ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಸಿದ್ಧತೆ ಶುರು

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ನವೆಂಬರ್ 11: ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು, ಪಟಾಕಿ ವ್ಯಾಪಾರಕ್ಕಾಗಿ ದಾವಣಗೆರೆಯ ನಗರದ ಹೈಸ್ಕೂಲ್ ಮೈದಾನ ಸಿದ್ಧಗೊಳ್ಳುತ್ತಿದೆ.

"ಮೊದಲೇ ಲೈಸೆನ್ಸ್ ಪಡೆದು ಕೋವಿಡ್ ಮಾರ್ಗಸೂಚಿ ಅನ್ವಯ ಈ ಬಾರಿ ದೀಪಾವಳಿ ಹಬ್ಬದಲ್ಲಿ ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸುವುದರ ಜೊತೆಗೆ ಮಾಲಿನ್ಯ ರಹಿತವಾಗಿ ಆಚರಿಸಬೇಕು' ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಮಾಡಿದ್ದಾರೆ.

ಈ ಬಾರಿಯ ದೀಪಾವಳಿ ಹೊಗೆಯ ಚೆಲ್ಲಾಟವಾಗದೆ ಪರಿಸರ ಸ್ನೇಹಿಯಾಗಲಿಈ ಬಾರಿಯ ದೀಪಾವಳಿ ಹೊಗೆಯ ಚೆಲ್ಲಾಟವಾಗದೆ ಪರಿಸರ ಸ್ನೇಹಿಯಾಗಲಿ

'ಪ್ರತಿ ವರ್ಷ ಪಟಾಕಿಗಳನ್ನು ಸಿಡಿಸಿ ವಿಜೃಂಭಣೆಯಿಂದ ಹಬ್ಬ ಆಚರಿಸಲಾಗುತ್ತಿತ್ತು. ಆದರೆ ಜನರ ಆರೋಗ್ಯದ ದೃಷ್ಟಿಯಿಂದ ಕೋವಿಡ್ ಸೋಂಕನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯವಿದೆ. ಆದ್ದರಿಂದ ಹಸಿರು ಹೊರತುಪಡಿಸಿ ಉಳಿದ ಯಾವುದೇ ಪಟಾಕಿಗಳನ್ನು ಮಾರಾಟ ಅಥವಾ ಬಳಕೆ ಮಾಡುವಂತಿಲ್ಲ' ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Davanagere: Preparations Started For Fire Crackers Sale At Highschool Ground

'ನ.13ರಿಂದ ನ.17ರತನಕ ಪಟಾಕಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಲೈಸೆನ್ಸ್ ನೀಡಲಾಗಿದೆ. ಪಟಾಕಿಗಳನ್ನು ಮಾರಾಟ ಮಾಡುವ ಮಳಿಗೆಗಳ ಸುತ್ತಮುತ್ತ ದಿನನಿತ್ಯ ಸ್ಯಾನಿಟೈಸ್ ಮಾಡಬೇಕು. ಸಾರ್ವಜನಿಕರಿಗೆ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಾಗಿ ಪಾಲಿಸಬೇಕು. ಜನದಟ್ಟಣೆಯಾಗದಂತೆ ನೋಡಿಕೊಳ್ಳಬೇಕು' ಎಂದು ಸೂಚಿಸಿದ್ದಾರೆ.

ಈ ಬಾರಿ 52 ಅಂಗಡಿಗಳು: ನಗರದ ಹೈಸ್ಕೂಲ್ ಮೈದಾನದಲ್ಲಿ ಈ ಬಾರಿ 52 ಪಟಾಕಿ ಅಂಗಡಿಗಳಲ್ಲಿ ವ್ಯಾಪಾರ ನಡೆಯಲಿದೆ. ಕಳೆದ ಬಾರಿ ವ್ಯಾಪಾರಿಗಳ ಸಂಖ್ಯೆ 82 ಇತ್ತು. ತಾಲೂಕುಗಳಿಂದ 32 ಅರ್ಜಿಗಳು ಬಂದಿವೆ.

Recommended Video

Ishan Kishan ಆಟ ಹೀಗೆ ಆಗಲು Pandya ಸಹೋದರರೇ ಕಾರಣವಂತೆ | Oneindia Kannada

ಯಾವುದು ಹಸಿರು ಪಟಾಕಿ: 125 ಡೆಸಿಬಲ್ ‌ಗಿಂತ ಕಡಿಮೆ ಶಬ್ದ ಇರುವ ಪಟಾಕಿ, ಹೂವಿನಕುಂಡ, ಆನೆಪಟಾಕಿ, ಸೂಸರು ಬತ್ತಿ ಸೇರಿದಂತೆ ಇನ್ನಿತರ ಸಣ್ಣ ಶಬ್ದವನ್ನು ಹೊಂದಿರುವ ಪಟಾಕಿಗಳನ್ನೇ ಹಸಿರು ಪಟಾಕಿ ಎನ್ನುತ್ತಾರೆ. "ಮಾರ್ಗಸೂಚಿಗಳನ್ನು ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ, ಅಗ್ನಿಶಾಮಕ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಆಯಾ ಸ್ಥಳೀಯ ಸಂಸ್ಥೆಗಳು ಕಟ್ಟುನಿಟ್ಟಾಗಿ ಪಾಲಿಸಬೇಕು' ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷರೂ ಆಗಿರುವ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.

English summary
Davanagere High School Ground is getting ready for the firecrackers sale for deepavali festival
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X