ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫಿನಾಯಿಲ್ ಮಾರುವ ನೆಪದಲ್ಲಿ ದರೋಡೆ; ದಾವಣಗೆರೆ ಪೊಲೀಸರಿಂದ ಅಲರ್ಟ್

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಆಗಸ್ಟ್‌ 4: ಫಿನಾಯಿಲ್ ದ್ರಾವಣ ಮಾರಾಟ ಮಾಡುವ ನೆಪದಲ್ಲಿ ಸಂಶಯಾಸ್ಪದ ಅಪರಿಚಿತ ಮಹಿಳೆಯರು ಮನೆ ಸಮೀಪ ಅಥವಾ ಓಣಿಗಳಲ್ಲಿ ಕಂಡು ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಪೂರ್ವಾಪರ ತಿಳಿದುಕೊಳ್ಳದೇ ಅಪರಿಚಿತರೊಂದಿಗೆ ವ್ಯವಹರಿಸಬಾರದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹನುಮಂತರಾಯ ಅವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿಗೆ ವಿಜಯಪುರ ಜಿಲ್ಲೆ ಗೋಲಗುಂಬಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆ.2ರಂದು ಮಧ್ಯಾಹ್ನ ಸುಮಾರು 30 ವರ್ಷದೊಳಗಿನ 6 ಅಪರಿಚಿತ ಮಹಿಳೆಯರು ಫಿನಾಯಿಲ್ ಮಾರುವ ನೆಪದಲ್ಲಿ ಮನೆಗಳಿಗೆ ಹೋಗಿ, ಮನೆಯಲ್ಲಿರುವವರಿಗೆ ಫಿನಾಯಿಲ್ ಎಂದು ಯಾವುದೋ ದ್ರಾವಣದ ವಾಸನೆ ತೋರಿಸಿದ್ದಾರೆ. ಫಿನಾಯಿಲ್ ವಾಸನೆ ತೆಗೆದುಕೊಂಡಾಕ್ಷಣ ಮನೆಯವರು ಮೂರ್ಛೆ ಹೋಗಿದ್ದಾರೆ. ನಂತರ ಮನೆಯೊಳಗೂ ಪ್ರವೇಶ ಮಾಡಿ ಅಲ್ಲಿರುವವರಿಗೂ ಮೂರ್ಛೆ ಹೋಗುವ ದ್ರಾವಣ ಸಿಂಪಡಿಸಿ ಮನೆಯಲ್ಲಿದ್ದ ಸುಮಾರು 4 ತೊಲೆಯಷ್ಟು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.

Davangere Police Informed People To Be Alert Of Robbery By Women Gang

 ಬೀಗ ಹಾಕಿರುತ್ತಿದ್ದ ಮನೆಗೆ ಕನ್ನ; 25 ಲಕ್ಷ ಮೌಲ್ಯದ ಚಿನ್ನಾಭರಣ ವಶ ಬೀಗ ಹಾಕಿರುತ್ತಿದ್ದ ಮನೆಗೆ ಕನ್ನ; 25 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಹೀಗಾಗಿ ದಾವಣಗೆರೆ ಜಿಲ್ಲೆಯ ಜನರು ಅಪರಿಚಿತ ವ್ಯಕ್ತಿಗಳು ಫಿನಾಯಿಲ್ ಹಾಗೂ ಇನ್ನಿತರ ದ್ರಾವಣ ಮಾರಾಟ ಮಾಡಲು ಬಂದಾಗ ವಾಸನೆ ತೆಗೆದುಕೊಳ್ಳದೇ ಎಚ್ಚರಿಕೆಯಿಂದ ಇರಬೇಕು. ಓಣಿಗಳಲ್ಲಿ ವಾಸನೆ ತೋರಿಸುವಂತಹ ಯಾವುದೇ ದ್ರಾವಣ ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಕಂಟ್ರೋಲ್ ರೂಂ 08192-253100/100, 9480803200ಗೆ ಮಾಹಿತಿ ನೀಡುವುದರ ಜೊತೆಗೆ ಜಾಗ್ರತಿಯಿಂದಿರಬೇಕು ಎಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

English summary
Davangere police have informed people to be alert as a gang of women involved in robbery in the name of selling phenol
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X