ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುರಿ, ಕೋಳಿಗಳನ್ನು ಹಲಾಲ್ ಮಾಡದಂತೆ ತಿನ್ನಿ: ಮುತಾಲಿಕ್ ಕರೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮಾರ್ಚ್ 04: ಕುರಿ, ಮೇಕೆ‌ಗಳನ್ನು ಜಾತ್ರೆಯಲ್ಲಿ ಹಲಾಲ್ ಮಾಡದಂತೆ ತಿನ್ನಿ, ಮುಸ್ಲಿಂ ‌ಸಂಪ್ರದಾಯವನ್ನು ಹಿಂದೂ ಧರ್ಮದಲ್ಲಿ ಅಳವಡಿಸಿಕೊಳ್ಳಬೇಡಿ ಎಂದು ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಪ್ರಸಿದ್ಧ ದಾವಣಗೆರೆಯ ದುಗ್ಗಮ್ಮ ಜಾತ್ರೆಗೆ ತಂದ ಕುರಿಯನ್ನು ಮುಸ್ಲಿಂ ಸಂಪ್ರದಾಯದಂತೆ ಹಲಾಲ್ ಮಾಡುವ ಸಂಪ್ರದಾಯ ಕೈ ಬಿಟ್ಟು, ನಮ್ಮ ಹಿಂದು ಧರ್ಮ ಪದ್ದತಿಯಂತೆ ಕಡಿದು ತಿನ್ನಿರಿ ಎಂದು ಪ್ರಮೋದ್ ಮುತಾಲಿಕ್ ಮನವಿ ಮಾಡಿದ್ದಾರೆ.

ದಾವಣಗೆರೆ ದುಗ್ಗಮ್ಮ ಜಾತ್ರೆಯಲ್ಲಿ ಕೊನೆಗೂ ಕೋಣ ಬಲಿ!ದಾವಣಗೆರೆ ದುಗ್ಗಮ್ಮ ಜಾತ್ರೆಯಲ್ಲಿ ಕೊನೆಗೂ ಕೋಣ ಬಲಿ!

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಹಂಚಿಕೊಂಡಿರುವ ಅವರು, ದಾವಣಗೆರೆಯಲ್ಲಿ ಅದ್ಧೂರಿಯಾಗಿ ದುಗ್ಗಮ್ಮನ ಜಾತ್ರೆ ನಡೆಯುತ್ತಿದ್ದು, ಕುರಿಗಳನ್ನು ಮುಸ್ಲಿರಿಂದ ಹಲಾಲ್ ಮಾಡಿಸಲಾಗುತ್ತಿದೆ, ಇದು ಹಿಂದು ಧರ್ಮಕ್ಕೆ ಅಪಪ್ರಚಾರ ಮಾಡಿದಂತೆ ಎಂದರು.

Pramod Muthalik Said Dont Merge Muslim Tradition With Hindu

ದುಗ್ಗಮ್ಮನ ಜಾತ್ರೆಯಲ್ಲಿ ಅರೆ ಬೆತ್ತಲೆ ಹರಕೆ; ತರಾಟೆ ತೆಗೆದುಕೊಂಡ ಡಿಸಿದುಗ್ಗಮ್ಮನ ಜಾತ್ರೆಯಲ್ಲಿ ಅರೆ ಬೆತ್ತಲೆ ಹರಕೆ; ತರಾಟೆ ತೆಗೆದುಕೊಂಡ ಡಿಸಿ

ಹಾಗೆ ಮಾಡಿದರೆ ತಾಯಿ‌ ದುಗ್ಗಮ್ಮನಿಗೆ ಅವಮಾನ ಮಾಡಿದಂತೆ, ಗೋ ಹಂತಕರಿಂದ ಹಲಾಲ್ ಮಾಡಿಸುವುದು ಬೇಡ ಎಂದು ಅವರು ಮನವಿ‌ ಮಾಡಿದ್ದಾರೆ. ಇನ್ನು ವಿಜೃಂಭಣೆಯಿಂದ ಶಾಂತಿ ರೀತಿಯಲ್ಲಿ ಹಬ್ಬ ಆಚರಿಸಿ, ತಾಯಿ ದುಗ್ಗಮ್ಮ ಎಲ್ಲರಿಗೂ ಒಳ್ಳೆಯದು‌ ಮಾಡಲಿ ಎಂದು ಪ್ರಮೋದ್ ಮುತಾಲಿಕ್ ಶುಭ ಹಾರೈಸಿದ್ದಾರೆ.

English summary
Srirama Sena leader Pramod Muthalik has said that the Muslim tradition should not be adopted in Hinduism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X