ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

10 ದಿನವಾದರೂ ಪಾಕ್ ಪರ ಪೋಸ್ಟ್ ಹಾಕಿದ್ದ ಪೇದೆಯನ್ನು ಬಂಧಿಸದ ಪೊಲೀಸರು

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಸೆಪ್ಟೆಂಬರ್ 1: ಪಾಕಿಸ್ತಾನ ಪರ ಪೋಸ್ಟ್ ಹಂಚಿಕೊಂಡಿದ್ದ ಪೊಲೀಸ್ ಪೇದೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆ ಡಿವೈಎಸ್ಪಿ ಗ್ರೇಡ್ ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ವಹಿಸಲಾಗಿತ್ತು. ಆದರೆ ಹತ್ತು ದಿನವಾದರೂ ಪೊಲೀಸರು ಪೇದೆಯನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ.

Recommended Video

1000 ಚದರ ಕಿಲೋಮೀಟರ್ Indiaದ ಗಡಿಯನ್ನು ಆಕ್ರಮಿಸಿಕೊಂಡ China | Oneindia Kannada

ದಾವಣಗೆರೆಯ ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಪಾಕಿಸ್ತಾನದ ಪೇಜ್ ಹಂಚಿಕೊಂಡಿದ್ದರು. 2008ರ ಪೊಲೀಸ್ ಬ್ಯಾಚ್ ವಾಟ್ಸಪ್ ಗ್ರೂಪ್ ನಲ್ಲಿಯೂ ಸನಾವುಲ್ಲಾ ಅವರು ಶೇರ್ ಮಾಡಿದ್ದರು.

ದಾವಣಗೆರೆ ಪೊಲೀಸ್ ಇಲಾಖೆಯಲ್ಲೊಬ್ಬ ಪಾಕಿಸ್ತಾನ ಪ್ರೇಮಿ!ದಾವಣಗೆರೆ ಪೊಲೀಸ್ ಇಲಾಖೆಯಲ್ಲೊಬ್ಬ ಪಾಕಿಸ್ತಾನ ಪ್ರೇಮಿ!

ದೇಶದ್ರೋಹದ ಕೇಸ್ ಹಾಕಿ ಸೇವೆಯಿಂದ ಅಮಾನತು ಮಾಡಬೇಕೆಂದು ಹಿಂದೂಪರ ಸಂಘಟನೆಗಳು ಒತ್ತಾಯಿಸಿದ್ದರು. ಪೊಲೀಸರು ಹತ್ತು ದಿನವಾದರೂ ಕಾನ್‍ಸ್ಟೆಬಲ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಈವರೆಗೆ ಅವರು ಪತ್ತೆಯಾಗಿಲ್ಲ.

Police Constable Shares Pro Pakistan Posts In Whatsapp Group In Davanagere Case: Cop Still Not Arrested

ಆಗಸ್ಟ್ 20 ರಂದು ಪ್ರಕರಣ ಬಯಲಿಗೆ ಬಂದಿತ್ತು. ಇಷ್ಟು ದಿನವಾದರೂ ಕಾನ್‍ಸ್ಟೆಬಲ್ ಸನಾವುಲ್ಲಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಪ್ರಕರಣ ಬಯಲಿಗೆ ಬಂದ ನಂತರ ಸನಾವುಲ್ಲಾ ತಲೆಮರೆಸಿಕೊಂಡಿದ್ದಾರೆ.

Police Constable Shares Pro Pakistan Posts In Whatsapp Group In Davanagere Case: Cop Still Not Arrested

ಡಿವೈಎಸ್ಪಿ ಗ್ರೇಡ್ ಅಧಿಕಾರಿಗಳ ತಂಡದಿಂದ ತನಿಖೆ ನಡೆಸಲು ದಾವಣಗೆರೆ ಜಿಲ್ಲಾಧಿಕಾರಿ ಹನುಮಂತರಾಯ ಆದೇಶಿಸಿದ್ದರು, ಆದರೆ ಇದುವರೆಗೆ ಯಾವುದೇ ಮಾಹಿತಿ ಪತ್ತೆಯಾಗಿಲ್ಲ.

English summary
10 Days Back The Davanagere Police Constable shared by a pro-Pakistan Post could not be trace till today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X