ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆಗಾಗಿ ಪ್ರಾರ್ಥಿಸಿ ದಾವಣಗೆರೆ ರಾಯರ ಮಠದಲ್ಲಿ ಪರ್ಜನ್ಯ ಜಪ

|
Google Oneindia Kannada News

ದಾವಣಗೆರೆ, ಜೂನ್ 1: ದಾವಣಗೆರೆ ನಗರದಲ್ಲಿ ಮಳೆಯಿಲ್ಲದೆ ಜನರು ಕಂಗಾಲಾಗಿದ್ದಾರೆ. ದೇವರಿಗೆ ಮೊರೆ ಹೋಗುವುದೇ ಅಂತಿಮ ಮಾರ್ಗ ಎಂದು ಭಾವಿಸಿದ್ದರಿಂದಲೋ ಏನೋ ನಗರದ ನಾನಾ ಕಡೆ ವಿವಿಧ ಪುಜಾ ಕಾರ್ಯಕ್ರಮಗಳನ್ನು ನೆರವೇರಿಸಿದ್ದಾರೆ. ಇನ್ನು ಇಲ್ಲಿನ ರಾಘವೇಂದ್ರ ಸ್ವಾಮಿ ಮಠದಲ್ಲಿ ಬೆಳಗ್ಗೆ ವಿಶೇಷ ಪೂಜೆ ನಡೆದಿದೆ.

ಆ ನಂತರ ಪರ್ಜನ್ಯ ಜಪ, ಹೋಮ ಮತ್ತು ಮಹಾಭಾರತದಲ್ಲಿನ ವಿರಾಟ ಪರ್ವದ ಪ್ರವಚನ ನಡೆದಿದೆ. ರಾಘವೇಂದ್ರ ಸ್ವಾಮಿ ಮಠದಲ್ಲಿನ ತೊಟ್ಟಿಯಲ್ಲಿ ನೀರಿನಲ್ಲಿ ಕುಳಿತು, ಪರ್ಜನ್ಯ ಸೂಕ್ತ ಜಪವನ್ನು ಮಾಡಿ, ಜಿಲ್ಲೆಯಲ್ಲಿ ಸಮೃದ್ಧ ಮಳೆ-ಬೆಳೆ ಆಗಲಿ ಎಂದು ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.[ಪ್ರೀತಿಸಿದ ಹುಡುಗಿಗಾಗಿ ಹಿಂದೂ ಧರ್ಮಕ್ಕೆ ಮತಾಂತರವಾದ ಮುಸ್ಲಿಂ ಯುವಕ]

Prayer for rain in Davanagere Raghavendra swamy mutt

ವೆಂಕಟೇಶ್, ಪ್ರಹ್ಲಾದ ಆಚಾರ್ಯ, ವೆಂಕಟ ಗಿರೀಶ ಆಚಾರ್ಯ, ಜಯತೀರ್ಥ, ಪುರಾಣಿಕ್ ಸೇರಿದ ಹಾಗೆ ಹದಿನೆಂಟು ಮಂದಿ ಪರ್ಜನ್ಯ ಸೂಕ್ತ ಜಪದಲ್ಲಿ ಪಾಲ್ಗೊಂಡರು. ಸಂಜೆ ಗಿರೀಶ ಆಚಾರ್ಯರಿಂದ ವಿರಾಟ ಪರ್ವದ ಪ್ರವಚನ ನಡೆಯಿತು. ಇನ್ನು ಹೋಮದ ಸಂಕಲ್ಪ ಹಾಗೂ ಪ್ರವಚನ ಸೇವೆಗಾಗಿ ಭಕ್ತರು ದೇಣಿಗೆ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

Prayer for rain in Davanagere Raghavendra swamy mutt

ಮತ್ತಷ್ಟು ಮಾಹಿತಿಗಾಗಿ ಮತ್ತು ಸೇವೆ ನೀಡಲು ಬಯಸುವವರು ಮೊಬೈಲ್ ಫೋನ್ ಸಂಖ್ಯೆ 9480325428, 94492 46199, 990001 53953 ಸಂಪರ್ಕಿಸಬಹುದು. ಜೂನ್ 4ನೇ ತಾರೀಕು ಬೆಳಗ್ಗೆ 9 ಗಂಟೆಯಿಂದ ಪರ್ಜನ್ಯ ಸೂಕ್ತ ಹೋಮ ನಡೆಯಲಿದೆ. ಜತೆಗೆ ವಿರಾಟ ಪರ್ವ ಪ್ರವಚನ ಇರುತ್ತದೆ. ಈ ಎಲ್ಲ ಕಾರ್ಯಕ್ರಮಗಳು ವಿಶ್ವ ಮಾಧ್ವ ಪರಿಷದ್ ನಿಂದ ನಡೆಯಲಿವೆ.['ಅಲ್ಪಸಂಖ್ಯಾತರಾಗುತ್ತಿರುವ ಬ್ರಾಹ್ಮಣರು ಸಮಾಜದಲ್ಲಿ ಮೂಲೆಗುಂಪು']

ಸೇವಾ ವಿವರ: ಪರ್ಜನ್ಯ ಸೂಕ್ತ ಹೋಮ ಸಂಕಲ್ಪ- 200, ಪ್ರವಚನ ಸೇವೆ- 500, ಹಸ್ತೋದಕ ಸೇವೆ- 150.

English summary
Parjanya sukta japa in Davanagere Raghavendra mutt, prayer by devotees for rain. Homa will be on June 4th. Who wish to contribute to this event can contact mutt through mobile phone numbers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X