ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯಲ್ಲಿ ಚುರುಕುಗೊಂಡ ಕಾರ್ಯಾಚರಣೆ; ಈ ತಿಂಗಳು ಪತ್ತೆಯಾದ ಗಾಂಜಾ ಪ್ರಕರಣವೆಷ್ಟು?

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಸೆಪ್ಟೆಂಬರ್ 18: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಸದ್ದು ಮಾಡುತ್ತಿದ್ದಂತೆ ರಾಜ್ಯಾದ್ಯಂತ ಗಾಂಜಾ ಪ್ರಕರಣಗಳ ಪತ್ತೆ ಕಾರ್ಯ ಚುರುಕುಗೊಂಡಿದೆ. ದಾವಣಗೆರೆ ಜಿಲ್ಲೆಯಲ್ಲಿಯೂ ಪೊಲೀಸರು ಡ್ರಗ್ ಜಾಲ ಪತ್ತೆಗೆ ಪಣ ತೊಟ್ಟಿದ್ದು, ಒಂದೊಂದೇ ಪ್ರಕರಣಗಳನ್ನು ಹೊರತೆಗೆಯುತ್ತಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ಆಗಸ್ಟ್‌ ಅಂತ್ಯದವರೆಗೆ ನಾಲ್ಕು ಪ್ರಕರಣ ಪತ್ತೆಯಾಗಿದ್ದರೆ, ಸೆಪ್ಟೆಂಬರ್‌ನಲ್ಲಿ ಈವರೆಗೆ 7 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ. ಕೃಷಿಕರು ಗಾಂಜಾವನ್ನು ಕಾನೂನುಬಾಹಿರವಾಗಿ ಜಮೀನಿನಲ್ಲಿ ಬೆಳೆಯುತ್ತಿದ್ದು, ಈಗ ಅವುಗಳ ಪತ್ತೆ ಕಾರ್ಯವೂ ಚುರುಕುಗೊಂಡಿದೆ. ಜಿಲ್ಲೆಯಲ್ಲಿ ಈ ತಿಂಗಳಲ್ಲಿ ಎಷ್ಟು ಗಾಂಜಾ ಪ್ರಕರಣ ಬೆಳಕಿಗೆ ಬಂದಿದೆ ಎಂಬ ಕುರಿತ ವರದಿ ಇಲ್ಲಿದೆ...

 ಜಿಲ್ಲೆಯ ವಿವಿಧೆಡೆ ಕಾರ್ಯಾಚರಣೆ

ಜಿಲ್ಲೆಯ ವಿವಿಧೆಡೆ ಕಾರ್ಯಾಚರಣೆ

ದಾವಣಗೆರೆ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಶಿರಮಗೊಂಡನಹಳ್ಳಿಯಲ್ಲಿ ಸೆ.1ರಂದು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಸಿಇಎನ್ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದರು. ಆತನಿಂದ 920 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದರು. ಸೆ.10ರಂದು ಚನ್ನಗಿರಿಯಲ್ಲಿ ಇನೊವಾ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಐವರನ್ನು ಚನ್ನಗಿರಿ ಪೊಲೀಸರು ಪತ್ತೆಹಚ್ಚಿ 5 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದರು. ವಿಜಯವಾಡದಿಂದ ಗಾಂಜಾ ತಂದಿದ್ದು ಗೊತ್ತಾಗಿತ್ತು. ಸೆ.12ರಂದು ಹರಿಹರ ಪೊಲೀಸರು ಹನಗವಾಡಿಯಲ್ಲಿ ಮೂವರನ್ನು ಬಂಧಿಸಿ 4 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದರು.

ಕೊಡಗಿನಲ್ಲಿ ಮೂಗಿಗೆ ಬಡಿಯುತ್ತಿದೆ ಗಾಂಜಾ ಕಮಟು ವಾಸನೆ; ಎಲ್ಲಿದರ ಮೂಲ?ಕೊಡಗಿನಲ್ಲಿ ಮೂಗಿಗೆ ಬಡಿಯುತ್ತಿದೆ ಗಾಂಜಾ ಕಮಟು ವಾಸನೆ; ಎಲ್ಲಿದರ ಮೂಲ?

 ಬೆಳಕಿಗೆ ಬರುತ್ತಿರುವ ಗಾಂಜಾ ಪ್ರಕರಣಗಳು

ಬೆಳಕಿಗೆ ಬರುತ್ತಿರುವ ಗಾಂಜಾ ಪ್ರಕರಣಗಳು

ಚನ್ನಗಿರಿ ತಾಲ್ಲೂಕಿನ ಗೆದ್ದಲಹಟ್ಟಿ ಗ್ರಾಮದಲ್ಲಿ ಬೆಳೆದಿದ್ದ 10 ಕೆ.ಜಿ. ಗಾಂಜಾ ಸೆ.14ರಂದು ಪತ್ತೆಯಾಗಿತ್ತು. ಒಬ್ಬನನ್ನು ಸಂತೇಬೆನ್ನೂರು ಪೊಲೀಸರು ಬಂಧಿಸಿದ್ದರು. ಸಿಇಎನ್ ಪೊಲೀಸರು ಸೆ.15ರಂದು ದೇವರಾಜ ಅರಸು ಬಡಾವಣೆಯಲ್ಲಿ 310 ಗ್ರಾಂ ಗಾಂಜಾ ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಸೆ. 16ರಂದು ಬನಸಿರಿ ಬಡಾವಣೆಯಲ್ಲಿ ಇಬ್ಬರನ್ನು ಬಂಧಿಸಿ 280 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದರು. ಕೆಟಿಜೆ ನಗರ ಪೊಲೀಸರು ಭೂಮಿಕಾನಗರದಲ್ಲಿ 282 ಗ್ರಾಂ ಗಾಂಜಾ ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಿದ್ದರು.

