗಿ ಕಾಂಗ್ರೆಸ್

ಹರಿಯಾಣ, ಪಂಜಾಬ್ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶದ ಜನಕ್ಕಿಂತ ಅವರು ಕೂತು ಮಾಡಿರುವ ಕಾನೂನುಗಳೇ ದೊಡ್ಡವೆಂದು ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಜನ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ರೈತರ ಪರವಾಗಿ ಬೆಂಬಲವಾಗಿ ಕಾಂಗ್ರೆಸ್ ನಿಲ್ಲುತ್ತದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುತ್ತೇವೆ ಎಂದ ಮೋದಿ ಇದುವರೆಗೂ ಯಾವುದೂ ಆಗಿಲ್ಲ. ಹೊಸ ಕೆಲಸ ಕೊಡುವ ಕಾರ್ಯಕ್ರಮದ ಬದಲು ಇರುವ ಕೆಲಸ ಉಳಿಸಬೇಕು ಎಂದು ಒತ್ತಾಯಿಸಿದರು.

ದಾರಿ ತಪ್ಪಿಸಿ ಅಧಿಕಾರಕ್ಕೆ ಬಂದಿದ್ದಾರೆ

ದಾರಿ ತಪ್ಪಿಸಿ ಅಧಿಕಾರಕ್ಕೆ ಬಂದಿದ್ದಾರೆ

ಪಾಕಿಸ್ತಾನ, ಹಿಂದೂಸ್ಥಾನ ಎಂದು ಹೇಳಿ ದಾರಿ ತಪ್ಪಿಸಿ ಅಧಿಕಾರಕ್ಕೆ ಬಂದಿದ್ದಾರೆ. ಇದು ಯಾವತ್ತೂ ನಡೆಯುವುದಿಲ್ಲ. ಪುಲ್ವಾಮಾ ಮತ್ತು ಸರ್ಜಿಕಲ್ ಸ್ಟ್ರೈಕ್ ಮಾಡಿ ಜನರನ್ನು ಹಾದಿ ತಪ್ಪಿಸಿ ಮಾಧ್ಯಮದಲ್ಲಿ ಭಯಭೀತರನ್ನು ಮಾಡಿ, ಸಂವಿಧಾನದಲ್ಲಿ ಮಾಧ್ಯಮ ಕೂಡ ಒಂದು ಅಂಗ. ಅದನ್ನು ಕೂಡ ಕೊಂಡುಕೊಂಡಿದ್ದಾರೆ. ಮುಸಲೋನಿ, ಹಿಟ್ಲರ್ ನಂತಹ ಏಕವ್ಯಕ್ತಿ ತೀರ್ಮಾನಗಳು ತನ್ನನ್ನೇ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಮೋದಿ ಹೊರಟಿದ್ದಾರೆ ಎಂದು ಹರಿಹಾಯ್ದರು.

Recommended Video

ಬಿಎಂಟಿಸಿ ಬಸ್ ಅಲ್ಲಿ ಕಾಂಗ್ರೆಸ್ಸ್ ಕಾರ್ಯಕರ್ತರು!! | Oneindia Kannada
ದೇಶ ಮತ್ತು ಸಂವಿಧಾನ ರಕ್ಷಣೆ

ದೇಶ ಮತ್ತು ಸಂವಿಧಾನ ರಕ್ಷಣೆ

ಇದು ಬಹಳ ದೂರವಿಲ್ಲ. ಜನ ರೊಚ್ಚಿಗೆದ್ದಿದ್ದಾರೆ, ಯಾರಿಗೂ ನೆಮ್ಮದಿ ಇಲ್ಲ. ಜತೆಗೆ ಕೋಮು ಗಲಭೆ ಸೃಷ್ಠಿಸುತ್ತಿದ್ದಾರೆ. ಹಿಂದೂಗಳ ಒಂದು ಮಾಡುವಂತೆ ಮಾಡಿ, ಹಿಂದೂ-ಮುಸ್ಲಿಂ ನಡುವೆ ಕೋಮು ಗಲಭೆ ಜಾತಿ ಧರ್ಮದ ಹೆಸರು ಹೇಳಿ ಬಹಳ ದಿನಗಳ ಕಾಲ ಅಧಿಕಾರ ನಡೆಸಲು ಆಗಲ್ಲ. ನಮ್ಮ ದೇಶ ಮತ್ತು ಸಂವಿಧಾನವನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಆ ದಿಸೆಯಲ್ಲಿ ನಾವು ಮುಂದೆ ಸಾಗುತ್ತೇವೆ. ನಿರಂತರ ಹೋರಾಟ ಮಾಡುತ್ತೇವೆ. ರೈತರನ್ನು ರಕ್ಷಣೆ ಮಾಡುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಕೆ.ಎಚ್ ಮುನಿಯಪ್ಪ ಹೇಳಿದರು.

English summary
Former Union minister KH Muniyappa has said that the Congress has expressed its support for the agitation against agrarian laws and will appeal to the governor on January 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X