ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ: ಮಳೆ, ಪ್ರವಾಹದಿಂದ ಎಲ್ಲೆಲ್ಲಿ ಎಷ್ಟು ಹಾನಿಯಾಗಿದೆ?

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಆಗಸ್ಟ್ 08; ದಾವಣಗೆರೆ ಜಿಲ್ಲೆಯಲ್ಲಿ ಜುಲೈ ತಿಂಗಳಿನಲ್ಲಿ ಸುರಿದ ಮಳೆ ಹಾಗೂ ಉಂಟಾದ ಪ್ರವಾಹದಿಂದಾಗಿ ಸುಮಾರು 40 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಮಳೆಯಿಂದ ಉಂಟಾದ ಕೃಷಿ, ತೋಟಗಾರಿಕೆ ಬೆಳೆ ಹಾನಿ, ಜನ ಜಾನುವಾರುಗಳ ಪ್ರಾಣಹಾನಿ ಹಾಗೂ ರಸ್ತೆ, ಸೇತುವೆ, ಕಟ್ಟಡಗಳಿಗೆ ಉಂಟಾದ ಹಾನಿ ಕುರಿತ ಸಮಗ್ರ ವರದಿಯನ್ನು ತಾಲೂಕುವಾರು ಸಿದ್ಧಪಡಿಸಿ ತ್ವರಿತವಾಗಿ ಸಲ್ಲಿಸುವಂತೆ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಳೆ ಹಾಗೂ ಪ್ರವಾಹದಿಂದಾಗಿ ಜಿಲ್ಲೆಯಲ್ಲಿ ವಿವಿಧ ರಸ್ತೆಗಳು, ಸೇತುವೆ, ಶಾಲೆ ಮತ್ತಿತರ ಸರ್ಕಾರಿ ಕಟ್ಟಡಗಳು ಹಾನಿಗೊಳಗಾಗಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ 40 ಕೋಟಿ ರೂಪಾಯಿಗೂ ಹೆಚ್ಚು ಹಾನಿ ಆಗಿದೆ ಎಂದು ಅಂದಾಜಿಸಲಾಗಿದೆ, ಈ ಕುರಿತು ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ.

ದಾವಣಗೆರೆ; ಅಕ್ಕ-ತಂಗಿಯನ್ನು ಕೊಂದವ ಸಿಕ್ಕಿದ್ದು ಹೇಗೆ? ದಾವಣಗೆರೆ; ಅಕ್ಕ-ತಂಗಿಯನ್ನು ಕೊಂದವ ಸಿಕ್ಕಿದ್ದು ಹೇಗೆ?

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತಲೂ ಶೇ 52ರಷ್ಟು ಹೆಚ್ಚು ಮಳೆ ಜಿಲ್ಲೆಯಲ್ಲಿ ಸುರಿದಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆ ಸುರಿದಿದ್ದು, ಜುಲೈ ತಿಂಗಳೊಂದರಲ್ಲೇ ಶೇ 97 ರಷ್ಟು ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆ.

ದಾವಣಗೆರೆ: ದಕ್ಷಿಣ ಕಾಶಿ ತೀರ್ಥರಾಮೇಶ್ವರದಲ್ಲಿ ಫಾಲ್ಸ್‌ಗಳ ಸೊಬಗು!ದಾವಣಗೆರೆ: ದಕ್ಷಿಣ ಕಾಶಿ ತೀರ್ಥರಾಮೇಶ್ವರದಲ್ಲಿ ಫಾಲ್ಸ್‌ಗಳ ಸೊಬಗು!

2.45 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಎದುರಿಗೆ ಈಗಾಗಲೇ 1.48 ಲಕ್ಷ ಹೆ. ಬಿತ್ತನೆಯಾಗಿದ್ದು, ಭತ್ತದ ನಾಟಿ ಕಾರ್ಯ ಈಗಷ್ಟೇ ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ ಸದ್ಯ ಯಾವುದೇ ಗೊಬ್ಬರ, ಬಿತ್ತನೆ ಬೀಜದ ಕೊರತೆ ಉಂಟಾಗಿಲ್ಲ. ಹೆಚ್ಚಿನ ಮಳೆಯಿಂದಾಗಿ ಜಿಲ್ಲೆಯಲ್ಲಿ 972 ಹೆಕ್ಟೇರ್ ಕೃಷಿ ಹಾಗೂ 975 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ‌.