 ಸೆಪ್ಟೆಂಬರ್ ನಲ್ಲಿ ವಶಪಡಿಸಿಕೊಂಡ ಗಾಂಜಾ ಎಷ್ಟು?

ಸೆಪ್ಟೆಂಬರ್ ನಲ್ಲಿ ವಶಪಡಿಸಿಕೊಂಡ ಗಾಂಜಾ ಎಷ್ಟು?

ಜಿಲ್ಲೆಯಲ್ಲಿ ಸೆಪ್ಟೆಂಬರ್‌ 1ರಿಂದ 16ರವರೆಗೆ 21.212 ಕೆ.ಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸುಮಾರು 20 ಮಂದಿಯನ್ನು ಬಂಧಿಸಿದ್ದಾರೆ. ಸಿನಿಮಾರಂಗದ ಕೆಲವರು ಡ್ರಗ್ಸ್ ಮಾರಾಟದ ಆರೋಪದಲ್ಲಿ ಸಿಕ್ಕಿಬಿದ್ದಿದ್ದಕ್ಕೂ ಇದಕ್ಕೂ ಸಂಬಂಧವಿಲ್ಲ. ಗೃಹ ಸಚಿವರು ದಾವಣಗೆರೆಗೆ ಭೇಟಿ ನೀಡಿದ್ದ ಸಂದರ್ಭ ಮಾದಕ ದ್ರವ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಬಳಿಕ ಡಿಜಿ ಅವರು ಎಲ್ಲ ಜಿಲ್ಲೆಗಳಿಗೆ ಇದೇ ಸೂಚನೆ ನೀಡಿದ್ದರು. ಅದರಂತೆ ನಾವು ಕಾರ್ಯನಿರ್ವಹಿಸುತ್ತಿದ್ದೇವೆ' ಎಂದು ಹೇಳಿದರು ಎಸ್ ಪಿ.

ಜೆಲ್ಲಿ ರೂಪದಲ್ಲಿ ಬೆಂಗಳೂರಲ್ಲಿ ಡ್ರಗ್ಸ್ ಮಾರಾಟ; ಇಬ್ಬರ ಬಂಧನಜೆಲ್ಲಿ ರೂಪದಲ್ಲಿ ಬೆಂಗಳೂರಲ್ಲಿ ಡ್ರಗ್ಸ್ ಮಾರಾಟ; ಇಬ್ಬರ ಬಂಧನ

Recommended Video

Pulwama ಮಾದರಿಯ ಮತ್ತೊಂದು ದುರಂತವನ್ನು ತಪ್ಪಿಸಿದ ಭಾರತೀಯ ಸೇನೆ | Oneindia Kannada
 ಮಾದಕವಸ್ತು ಪತ್ತೆಗೆ ತಂಡ ರಚನೆ

ಮಾದಕವಸ್ತು ಪತ್ತೆಗೆ ತಂಡ ರಚನೆ

ಕೊರೊನಾ ಬಂದಿರುವುದರಿಂದ ಬಹುತೇಕ ವಿದ್ಯಾರ್ಥಿಗಳು ಅವರವರ ಮನೆ ಸೇರಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳಿಗೆ ಸರಬರಾಜು ಆಗುತ್ತಿದೆ ಎಂಬುದು ಸರಿಯಲ್ಲ. ಗಾಂಜಾ ಚಟ ಹೊಂದಿರುವವರಿಗೆ ಇದು ಹೋಗುತ್ತಿದೆ. ಅಂಥವರನ್ನೇ ಪತ್ತೆಹಚ್ಚಿದಾಗ ಸರಬರಾಜಿನ ಮೂಲ ಗೊತ್ತಾಗುತ್ತದೆ ಎಂದು ಮಾಹಿತಿ ನೀಡಿದರು. ಮಾದಕ ದ್ರವ್ಯ ಪತ್ತೆಗೆ ಹೆಚ್ಚು ಒತ್ತು ನೀಡಿದ್ದೇವೆ. ಅದಕ್ಕಾಗಿ ತಂಡ ರಚಿಸಿಕೊಂಡು ಜಿಲ್ಲೆಯಲ್ಲಿ ಕಾರ್ಯಾಚರಣೆ ಮಾಡುತ್ತಿದ್ದೇವೆ ಎಂದರು.

English summary
Davanagere police have started operation against drug trafficking in district and bringing out several cases
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X