ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ: ರೈಲಿನಡಿ ಸಿಲುಕುತ್ತಿದ್ದ ಮಹಿಳೆ ರಕ್ಷಿಸಿದ ರೈಲ್ವೆ ಪೊಲೀಸರು

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮೇ 16: ರೈಲಿನಿಂದ ಆಕಸ್ಮಿಕವಾಗಿ ಆಯತಪ್ಪಿ ಬಿದ್ದ ವೃದ್ಧೆಯನ್ನು ರೈಲ್ವೆ ಪೊಲೀಸರಿಬ್ಬರು ರಕ್ಷಣೆ ಮಾಡಿದ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಬೆಂಗಳೂರಿನಿಂದ ಮೀರಜ್‌ಗೆ ತೆರಳುತ್ತಿದ್ದ ರೈಲಿನಿಂದ ವೃದ್ದೆ ಆಕಸ್ಮಿಕವಾಗಿ ಬಿದ್ದರು. ಇನ್ನೇನೂ ರೈಲ್ವೆ ಹಳಿಯಡಿ ಬಿದ್ದು ಚಕ್ರಕ್ಕೆ ಸಿಲುಕುವಷ್ಟರಲ್ಲೇ ರೈಲ್ವೆ ಪೊಲೀಸರ ಸಮಯ ಪ್ರಜ್ಞೆಯಿಂದ 60 ವರ್ಷದ ವೃದ್ದೆ ಬಚಾವಾಗಿದ್ದಾರೆ‌.

ಬೆಂಗಳೂರಿನಿಂದ ಮೀರಜ್‌ಗೆ ವಿಶ್ವ ಮಾನವ ಎಕ್ಸ್ ಪ್ರೆಸ್ ರೈಲಿನಲ್ಲಿ ವೃದ್ದೆ ಪ್ರಯಾಣ ಮಾಡುತ್ತಿದ್ದರು. ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ನೀರು ಕುಡಿಯುವುದಕ್ಕಾಗಿ ಇಳಿದಿದ್ದರು. ಈ ವೇಳೆ ರೈಲು ಹೊರಟಿದ್ದು, ಓಡಿ ಬಂದು ರೈಲು ಹತ್ತುವಾಗ ಆಯತಪ್ಪಿ ಬೋಗಿಯ ಪ್ರವೇಶ ದ್ವಾರದ ಬಳಿ ಕೈ ಹಿಡಿತ ತಪ್ಪಿ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ.

Railway police rescued a woman caught under train

ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ರೈಲ್ವೆ ಪೊಲೀಸ್ ಕಾನ್ ಸ್ಟೇಬಲ್‌ಗಳಾದ ಟಿ. ಆರ್. ಚೇತನ್ ಗಮನಿಸಿದ್ದು, ಕೂಡಲೇ ರೈಲಿನಡಿಗೆ ಬೀಳುತ್ತಿದ್ದ ಮಹಿಳೆಯ ಕೈಹಿಡಿದು ಮೇಲಕ್ಕೆ ಎತ್ತುವ ಮೂಲಕ ರಕ್ಷಣೆ ಮಾಡಿದರು‌.

ಮತ್ತೊಬ್ಬ ಕಾನ್ ಸ್ಟೇಬಲ್ ಆದ ಬಿ. ಎನ್. ಹಾಲೇಶ್ ಸಹ ನೆರವಿಗೆ ಧಾವಿಸಿ ಇಬ್ಬರೂ ಕೂದಲೆಳೆಯ ಅಂತರದಲ್ಲಿ ಅಜ್ಜಿಯ ಪ್ರಾಣ ಉಳಿಸಿದ್ದಾರೆ.

Railway police rescued a woman caught under train

ಈ ಘಟನೆ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ‌‌. ಹಾಲೇಶ್ ಹಾಗೂ ಚೇತನ್ ಅವರ ಈ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ಮಹಿಳೆಗೆ ಧೈರ್ಯ ಹೇಳಿ ಸ್ವಲ್ಪ ಹೊತ್ತು ಕೂರಿಸಿ ಸಮಾಧಾನಪಡಿಸಿದರು‌. ಕೆಲವು ತಿಂಗಳ ಹಿಂದೆಯಷ್ಟೇ ಇದೇ ರೀತಿ ಪೊಲೀಸರು ವೃದ್ದೆಯನ್ನು ರಕ್ಷಿಸಿದ್ದರು‌. ಜನರು ರೈಲು ಹೊರಡುವಾಗ ಎಚ್ಚರಿಕೆಯಿಂದ ಇರಬೇಕು. ಸ್ವಲ್ಪ ಆಯಾತಪ್ಪಿ ಬಿದ್ದರೂ ಅನಾಹುತ ಆಗುತ್ತದೆ ಎಂದು ರೈಲ್ವೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ‌.

Recommended Video

ನನ್ ಬೌಲಿಂಗ್ ಅಂದ್ರೆ ತಮಾಷೆ ಅಲ್ಲಾ !! | Oneindia Kannada

English summary
The incident took place at the railway station in the city where railway police were rescued by an elderly man who accidentally fell from the train,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X