ಗಿನ್ನಿಸ್ ದಾಖಲೆಗೆ ಅರ್ಹತೆ ಪಡೆದ ದಾವಣಗೆರೆ ಪೋರ! ಗಿನ್ನಿಸ್ ದಾಖಲೆಗೆ ಅರ್ಹತೆ ಪಡೆದ ದಾವಣಗೆರೆ ಪೋರ!

ನದಿ ಪಾತ್ರದ ಜನರ ಸ್ಥಳಾಂತರ

ನದಿ ಪಾತ್ರದ ಜನರ ಸ್ಥಳಾಂತರ

ಭದ್ರಾ ಜಲಾಶಯ ಈಗಾಗಕೇ ಗರಿಷ್ಟ ಮಟ್ಟವನ್ನು ತಲುಪಿದೆ. ಕ್ರಸ್ಟ್ ಗೇಟ್‍ನಿಂದ ನೀರನ್ನು ನದಿಗೆ ಬಿಡಲಾಗಿದೆ. ನದಿ ಪಾತ್ರದ ಜನರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದ್ದು, ತೊಂದರೆ ಎದುರಿಸುವ ಕುಟುಂಬಗಳನ್ನು ಗುರುತಿಸಿ ಸ್ಥಳಾಂತರಿಸುವ ಕಾರ್ಯವೂ ಚುರುಕಾಗಿದೆ. ಅಲ್ಲದೆ ಕಾಳಜಿ ಕೇಂದ್ರ ತೆರೆಯಲೂ ಸಹ ವ್ಯವಸ್ಥೆ ಮಾಡಲಾಗಿದೆ. ಜುಲೈ ತಿಂಗಳಲ್ಲಿ ಸುರಿದ ಹೆಚ್ಚು ಮಳೆಯಿಂದ ಪ್ರವಾಹ ಬಂದ ಸಂದರ್ಭದಲ್ಲಿಯೂ ಕಾಳಜಿ ಕೇಂದ್ರ ತೆರೆದು 38 ಕುಟುಂಬಗಳ 180 ಜನರಿಗೆ ಕಾಳಜಿ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಬಂದಲ್ಲಿ, ಇನ್ನಷ್ಟು ಕಾಳಜಿ ಕೇಂದ್ರ ತೆರೆದು ಅಗತ್ಯ ಊಟೋಪಹಾರ ಹಾಗೂ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಮಳೆಯಿಂದ ಬಿದ್ದಿರುವ ಮನೆಗಳೆಷ್ಟು?

ಮಳೆಯಿಂದ ಬಿದ್ದಿರುವ ಮನೆಗಳೆಷ್ಟು?

ಮಳೆಯಿಂದಾಗಿ ಈ ವರ್ಷದ ಏಪ್ರಿಲ್‍ನಿಂದ ಈವರೆಗೆ ಜಿಲ್ಲೆಯಲ್ಲಿ ಒಟ್ಟು 23 ಮನೆಗಳು ಸಂಪೂರ್ಣ ಹಾನಿಗೊಂಡಿದ್ದು, 583 ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ. ಈವರೆಗೆ 19 ಲಕ್ಷ ರೂ. ಪರಿಹಾರ ನೀಡಲಾಗಿದ್ದು, ಇನ್ನೂ 35 ಲಕ್ಷ ರೂ. ಪರಿಹಾರ ನೀಡಬೇಕಿದೆ. ಮನೆ ಹಾನಿ ವರದಿ ನೀಡುವ ಸಂದರ್ಭದಲ್ಲಿ ಮನೆಯ ಒಂದು ಭಾಗದ ಗೋಡೆ ಸಂಪೂರ್ಣವಾಗಿ ಬಿದ್ದುಹೋಗಿ, ಆ ಮನೆಯನ್ನು ಕೆಡವಿಯೇ ಪುನಃ ಮನೆ ಕಟ್ಟಬೇಕಿರುತ್ತದೆ. ಆದರೆ ಅಧಿಕಾರಿಗಳು ಅಂತಹ ಪ್ರಕರಣದಲ್ಲಿ ಭಾಗಶಃ ಹಾನಿ ಎಂದು ವರದಿ ಸಲ್ಲಿಸುತ್ತಿದ್ದು, ಇದರಿಂದ ಸಂತ್ರಸ್ತರಿಗೆ ಅಲ್ಪ ಪರಿಹಾರ ಸಿಗುತ್ತಿದೆ ಎಂಬುದು ಜಿಲ್ಲೆಯ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.

