ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿನಿಮಾ ಕಥೆಯಂತಿದೆ ದಾವಣಗೆರೆ ಪೊಲೀಸರ ಈ ಕಾರ್ಯಾಚರಣೆ!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ನವೆಂಬರ್ 24; ಇದು ಥೇಟ್ ಸಿನಿಮಾ ರೀತಿಯಲ್ಲಿ ಬೆನ್ನಟ್ಟಿ ಆರೋಪಿಗಳನ್ನು ಹಿಡಿದ ಸ್ಟೋರಿ‌.‌ ದರೋಡೆ ಮಾಡಿ ಎಸ್ಕೇಪ್ ಆಗುತ್ತಿದ್ದ 7 ದರೋಡೆಕೋರರನ್ನು ದಾವಣಗೆರೆ ಜಿಲ್ಲೆಯ ಚನ್ನಗಿರಿ ಹಾಗೂ ಸಂತೇಬೆನ್ನೂರು ಪೊಲೀಸರು ಹಿಡಿದಿದ್ದೇ ರೋಚಕ.

ಈ ಘಟನೆ ನಡೆದಿರುವುದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಕುದುರೆ ಗ್ರಾಮದಲ್ಲಿ‌. ದರೋಡೆ ಮಾಡಿದ ಒಂದೇ ಗಂಟೆಯಲ್ಲಿ ಆರೋಪಿಗಳ ಹೆಡೆಮುರಿಯನ್ನು ಪೊಲೀಸರು ಕಟ್ಟಿದ್ದಾರೆ. ಬಂಧಿತರಿಂದ ಸುಮಾರು 80 ಸಾವಿರ ರೂಪಾಯಿ ಮೌಲ್ಯದ 15 ಗ್ರಾಂ ತೂಕದ ಬಂಗಾರದ ಸರ ಹಾಗೂ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕ್ರೂಸರ್ ವಾಹನ, ಮೂರು ಲಾಂಗ್ ಹಾಗೂ ಮೂರು ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದಾರೆ‌.

ಶಾಸ್ತ್ರ ಕೇಳಿ ದರೋಡೆ ಮಾಡುತ್ತಿದ್ದ ಓಜಿ ಕುಪ್ಪಂ ಗ್ಯಾಂಗ್ ಸೆರೆ! ಶಾಸ್ತ್ರ ಕೇಳಿ ದರೋಡೆ ಮಾಡುತ್ತಿದ್ದ ಓಜಿ ಕುಪ್ಪಂ ಗ್ಯಾಂಗ್ ಸೆರೆ!

ಶ್ರೀಗೌರಸಂದ್ರದ ಮಾರಮ್ಮ ದೇವಸ್ಥಾನಕ್ಕೆ ನಲ್ಕುದುರೆ ಗ್ರಾಮದ ರೂಪಾ ಎಂಬುವವರು ಹೋಗಿ ಪೂಜೆ ಸಲ್ಲಿಸಿ ವಾಪಸ್ ಬರುವಾಗ ಹಿಂಬದಿಯಿಂದ ದಾಳಿ ನಡೆಸಿದ 8 ಜನರು ಚಾಕು ತೋರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದರು.

ಪಿಎಸ್ಐ ದರೋಡೆ ಮಾಡಲು ಯತ್ನಿಸಿದ ಮೂವರು ಸೆರೆ ಪಿಎಸ್ಐ ದರೋಡೆ ಮಾಡಲು ಯತ್ನಿಸಿದ ಮೂವರು ಸೆರೆ

Police Arrested 7 Robbers Gang In One Hour

ದೇವಸ್ಥಾನದ ಸಮೀಪದಲ್ಲಿಯೇ ಬಿಳಿ ಬಣ್ಣದ ಕ್ರೂಜರ್ ವಾಹನ ನಿಲ್ಲಿಸಿದ್ದ ದರೋಡೆಕೋರರು ರೂಪಾ ಅವರು ದೇವಾಸ್ಥಾನದಿಂದ ಸ್ವಲ್ಪ ದೂರ ಬರುತ್ತಿದ್ದಂತೆ ಅಟ್ಯಾಕ್ ಮಾಡಿದ್ದರು. ಈ ವೇಳೆ ಪತ್ನಿ ನೆರವಿಗೆ ಬಂದ ಯತೀಶ್ ಮೇಲೂ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದರು‌.

ಲಾಂಗ್ ತೋರಿಸಿ ಪೆಟ್ರೋಲ್ ಬಂಕ್ ನಲ್ಲಿ ದರೋಡೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಲಾಂಗ್ ತೋರಿಸಿ ಪೆಟ್ರೋಲ್ ಬಂಕ್ ನಲ್ಲಿ ದರೋಡೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹಲ್ಲೆಗೊಳಗಾದ ಯತೀಶ್ ಕಾರನ್ನು ಬೈಕ್ ಮೂಲಕ ಹಿಂಬಾಲಿಸಿಕೊಂಡು ಹೋಗುವಾಗ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ‌. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು 1 ಗಂಟೆ ಅವಧಿಯಲ್ಲಿ ದರೋಡೆಕೋರರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು‌.

