ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಥಳೀಯ ಸಂಸ್ಥೆ ಚುನಾವಣೆ; ಶಾಂತಿಯುತವಾಗಿ ಸಾಗಿದ ಮತದಾನ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಒಟ್ಟು ಹದಿನಾಲ್ಕು ಸ್ಥಳೀಯ ಸಂಸ್ಥೆಗಳಿಗೆ ಇಂದು ಮತದಾನ ನಡೆಯಲಿದ್ದು, ದಾವಣಗೆರೆಯ ಎಲ್ಲ ಬೂತ್ ಗಳಲ್ಲಿ ಮತದಾನ ಆರಂಭಗೊಂಡಿದೆ.

ದಾವಣಗೆರೆ ಮಹಾನಗರ ಪಾಲಿಕೆಯ 45 ವಾರ್ಡ್ ಗಳಿಗೆ ಇಂದು ಮತದಾನ ನಡೆಯಲಿದ್ದು, 377 ಮತಗಟ್ಟೆಗಳ ಮತದಾನ ನಡೆಯಲಿದೆ. 28 ಅತಿ ಸೂಕ್ಷ್ಮ, 67 ಸೂಕ್ಷ್ಮ ಮತಗಟ್ಟೆಗಳೆಂದು ಜಿಲ್ಲಾಡಳಿತ ಗುರುತಿಸಿದೆ. ಬಿಜೆಪಿಯ 45, ಕಾಂಗ್ರೆಸ್ 44, ಜೆಡಿಎಸ್ 23, ಸಿಪಿಐ 6 ಅಭ್ಯರ್ಥಿಗಳಿದ್ದು, ಒಟ್ಟಾರೆ 208 ಜನ ಕಣದಲ್ಲಿದ್ದಾರೆ.

14 ನಗರ ಸ್ಥಳೀಯ ಸಂಸ್ಥೆಗಳಿಗೆ ಇಂದು ಚುನಾವಣೆ14 ನಗರ ಸ್ಥಳೀಯ ಸಂಸ್ಥೆಗಳಿಗೆ ಇಂದು ಚುನಾವಣೆ

142 ಕಡೆ ಸಿಸಿ ಕ್ಯಾಮರಾ ಅಳವಡಿಸಿದ್ದು, 828 ಪೊಲೀಸ್ ಸಿಬ್ಬಂದಿಯಿಂದ ಭದ್ರತೆ ಕಲ್ಪಿಸಲಾಗಿದೆ. ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 380917 ಮತದಾರರು ಹಕ್ಕು ಚಲಾಯಿಸಲಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾದವ್ ಕುಟುಂಬ ಸಮೇತ ಬಂದು ಮತದಾನ ಮಾಡಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ ಆರಂಭಗೊಂಡಿದ್ದು, ಲೇಡಿಹಿಲ್ ನ ಸಂತ ಅಲೋಶಿಯಸ್ ಶಾಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತದಾನ ಮಾಡಿದ್ದಾರೆ. "ಮಂಗಳೂರಿನಲ್ಲಿ ಈ ಬಾರಿ ಬಿಜೆಪಿ ಮುನ್ನಡೆ ಸಾಧಿಸುವ ನಿರೀಕ್ಷೆಯಿದೆ. ಕಾಂಗ್ರೆಸ್ ದುರಾಡಳಿತಕ್ಕೆ ಬೇಸತ್ತು ಜನ ಬಿಜೆಪಿ ಆರಿಸಲಿದ್ದಾರೆ ಎಂದು ಹೇಳಿದರು. ಗಾಂಧಿನಗರ ಸರ್ಕಾರಿ ಶಾಲೆಯಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮತದಾನ ಮಾಡಿದ್ದಾರೆ.

