ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯಲ್ಲಿ ಕಿಸಾನ್ ಕಾಂಗ್ರೆಸ್ ಪ್ರತಿಭಟನೆ ; 30 ಪ್ರತಿಭಟನಾಕಾರರ ಬಂಧನ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಸೆಪ್ಟೆಂಬರ್ 28: ರೈತ ವಿರೋಧಿ ಕೇಂದ್ರ ಸರ್ಕಾರ ರೈತರಿಗೆ ಮಾರಕವಾದ ಕಾಯ್ದೆ ಜಾರಿಗೊಳಿಸಿದೆ ಎಂದು ನಗರದ ಅಂಬೇಡ್ಕರ್ ಸರ್ಕಲ್ ಬಳಿ ಟಯರ್ ‍ಗೆ ಬೆಂಕಿ ಹಚ್ಚಿ ರಾಜ್ಯ ಕಿಸಾನ್ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು. ಜಿಲ್ಲಾ ಪಂಚಾಯತ್ ಮುಂಭಾಗ ಪ್ರತಿಭಟನೆಯನ್ನು ಮುಂದುವರಿಸಿದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೊಳಿಸಿರುವ ರೈತ ವಿರೋಧಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ನಗರದ ವಿವಿಧ ಕಡೆ ಪ್ರತಿಭಟನೆ: ಅಂಬೇಡ್ಕರ್ ಸರ್ಕಲ್ ನಲ್ಲಿ ಟಯರ್ ‍ಗೆ ಬೆಂಕಿ ಹಚ್ಚಲು ರೈತ ಸಂಘಟನೆಗಳ ಮುಖಂಡರು ಮುಂದಾದಾಗ, ಪೊಲೀಸರು ತಡೆದರು. ಈ ವೇಳೆ ರೈತ ಮುಖಂಡರು ಮತ್ತು ಕೆಟಿಜೆ ನಗರ ಪಿಎಸ್ ‍ಐ ವೀರೇಶ್ ಅವರ ನಡುವೆ ವಾಗ್ವಾದ ನಡೆಯಿತು.

ಕರ್ನಾಟಕ ಬಂದ್; ಕತ್ತೆ ಏರಿ ಬಂದ ವಾಟಾಳ್ ಪೊಲೀಸರ ವಶಕ್ಕೆ! ಕರ್ನಾಟಕ ಬಂದ್; ಕತ್ತೆ ಏರಿ ಬಂದ ವಾಟಾಳ್ ಪೊಲೀಸರ ವಶಕ್ಕೆ!

ಹಸಿರು ಸೇನೆ ಹಾಗೂ ರೈತ ಸೇನೆ ಸಂಘದ ಹುಚ್ಚವನಹಳ್ಳಿ ಮಂಜುನಾಥ್ ಬಣದಿಂದ ನಗರದ ಗುಂಡಿ ಸರ್ಕಲ್ ಬಳಿ ರೈತರು ಬಾಯಿ ಬಾಯಿ ಬಡಿದುಕೊಂಡು ತಮ್ಮ ಅಳಲು ವ್ಯಕ್ತಪಡಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಮತ್ತೊಂದು ಕಡೆ ತರಕಾರಿ ನಗರದ ಕೆಎಸ್ ‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ಇರುವ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರ ಚೀಲಗಳನ್ನು ಕಸಿದುಕೊಂಡು ವ್ಯಾಪಾರ ಮಾಡದಂತೆ ತಡೆದರು. ಈ ವೇಳೆ ಮಾರುಕಟ್ಟೆ ವ್ಯಾಪಾರಸ್ಥರು ಮತ್ತು ರೈತರ ಮಧ್ಯೆ ವಾಗ್ವಾದ ನಡೆಯಿತು.

Police Arrested 30 People In Protest At Davanagere

ನಗರದ ಬಸ್ ನಿಲ್ದಾಣದ ಎದುರು ಹಸಿರು ಸೇನೆ ರಾಜ್ಯ ರೈತ ಸಂಘದ ಸದಸ್ಯರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾವ ಚಿತ್ರಕ್ಕೆ ಚಪ್ಪಲಿ ಹಾರಹಾಕಿ ಅವರ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

Recommended Video

ಕರ್ನಾಟಕ ಬಂದ್ ಕಾವು ಜೋರಾಗಿದೆ | Oneindia Kannada

30 ಪ್ರತಿಭಟನಾಕಾರರ ಬಂಧನ: ರಾಷ್ಟ್ರೀಯ ಹೆದ್ದಾರಿಯಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಲು ಮುಂದಾಗಿದ್ದ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು ವಿ ಶಿವಗಂಗಾ ಸೇರಿದಂತೆ 30ಕ್ಕೂ ಅಧಿಕ ಪ್ರತಿಭಟನಾಕಾರರನ್ನು ವಿದ್ಯಾನಗರ ಪೊಲೀಸರು ಬಂಧಿಸಿ ಠಾಣೆಗೆ ಕರೆದುಕೊಂಡು ಹೋದರು.

English summary
State Kisan Congress members staged a protest near Ambedkar Circle in the davanagere, 30 people arrested by police,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X