ಚನ್ನಗಿರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಸಂತೋಷ್ ಮಾರ್ಗದರ್ಶನದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಮಧು, ಸಂತೇಬೆನ್ನೂರು ಪಿಎಸ್ಐ ಶಿವರುದ್ರಪ್ಪ ಎಸ್. ಮೇಟಿ ಹಾಗೂ ಸಂತೇಬೆನ್ನೂರು ಪೊಲೀಸ್ ಠಾಣೆಯ ಸಿಬ್ಬಂದಿಯಾದ ಓಂಕಾರಪ್ಪ, ಮೈಲಾರಪ್ಪ, ಹಮೀದ್, ಯೋಗೇಶ್, ರುದ್ರಪ್ಪ, ಅಶೋಕ್ ರೆಡ್ಡಿ, ಕೊಟ್ರೇಶ್, ಮಂಜುನಾಥ್, ಪ್ರಹ್ಲಾದ್, ಸಂತೋಷ್ ಮತ್ತಿತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ ಬಲಿ?; ಹೆರಿಗೆಗೆ ಬಂದ ಮಹಿಳೆ ಮೃತಪಟ್ಟ ಘಟನೆ ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕಮದೋಡ ಗ್ರಾಮದ 24 ವರ್ಷದ ಅನುಷಾ ಮೃತಪಟ್ಟವರು ಎಂದು ತಿಳಿದು ಬಂದಿದೆ.

ಒಂದು ವರ್ಷದ ಹಿಂದೆ ಕಮದೋಡದ ಸಂಜಯ್ ಎಂಬುವವರನ್ನ ಮದುವೆಯಾಗಿದ್ದ ಅನುಷಾ ಗರ್ಭಿಣಿಯಾಗಿದ್ದರು. ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಬರಲಾಗಿತ್ತು. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಕಾರಣ ಅನುಷಾ ಸಾವು ಕಂಡಿದ್ದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದಿರುವುದೇ ಕಾರಣ ಎಂದು ಮೃತಳ ಪತಿ, ಸಂಬಂಧಿಕರು, ಪೋಷಕರು ಆರೋಪಿಸಿದ್ದಾರೆ. ಆಕೆಯ ಹೊಟ್ಟೆಯಲ್ಲಿದ್ದ ಮಗು ಬದುಕಿದ್ದು, ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ತಮಗೆ ನ್ಯಾಯ ಕೊಡಿಸುವಂತೆ ಪೊಲೀಸರ ಎದುರು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರಲ್ಲದೇ, ಚಿಗಟೇರಿ ಜಿಲ್ಲಾಸ್ಪತ್ರೆಯ ಅವ್ಯವಸ್ಥೆಯ ವಿರುದ್ಧ ಕಿಡಿಕಾರಿದ್ದಾರೆ. ಕೆಲ ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಅನುಷಾ ಹಾಗೂ ಸಂಜಯ್ ಅನೋನ್ಯವಾಗಿದ್ದರು.

ತನ್ನ ಪತ್ನಿ ಉಳಿಸಿಕೊಳ್ಳಲು ಸಂಜಯ್ ನಡೆಸಿದ ಪ್ರಯತ್ನವೆಲ್ಲಾ ವಿಫಲವಾಗಿದೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಸಂಜಯ್ ಆರೋಪಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ, ತಹಶೀಲ್ದಾರ್ ಬರುವಂತೆ ಸಂಬಂಧಿಕರು ಪಟ್ಟು ಹಿಡಿದಿದ್ದರು. ಸೂಕ್ತ ಚಿಕಿತ್ಸೆ ನೀಡದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.

ದಾವಣಗೆರೆಯಲ್ಲಿ ಎಸಿಬಿ ದಾಳಿ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್. ಟಿ. ರುದ್ರೇಶಪ್ಪ ಮನೆ ಮೇಲೆ ಬೆಳ್ಳಂಬೆಳಗ್ಗೆ ಎಸಿಬಿ ದಾಳಿ ನಡೆದಿದೆ. ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಸಮೀಪದ ತಣಿಗೆರೆಯಲ್ಲಿರುವ ತೋಟದ ಮನೆ ಮೇಲೆ ದಾಳಿ ನಡೆದಿದೆ.

Recommended Video

ಸ್ವೀಡನ್ ಮೊದಲ ಮಹಿಳಾ ಪ್ರಧಾನಿ ಆದ ಕೆಲವೇ ಗಂಟೆಗಳಲ್ಲಿ ಆಂಡರ್ಸನ್ ರಾಜಿನಾಮೆ | Oneindia Kannada

ಗದಗ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್. ಟಿ. ರುದ್ರೇಶಪ್ಪ ಅವರು ಹೊಂದಿದ್ದಾರೆ ಎನ್ನಲಾದ ದಾವಣಗೆರೆ, ಶಿವಮೊಗ್ಗದ ಚಾಲುಕ್ಯ ನಗರದ 4ನೇ ತಿರುವಿನಲ್ಲಿರುವ ಮನೆ ಹಾಗೂ ಗದಗನ ಬಾಡಿಗೆ ಮನೆ ಮೇಲೂ ಏಕಕಾಲಕ್ಕೆ ದಾಳಿ ನಡೆದಿದೆ. ರುದ್ರೇಶನನ್ನು ಪಕ್ಕದಲ್ಲಿ ಕೂರಿಸಿಕೊಂಡು 8ಕ್ಕೂ ಅಧಿಕ ಸಿಬ್ಬಂದಿಗಳು ಕಡತಗಳು, ಕಂಪ್ಯೂಟರ್‌ನಲ್ಲಿ ಇರುವ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿ ಲಭಿಸಬೇಕಿದೆ.

English summary
Davanagere police arrested 7 members robbers gang in one hour of operation. Channagiri and Santhebennur police took part in operation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X