 ಕಣಕ್ಕಿಳಿದ ಅಭ್ಯರ್ಥಿಗಳು

ಕಣಕ್ಕಿಳಿದ ಅಭ್ಯರ್ಥಿಗಳು

ದಾವಣಗೆರೆ ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 40ರಲ್ಲಿ ‌ಮಾಜಿ ಸಚಿವ ಹಾಲಿ ಶಾಸಕ ಎಸ್ ಎ.ರವೀಂದ್ರನಾಥ ಪುತ್ರಿ ವೀಣಾ ನಂಜಣ್ಣ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದಾರೆ. ವಾರ್ಡ್ ನಂಬರ್ 17ರಲ್ಲಿ ಮಾಜಿ ಎಸ್ ಎಸ್ ಮಲ್ಲಿಕಾರ್ಜುನ ಆಪ್ತ ದಿನೇಶ ಶೆಟ್ಟಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದಾರೆ. ವಾರ್ಡ್ ನಂಬರ್ 42ರಲ್ಲಿ ಮಾಜಿ ಶಾಸಕ ಗುರುಸಿದ್ದನಗೌಡ್ರ ಸೊಸೆ ಪ್ರೀತಿ ರವಿಕುಮಾರ್ ಪಕ್ಷೇತರ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ವಾರ್ಡ್ ನಂಬರ್ 10ರಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ ಪುತ್ರ ರಾಕೇಶ ಜಾಧವ್ ಬಿಜೆಪಿಯಿಂದ ಸ್ಪರ್ಧಿಸಿದ್ದರೆ, ವಾರ್ಡ್ ನಂಬರ್ 22ರಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ ಕಾಂಗ್ರೆಸ್ ‌ನಿಂದ ಸ್ಪರ್ಧಿಸಿದ್ದಾರೆ.

 ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾದವ್ ಮತದಾನ

ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾದವ್ ಮತದಾನ

ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ 142 ಕಡೆ ಸಿಸಿ ಕ್ಯಾಮರಾ ಅಳವಡಿಸಿದ್ದು, 828 ಪೊಲೀಸ್ ಸಿಬ್ಬಂದಿಯಿಂದ ಭದ್ರತೆ ಕಲ್ಪಿಸಲಾಗಿದೆ. ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 380917 ಮತದಾರರು ಹಕ್ಕು ಚಲಾಯಿಸಲಿದ್ದಾರೆ. ದೇವರಾಜ್ ಅರಸ್ ಬಡಾವಣೆಯ ಬೂತ್ ನಂ- 69ರಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾದವ್ ಕುಟುಂಬ ಸಮೇತ ಬಂದು ಮತದಾನ ಮಾಡಿದ್ದಾರೆ. ಜಾದವ್ ಪುತ್ರ ರಾಕೇಶ್ ಜಾದವ್ ಬಿಜೆಪಿ ಅಭ್ಯರ್ಥಿಯಾಗಿದ್ದು, 10ನೇ ವಾರ್ಡ್ ನಿಂದ ಸ್ಪರ್ಧಿಸಿದ್ದಾರೆ.

 ನಳೀನ್ ಕುಮಾರ್ ಕಟೀಲ್ ಮತದಾನ

ನಳೀನ್ ಕುಮಾರ್ ಕಟೀಲ್ ಮತದಾನ

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ ಆರಂಭಗೊಂಡಿದ್ದು, ಲೇಡಿಹಿಲ್ ನ ಸಂತ ಅಲೋಶಿಯಸ್ ಶಾಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತದಾನ ಮಾಡಿದ್ದಾರೆ. "ಮಂಗಳೂರಿನಲ್ಲಿ ಈ ಬಾರಿ ಬಿಜೆಪಿ ಮುನ್ನಡೆ ಸಾಧಿಸುವ ನಿರೀಕ್ಷೆಯಿದೆ. ಕಾಂಗ್ರೆಸ್ ದುರಾಡಳಿತಕ್ಕೆ ಬೇಸತ್ತು ಜನ ಬಿಜೆಪಿ ಆರಿಸಲಿದ್ದಾರೆ ಎಂದು ಹೇಳಿದರು.

 ಮತದಾನ ಮಾಡಿದ ವೇದವ್ಯಾಸ ಕಾಮತ್

ಮತದಾನ ಮಾಡಿದ ವೇದವ್ಯಾಸ ಕಾಮತ್

ಗಾಂಧಿನಗರ ಸರ್ಕಾರಿ ಶಾಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಮತದಾನ ಮಾಡಿದರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಗಾಂಧಿನಗರ ಮಣ್ಣಗುಡ್ಡೆ ಮತಗಟ್ಟೆ ಸಂಖ್ಯೆ 28ರಲ್ಲಿ ಪತ್ನಿಯೊಂದಿಗೆ ಆಗಮಿಸಿ ಮತ ಚಲಾಯಿಸಿದರು.

