ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯಲ್ಲಿ ಪಾಲಿಕೆ ಮತದಾನಕ್ಕೆ ಭರದ ಸಿದ್ಧತೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ನವೆಂಬರ್ 11: ದಾವಣಗೆರೆ ಮಹಾನಗರ ಪಾಲಿಕೆ‌ ಚುನಾವಣೆ ಮತದಾನ ನಾಳೆ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ನಡೆಯಲಿದ್ದು, ಇಂದು ನಗರದ ಡಿಆರ್ ‌ಆರ್‌ ಶಾಲೆ ಆವರಣದಲ್ಲಿ ಮಸ್ಟರಿಂಗ್ ಕಾರ್ಯ ನಡೆಯಿತು.

ಪಾಲಿಕೆ ವ್ಯಾಪ್ತಿಯ 45 ವಾರ್ಡ್ ಚುನಾವಣೆ ಕಣದಲ್ಲಿ 44 ಕಾಂಗ್ರೆಸ್, 45 ಬಿಜೆಪಿ, 23 ಜೆಡಿಎಸ್, 6 ಸಿಪಿಐ, 3 ಬಿಎಸ್ಪಿ, 2 ಕೆಪಿಜೆಪಿ, 1 ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಹಾಗೂ 84 ಪಕ್ಷೇತರರು ಒಟ್ಟು 208 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ ನಡೆಯಲಿದೆ.

ದಾವಣಗೆರೆ ಪಾಲಿಕೆ ಚುನಾವಣೆ; ಈ ಬಾರಿ ಮಹಿಳೆಯರದ್ದೇ ದರ್ಬಾರ್ದಾವಣಗೆರೆ ಪಾಲಿಕೆ ಚುನಾವಣೆ; ಈ ಬಾರಿ ಮಹಿಳೆಯರದ್ದೇ ದರ್ಬಾರ್

45 ವಾರ್ಡ್ ಚುನಾವಣೆಗೆ 377 ಮತಗಟ್ಟೆ ನಿರ್ಮಿಸಲಾಗಿದೆ. ಪಾಲಿಕೆ ಚುನಾವಣೆಗೆ 1,90,506 ಪುರುಷರು, 1,90,347 ಮಹಿಳೆಯರು, 64 ಇತರೆ ಒಟ್ಟು 3,80,917 ಮತದಾರರು ಮತದಾನದ ಹಕ್ಕು ಚಲಾಯಿಸಲಿದ್ದಾರೆ. ಈ ಬಾರಿ ಚುನಾವಣೆಗೆ ಇವಿಎಂ ಉಪಕರಣ ಮಾತ್ರ ಬಳಕೆಯಾಗಲಿದೆ. ಇವಿಎಂ ಹಾಗೂ ಅಗತ್ಯ ಪರಿಕರಗಳೊಂದಿಗೆ ಮತಗಟ್ಟೆಗೆ ಹೊರಡಲು ಚುನಾವಣೆ ಅಧಿಕಾರಿಗಳು, ಸಿಬ್ಬಂದಿ ಸಜ್ಜಾಗುತ್ತಿದ್ದ ದೃಶ್ಯ ಕಂಡು ಬಂತು.

Preparations For Davanagere Corporation Election

ಅಧಿಕಾರಿಗಳನ್ನು ಹಾಗೂ ಚುನಾವಣೆಗೆ ಸಂಬಂಧಿಸಿ ಪರಿಕರಗಳನ್ನು ರವಾನಿಸಲು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಸ್ಟ್ರಾಂಗ್ ರೂಂ ಅನ್ನು ಡಿ ಆರ್ ಆರ್ ಶಾಲೆಯಲ್ಲಿ ಮಾಡಲಿದ್ದು, ಸೂಕ್ತ ಭದ್ರತೆಯನ್ನು ಸಹ ಜಿಲ್ಲಾಡಳಿತ ನೀಡಿದೆ. ಜಿಲ್ಲಾಧಿಕಾರಿ ಮಹಂತೇಶ ಬೀಳಗಿ, ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ, ಎಸ್ಪಿ ಹನುಮಂತರಾಯ ಸೇರಿದಂತೆ ಹಲವು ಅಧಿಕಾರಿಗಳು ಮಸ್ಟರಿಂಗ್ ಕಾರ್ಯದ ಮೇಲ್ವಿಚಾರಣೆ ನಡೆಸಿದರು.

English summary
The preperations for corporation election is going on in Davanagere city. The polls will be held tomorrow for corporation from morning from 7 am to 5 pm,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X