ಶಾಶ್ವತ ಪರಿಹಾರ ಕಲ್ಪಿಸಿ

ಶಾಶ್ವತ ಪರಿಹಾರ ಕಲ್ಪಿಸಿ

"ಪ್ರತಿವರ್ಷ ಮಳೆ ಹೆಚ್ಚಾದಾಗ, ಪ್ರವಾಹ ಸಂದರ್ಭದಲ್ಲಿ ಗಂಗಾನಗರ ಮುಳುಗಡೆಯಾಗಿ ಜನರು ತೊಂದರೆ ಎದುರಿಸುತ್ತಿದ್ದಾರೆ, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು" ಎಂದು ಹರಿಹರದ ಶಾಸಕ ರಾಮಪ್ಪ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಒಂದೆಡೆ ಮಳೆ, ಮತ್ತೊಂದೆಡೆ ಪ್ರವಾಹದಿಂದ ಹೊನ್ನಾಳಿ, ಚನ್ನಗಿರಿ ಸೇರಿದಂತೆ ಹಲವೆಡೆ ಭಾರೀ ನಷ್ಟ ಸಂಭವಿಸಿದ್ದು, ರೈತರು ಮತ್ತು ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಯಾವ ರೀತಿಯಲ್ಲಿ ಜನರು ಹಾಗೂ ರೈತರ ನೆರವಿಗೆ ಧಾವಿಸುತ್ತದೆ ಎಂಬುದನ್ನು ಕಾದು‌ ನೋಡಬೇಕಿದೆ.

Recommended Video

ಹವಾಮಾನ ಇಲಾಖೆಯಿಂದ ಭಾರಿ ಮಳೆ ಸೂಚನೆ! | Oneindia Kannada
ಸಚಿವ ಬೈರತಿ ಪರಿಶೀಲನೆ

ಸಚಿವ ಬೈರತಿ ಪರಿಶೀಲನೆ

ಮುಖ್ಯಮಂತ್ರಿಗಳ ಸೂಚನೆಯಂತೆ ಸಚಿವ ಬೈರತಿ ಬಸವರಾಜ ದಾವಣಗೆರೆ ಜಿಲ್ಲೆಯಲ್ಲಿ ಮಳೆ ಹಾನಿ ಅಧ್ಯಯನ ನಡೆಸಿದರು. ಹರಿಹರ ತಾಲೂಕಿನ ಹಿರೇಹಳ್ಳದ ಕೊಂಡಜ್ಜಿ ಹಾಗೂ ಗಂಗನಹರಸಿ ಸಂಪರ್ಕ ಸೇತುವೆ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಕೊಚ್ಚಿ ಹೋಗಿ ಗ್ರಾಮಗಳ ನಡುವೆ ಸಂಪರ್ಕ ಕಡಿದು ಹೋಗಿತ್ತು. ಅದರ ಮೇಲ್ಸೇತುವೆ ಪುನರ್ ನಿರ್ಮಾಣಕ್ಕೆ ರೂ.2 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಕೊಂಡಜ್ಜಿ ಗ್ರಾಮದ ಮಳೆ ಹಾನಿ ಪ್ರದೇಶಗಳಿಗೆ ಹಾಗೂ ನೆರೆ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಹಿರೇಹಳ್ಳದ ಕೊಂಡಜ್ಜಿ ಹಾಗೂ ಗಂಗನಹರಸಿ ಸಂಪರ್ಕ ಸೇತುವೆ ಪುನರ್ ನಿರ್ಮಾಣದೊಂದಿಗೆ, ಈ ಮಾರ್ಗದ ರಸ್ತೆಗಳನ್ನು ಸುಧಾರಣೆ ಮಾಡಬೇಕಿದೆ. ಹೊಸ ಸೇತುವೆ ನಿರ್ಮಾಣಕ್ಕೆ ಅಂದಾಜು ವೆಚ್ಚ ತಯಾರಿಸಿ ಕೂಲಂಕಶವಾಗಿ ಅಧ್ಯಯನ ನಡೆಸಿ ವರದಿ ನೀಡಬೇಕು ಎಂದು ಇಂಜಿನಿಯರಿಂಗ್‍ಗಳಿಗೆ ಸೂಚಿಸಿದ್ದಾರೆ.

English summary
More than 40 crore loss in Davanagere district by the rain and flood in the month of July. 23 house full damaged due to rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X