ಇಳಿ ವಯಸ್ಸಿನಲ್ಲಿ ಮೊದಲು‌ ಮತದಾನ ಮಾಡಿದ ವೃದ್ಧ

ಇಳಿ ವಯಸ್ಸಿನಲ್ಲಿ ಮೊದಲು‌ ಮತದಾನ ಮಾಡಿದ ವೃದ್ಧ

ದಾವಣಗೆರೆಯ ದೇವರಾಜ್ ಅರಸ್ ಬಡಾವಣೆಯಲ್ಲಿ ಮುದ್ದು ವೀರಯ್ಯ (91) ಎಂಬ ಹಿರಿಯ ನಾಗರೀಕರು ಮೊದಲು ಮತದಾನ ಮಾಡುವ ಮೂಲಕ ಮತದಾನದ ಮಹತ್ವವನ್ನು ತಿಳಿಸಿದರು. ವೀಲ್ ಚೇರ್ ನಲ್ಲಿ ಬಂದು ವಾರ್ಡ್ ನಂಬರ್ 7 ರಲ್ಲಿ ಮತದಾನ ಮಾಡಿದ ಅವರು, ಪ್ರತಿಯೊಬ್ಬರೂ ಮತದಾನ ಮಾಡಬೇಕೆಂದು ಮನವಿ ಮಾಡಿದರು.

ಬೀರೂರು ಪುರಸಭೆ ಚುನಾವಣೆ

ಬೀರೂರು ಪುರಸಭೆ ಚುನಾವಣೆ

ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪುರಸಭೆ ಚುನಾವಣೆಗೆ ಬಿರುಸಿನ ಮತದಾನ ನಡೆಯುತ್ತಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬೀರೂರಿನಲ್ಲಿ ಬೆಳಿಗ್ಗೆ 7ರಿಂದಲೇ ಪುರಸಭೆ ಚುನಾವಣೆಗೆ ಮತದಾನ ಶಾಂತಿಯುತವಾಗಿ ಸಾಗಿದೆ. ಬೀರೂರಿನ 23 ವಾರ್ಡ್ ಗಳಿಗೆ ಚುನಾವಣೆ ನಡೆದಿದ್ದು, ಒಂದು ವಾರ್ಡ್ ನಲ್ಲಿ ಅವಿರೋಧ ಆಯ್ಕೆಯಾಗಿದೆ. 16ನೇ ವಾರ್ಡಿನಲ್ಲಿ ಮೀನಾಕ್ಷಮ್ಮ ಮಲ್ಲಿಕಾರ್ಜುನ್ ಎಂಬುವರು ಅವಿರೋಧ ಆಯ್ಕೆಗೊಂಡವರು.

ಬೀರೂರಿನಲ್ಲಿ ಒಟ್ಟು 18535 ಮತದಾರರಿದ್ದು, ಅದರಲ್ಲಿ 9510 ಮಹಿಳೆಯರಿದ್ದರೆ, 9023 ಪುರುಷ ಮತದಾರರಿದ್ದಾರೆ. ಚುನಾವಣಾ ಕಣದಲ್ಲಿ 66 ಅಭ್ಯರ್ಥಿಗಳಿದ್ದು, ಕಾಂಗ್ರೆಸ್ 20, ಬಿಜೆಪಿ 22, ಜೆಡಿಎಸ್ 13, ಪಕ್ಷೇತರ 11 ಅಭ್ಯರ್ಥಿಗಳಿದ್ದಾರೆ. 22 ಮತಗಟ್ಟೆಗಲ್ಲಿ ಶಾಂತಿಯುತವಾಗಿ ಮತದಾನ ಪ್ರಕಿಯೆ ನಡೆಯುತ್ತಿದೆ.

English summary
Voting started in A total of fourteen local bodies, including Davanagere and Mangalore corporation elections,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X