• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಾವಣಗೆರೆ: ಟೋಪಿ ಬೆವರಿನ ವಾಸನೆಯಿಂದ ಕೊಲೆಗಾರನ ಪತ್ತೆ ಮಾಡಿದ ಶ್ವಾನ

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಜುಲೈ 17: ಕೊಲೆಯಾದ ವ್ಯಕ್ತಿ ಹಾಕಿದ ಟೋಪಿ ಬೆವರಿನ ವಾಸನೆ ಮೂಲಕ ಕೊಲೆ ಮಾಡಿದ ಆರೋಪಿಯನ್ನು "ತುಂಗಾ' ಎಂಬ ಹೆಸರಿನ ಶ್ವಾನ ಪತ್ತೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

ಇತ್ತೀಚಿಗೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ಗುಡ್ಡದಲ್ಲಿ ಹಣದ ವಿಚಾರಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿ 18 ಅಡಿ ಕೆಳಗೆ ಎಸೆದು ಕೊಲೆಗಾರರು ಪರಾರಿಯಾಗಿದ್ದರು.

ಕೊರೊನಾ ವೈರಸ್ ಸೋಂಕಿಗೆ ಹೊನ್ನಾಳಿ ಮಠಾಧೀಶ ವಿಶ್ವಾರಾಧ್ಯ ಸ್ವಾಮೀಜಿ ಸಾವು

ಈ ಕೊಲೆ ಪ್ರಕರಣ ಬೆನ್ನತ್ತಿದ್ದ ಬಸವಾಪಟ್ಟಣ ಪೊಲೀಸ್ ಠಾಣೆ ಅಧಿಕಾರಿಗಳು ವಿವಿಧ ಮಾರ್ಗಗಳಿಂದ ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಕೊಲೆಯಾದ ದಿನವೇ ರಾತ್ರಿ 8.30 ಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ತಂಡ ರಚಿಸಿ, ಆರೋಪಿ ಪತ್ತೆ ಹಚ್ಚುವಲ್ಲಿ ಎಕ್ಸ್‌ಪರ್ಟ್ ಆಗಿರುವ ತುಂಗಾ ಹೆಸರಿನ ಶ್ವಾನದ ಮೂಲಕ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಶ್ವಾನ ತುಂಗಾದ ಮೂಲಕ ಆರೋಪಿ ಪತ್ತೆಗೆ ಮುಂದಾದಾಗ ಮೃತ ವ್ಯಕ್ತಿ ಚಂದ್ರನಾಯ್ಕ್ ಧರಿಸಿದ ಟೋಪಿಯ ವಾಸನೆ ಮೂಲಕ ಕೊಲೆಯಾದ ಸ್ಥಳದಿಂದ 11 ಕಿ.ಮೀ ದೂರದಲ್ಲಿರುವ ಕಾಶಿಪುರ ಗ್ರಾಮದಲ್ಲಿ ಕೊಲೆ ಆರೋಪಿಯನ್ನು ಪತ್ತೆ ಮಾಡಿದೆ.

5 ವರ್ಷ ಪ್ರೀತಿ ಮಾಡಿ ಕೈ ಕೊಟ್ಟ ಪ್ರಿಯಕರ: ಯುವತಿಯ ಪ್ರತಿಭಟನೆ

ಆರೋಪಿತರು ಕೊಲೆ ಮಾಡುವುದಕ್ಕೂ ಮೊದಲು ಸುತ್ತಾಡಿದ ಹೊಸೂರು ಚಾನಲ್, ಕೆರೆಬಿಳಚಿ, ಸೋಮ್ಲಾಪುರ ತಾಂಡದ ಮದ್ಯದಂಗಡಿ ಮತ್ತಿತರೆಡೆಗಳಲ್ಲಿ ಶ್ವಾನ ತುಂಗಾ ಕಾರ್ಯಾಚರಣೆ ನಡೆಸಿದ್ದು, ನಂತರ ಆರೋಪಿ ಕೊಲೆ ಮಾಡುವುದಕ್ಕೂ ಮೊದಲು ಊಟ ಸೇವಿಸಿದ್ದ ಕಾಶಿಪುರ ಗ್ರಾಮಕ್ಕೆ ತೆರಳಿ ಆರೋಪಿಯನ್ನು ಪತ್ತೆ ಮಾಡಿದೆ.

ತುಂಗಾ ಕ್ರೈಂ ಡಾಗ್ ವಿಶೇಷ:

ತುಂಗಾ ಹೆಸರಿನ 9 ವರ್ಷದ ಶ್ವಾನವು ಡಾಬರ್ ಜಾತಿಯ ಹೆಣ್ಣು ನಾಯಿ. ಈ ಶ್ವಾನ ಇಲ್ಲಿಯವರೆಗೆ 75ಕ್ಕೂ ಹೆಚ್ಚು ಕ್ರೈಂ ಪ್ರಕರಣಗಳನ್ನು ಪತ್ತೆ ಮಾಡಿದೆ. ಇದು 30 ಕಳವು ಪ್ರಕರಣ, 35 ಕೊಲೆ ಪ್ರಕರಣಗಳನ್ನು ಪತ್ತೆ ಹಚ್ಚಿದೆ.

ಜಿಲ್ಲಾ ಕ್ರೈಂ ವಿಭಾಗದಲ್ಲಿ ನಾಲ್ಕು ನಾಯಿಗಳಿವೆ. ಅದರಲ್ಲಿ 9 ವರ್ಷದ ತುಂಗಾ, 8 ವರ್ಷದ ಪೂಜಾ, 3 ವರ್ಷದ ಸಿಂಧು ಹಾಗೂ ಎರಡು ವರ್ಷದ ಸೌಮ್ಯ ಇದ್ದಾರೆ. ಈ ನಾಲ್ಕು ನಾಯಿಗಳಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ಪತ್ತೆ ಹಚ್ಚಿರುವುದು ತುಂಗಾ. ಈ ಹಿಂದೆ ನಡೆದ ಹೊನ್ನಾಳಿ ಕೊಲೆ ಪ್ರಕರಣ, ಚನ್ನಗಿರಿಯಲ್ಲಿ ಕೊಲೆ ಮಾಡಿ ಬಾತ್ ರೂಂನಲ್ಲಿಟ್ಟ ಪ್ರಕರಣ, ಹರಿಹರ ಮತ್ತು ಹರಪನಹಳ್ಳಿ ನಡೆದ ರೇಪ್ ಕೇಸ್ ಪ್ರಕರಣವನ್ನು ಪತ್ತೆ ಮಾಡಿದೆ.

English summary
A Police dog named Tunga has Discovered Killer Through Smell Of Cap Sweat In Kashipura Village, Davanagere District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X